ಸಂಸ್ಕಾರ
ಮಾಡಿ ನೋಡು ಅಹಂಕಾರದ ಸಂಹಾರ,
ಮರುಚಣವೇ ಉದ್ಭವಿಸುತ್ತದೆ ಸಂಸ್ಕಾರ.
'ಸಂಸ್ಕಾರ'ದಿಂದಲೇ 'ಅಹಂಕಾರ'ದ ಸಂಹಾರ...-
dharma eva hato hanti dharmo rakṣati rakṣitaḥ tasmād dharmo na ... read more
ಅವನು.. ಅವಳು.. ಪ್ರೇಮ..
ಅವಳಾದರೆ ಪ್ರೇಮ ಪುಸ್ತಕದ ಪರಿವಿಡಿ,
ನಾನಾಗುವೆ ಅವಳಿಗಾಗಿ ಮುನ್ನುಡಿ.
ಅವಳಾದರೆ ಪದಕೋಶದ ಸಹಚರಿ,
ಓದುವ ಹವ್ಯಾಸ ಇನ್ಮುಂದೆ ದಿನಚರಿ.
ಅವನಾದರೆ ಪ್ರೇಮದಡಗಿನ ನಾವಿಕ,
ನಾನಾಗುವೆ ದಾರಿ ತೋರುವ ದ್ಯೋತಕ.
ಅವನಾದರೆ ಹಣೆಯಲ್ಲಿ ಗೋಧೂಳಿ ರವಿಯು,
ಬಾಳಸಾಗರದಲೆಗಳಿಗೆ ಎಂದೆಂದೂ ಸುಖವು.
ಮನೆಯರಸಿ ಮನದರಸಿ ಗುಣಶೀಲೆ ಅವಳೇ ವಿಮಲ,
ಗುಣವಂತ ಸಿರಿವಂತ ಅವನ ಪ್ರೇಮವೆಂದೆಂದಿಗೂ ಅಚಲ.
ಪ್ರೇಮದೀಷಾರೆಯ ನೀಡಿದವಳದೋ ಹೃತ್ಕಮಲ,
ಬಾಳಸಖನಾಗಿ ಅವನಿರಲು ಜೊತೆಗೆ ಇರದಿರದು ತುಮುಲ...-
ಮಾನವೀಯತೆ...!
ಮನುಷ್ಯ ಇತರ ಮನುಷ್ಯರನ್ನು ಹಾಗೂ ಸಕಲ ಜೀವರಾಶಿಗಳನ್ನು ತನ್ನಲ್ಲಿ ಒಬ್ಬರೆಂದು ಮಾನವೀಯತೆಯಿಂದ ಕಂಡರೆ ಪ್ರಪಂಚ ಎಷ್ಟೋ ಸುಂದರಮಯ-
ಬಾ...
ಹಾರುವ ಹಕ್ಕಿಗಳ ನೋಡುವ ಬಾ
ಚಿಲಿಪಿಲಿ ನಾದಕ್ಕೆ ಕುಣಿಯುವ ಬಾ
ಬಾನಂಗಳದಾಚೆಗೆ ಹೋಗುವ ಬಾ
ನಾವೇ ಹಕ್ಕಿಗಳಾಗಿ ಹಾರಾಡುವ ಬಾ-
ದೇವರೇ...
ದೇವರೇ ಈ ಬದುಕು ನಿನ್ನಯ ಭಿಕ್ಷೆ.
ತಪ್ಪಿಗೆ ಅನುಭವಿಸಲೇಬೇಕು ಶಿಕ್ಷೆ.
ಬಂದಂತೆ ಬದುಕುವುದೇ ಧರ್ಮ.
ಇಲ್ಲವೇ ಕಾದು ಕುಳಿತಿರುವುದು ಕರ್ಮ.-
ಬದುಕಿನ ಸಾರ್ಥಕತೆ
ಬದುಕ- ಬಂದಂತೆ ಜೀವಿಸು.
ಎಲ್ಲರ ನಿಷ್ಕಲ್ಮಶದಿ ಪ್ರೀತಿಸು.
ಇಷ್ಟಿದ್ದರೆ ದ್ವೇಷ-ಆಕ್ರೋಷ ಇನ್ನೇತಕೆ?
ಖುಷಿಯಿಂದ ಜೀವಿಸಿದರೆ ಸಾರ್ಥಕವು ಬದುಕೇ..-
ಸಗ್ಗನಾಡಿದು ಕರುನಾಡು
ಸಗ್ಗನಾಡಲ್ಲಿ ಜನಿಸಲು ನಾ ಮಾಡಿರುವೇ ಪುಣ್ಯ.
ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಕಂಗಳೇ ಧನ್ಯ.
-
'ಪುನೀತ'ರ ನೆನಪು
ಬೇಡವೆಂದರು ಕಾಡುತ್ತಿವೆ ನೆನಪುಗಳು ಬಹಳ.
ಮರಳಿ ಬಂದು ಈಡೇರಿಸಬಾರದೇ ಹೃದಯದ ಹಂಬಲ!?-
Two successes to be achieved in life
There are two successes to be achieved in life:
•The first one (which everyone needs it desperately and almost all achieve it) is to earn name, fame, and money- All comprises of getting settled.
•The second one and the most important one (which only few achieve but most fail to achieve) is to lead a peaceful, happy life by "being human".-
ಹಾಡು: ನಿಜವಾ ಇದು
ಚಲನಚಿತ್ರ: ಲವ್ ಲೆಟರ್
ಸಾಹಿತ್ಯ: ಚಿನ್ಮಯಿ
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಅರ್ಧಾಂಗಿಯಾಗಿ ಜೊತೆಯಲ್ಲೇ ಇದ್ದು ಕಡು ವಂಚಕಿಯಾದೆ.
ಕೈಹಿಡಿದು ನೀನು ಸಪ್ತಪದಿ ತುಳಿದು.
ಕೈಹಿಡಿದು ನೀನು ಸಪ್ತಪದಿ ತುಳಿದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಅಗ್ನಿಸಾಕ್ಷಿಯಾಗಿ ನನ್ನಿಂದೆ ಬಂದು.
ಬೆನ್ನಿಂದೆಯೇ ಪ್ರೀತಿ ಕೊಂದೆ ಇಂದು. ||೧||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ! ||ಅನು ಪ||
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ಒಳಗೊಂದು ವೇಷ ಹೊರಗೊಂದು ವೇಷ ಎಂತೆಂಥ ಮೋಸ.
ನಗುಮುಖದೀ ಮುಖವಾಡವ ಧರಿಸಿ.
ನಗುಮುಖದೀ ಮುಖವಾಡವ ಧರಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ನಟನೆಯಿಂದಲೇ ಅನುದಿನ ನಂಬಿಸಿ.
ಮನಃಶಾಂತಿಯ ಕೆಡಿಸಿ ದೂರಾದೆ ನೀ. ||೨||
ನಿಜವಾ ಇದು ಭ್ರಮೆಯ ಇದು ಆಶ್ಚರ್ಯದ ಭಾವ!
ಎದೆಕುಸುಮವೇ ಮುಳುವಾದರೆ ತಾಳಲಾರೆ ನೋವ. ||ಪ||-