QUOTES ON #CHIKEY

#chikey quotes

Trending | Latest
31 AUG 2020 AT 22:11

मेरी हर चीख़ पर
उनकी वाह
निकलती है।

-


26 APR 2020 AT 9:10

ಸಾಂಗತ್ಯ ಬಯಸಲು ರೂಪವೇತಕೆ ರೂಪನೋಟಕೆ ಬಿದ್ದರೆ ಬದುಕು ಪ್ರಪಾತದೊಂದಿಗೆ ಪ್ರಘಾತ ಅರಿವಿರಲಿ ಗಂಜಿಕುಡಿದರು ಬಡತನವೆಂಬ ಸಿರಿಯೊಡಲಲಿ ಸುಖವುಂಟು.!

-


15 APR 2020 AT 11:14

ವಿಸ್ಮಯದ ಚಿಗುರು
ಬಾಂದಳದ ಉಸಿರು
ಉಸಿರುಸಿರಿಗೆ ಜೀವ ತುಂಬೋ
ಮಡಿಲು ಅದುವೆ ಅಮ್ಮನೊಡಲು
ನಿಸರ್ಗದತ್ತ ಕೊಡುಗೆ
ಅದುವೆ ಜನ್ಮತಂತುವಿನ ಸೊಬಗೆ
ತನ್ನೊಡಲೊಳು ನವಮಾಸ
ಹೊತ್ತು ಅನುಭವಿಸುವ
ನೋವು ನಲಿವಿನ ಸಂಪದ
ಸಪ್ತಸ್ವರ ಲಹರಿಯೊಳು
ಏರಿಳಿತದ ಚಿತ್ರಾವಳಿ ಅದುವೆ
ಗರ್ಭದೊಳು ಆಡುವ ಕಂದನ
ಪ್ರಭಾವಳಿಯ ಹರ್ಷೋದ್ಘಾರ
ಒಡಲೊಳಗೆ ಕಡಲಲೆಗಳ ಆರ್ಭಟ
ಹಸುಳೆಯ ಕಾಲೊದೆತದ ಸಂತಸದ ಆಟ
ಒಮ್ಮೊಮ್ಮೆ ಭಾವಶರಧಿಯ ಅಲೆಗಳಂತೆ
ಮೌನ ಮೆರವಣಿಗೆಯ ಸಾದರ
ಮುಗ್ದಮನದ ಆಟೋಟಗಳ ಬಿತ್ತರ
ದೈವಸ್ವರೂಪದ ಮಾತೆ ಆನಂದ
ಅದೆಂತ ನೋವುಗಳ ಸಹಿಸಿ ನೀಡುವಳು ಜನ್ಮ
ನಿಜಕ್ಕೂ ಇವಳು ಹೆಣ್ಣಲ್ಲ ದೇವತೆ
ಅದ್ವಿತೀಯ ದೈವ ಸ್ವರೂಪಿಣಿ
ಅವರ್ಣನೀಯ ಕಣ್ಮಣಿ
ಅಮೋಘ ಅನನ್ಯತೆಗೆ ಹೆಸರು
ಇವಲೊಡಲ ತೊಟ್ಟಿಲು
ಅದುವೆ ನವ ಜೀವದ ಬಾಳಿಗೆ ಮೆಟ್ಟಿಲು.!
ಅಭಿಜ್ಞಾ ಪಿ ಎಮ್ ಗೌಡ

-


6 APR 2020 AT 11:58

ಎನ್ನೆದೆಯ ಬಾಂದಳದಿ ನೆಮ್ಮದಿಯ ಸಾಮ್ರಾಜ್ಯವನು ನಿರ್ಮಿಸಿದವನು.!
ಸಾಮ್ರಾಜ್ಯದ ಸಿಂಹಾಸನದಿ ಜೀಕುವ ಪುಣ್ಯಸ್ಪರ್ಶಕ್ಕೂ ಮುನ್ನವೆ ಮಾಯವಾದನು.!

-


2 SEP 2020 AT 15:20

ಅವಳ ಕಾಗದದ ದೋಣಿಯ ತುಂಬ
ಅವಳೊಲವ ನೆನಪುಗಳ ಲಕೋಟೆ
ಕಾಯುತ ನೊಂದ ಮನದೊಡಲ ಬಿಂಬ
ನೀರಿನೊಳಗೆ ಸೆರೆಯಿಡಿದು ನಿಂತಿಹುದು||

ಮೌನದೆದೆಯೊಳಗೆ ಸಹಸ್ರ ನೋವಿನ ನರ್ತನ
ಕಾಣದಾಗಿದೆ ಪ್ರತಿರೂಪದ ಗಮನ
ದಾಳಿಯಿಟ್ಟಿವೆ ಅವನೊಲವ ನೆನೆಪಿನ ಗಾಯನ
ಬಿಕ್ಕಿದರು ಬಿಡುತಿಲ್ಲ ಕನಸಿನ ವಾಚನ||

ಅಂತಃಪಟಲದ ಮಹಲಿನಲಿ ಬರೆದ ಮುನ್ನುಡಿ
ಅನುರಾಗ ಮಾಲಿಕೆಯ ಚೇತನ
ನೆನಪಿನ ಕಾಣಿಕೆಯು ಕರೆಯುವ ಚಿನ್ನುಡಿ
ಆವಿರ್ಭವಿಸಿದೆ ಮನದಲಿ ಸೇಚನ....

-


26 APR 2020 AT 9:03

ಆಧುನಿಕತೆಯ ಭೂತ ಮೈಯೊಕ್ಕಿ ತಕಥೈ ಎನ್ನುತಿರಲು
ಪಾಪ ಬಾಲ ಮುದುರಿ ಕೂರುವ ವಯಸ್ಸು ಮನಸ್ಸು ಅದರದಾಗಿಲ್ಲ. ಅದರ ಆಲೋಚನಾಲಹರಿ ತರತರಹ ನರನಾಡಿಗಳಲ್ಲಿ ಹರಿಯುವಾಗ...!!

-


2 MAY AT 19:38

चीख़ _____________!!

जानते हो------!! तुम चीखों का क्या सिलसिला चल रहा होता है मेरी तन्हाई भरी जिंदगी में--!!

-


22 MAY 2020 AT 12:36

ಜಾರಿ ಹೋದ ಮನಕೆ ಮೌನದ ಆಸರೆಯ
ಬಯಸಲು ಮನಸ್ಸು ಜಾರಿಹೋಗಿದೆ
ಕನಸುಗಳ ಹಾದಿಗೆ..

-



ಗೆಳೆಯನ ಮದುವೆಯಲಿ
ಇವಳದೇ ನಗುವಿನ ರಂಗು...
ಮೋಹಕ ನಗೆದಿ ನಶೆ ಏರಿದೆ
ಇವಳ ನಗುವಿನ ಗುಂಗು...
ಮೊದಲನೇ ಬಾರಿಗೆ ಚಂಗುಳಿಟ್ಟಂತೆ
ಪ್ರೀತಿ ಪ್ರೇಮದಿ ಮೊಳಕೆ ಹೊಡೆದಿದೆ ಹೃದಯದಲ್ಲಿ ನಂಗು...

ವೈಭೋಗದಿ ಶೃಂಗಾರಗೊಂಡಿರುವಳು
ಸೃಷ್ಟಿಯ ಸೊಬಗು ನಾಚುವಂತೆ...
ಮುಡಿತುಂಬ ಮಲ್ಲಿಗೆ ಕೈತುಂಬಾ ಕೈಬಳೆ
ಹಣೆಯಲ್ಲಿ ಹುಬ್ಬುಗಳೇ ನಾಚುವಂತ ಸಿಂಧೂರದಿ
ಹಸಿರು ಸೀರೆ ಉಟ್ಟು ನಡೆದರೆ ದೇವತೆ...

ನಿಷ್ಕಲ್ಮಶ ನಗು, ಕರುಳಕುಡಿಯಂತೆ
ತೋರುವದಿ ಮಮತೆ ಅರೆಕ್ಷಣ ಸ್ವರ್ಗದಲ್ಲಿ ತೇಲಿದಂತೆ...
ನೇಸರ ಕೂಡ ಸೋತನಂತೆ ಇವಳ ಮಮತೆಗೆ
ಅವನಿಗೂ ಅವಳ ಮಡಿಲಲ್ಲಿ ಮಗುವಾಗುವ ಬಯಕೆಯಂತೆ...
Read Caption Below...👇👇👇👇
🌹🌹🌺🌺👇👇👇👇👇🌹🌹🌺🌺

-



ಹೇಳಬೇಕೆಂದಿರುವ ಮನದ ಮಾತುಗಳು ನೂರಾರುಕ್ಕು ಹೆಚ್ಚಿವೆ...
ಸಂದರ್ಭ ಸನ್ನಿವೇಶ, ಆ ಕ್ಷಣ ಗಳಿಗೆಗೆ ಎದುರು ನೋಡುತ್ತಿರುವೆ...
ನಿನ್ನ ಮೊದಲ ಕಿರುನೋಟದಿ ಹೃದಯ ಆಯಿತು ಲೂಟಿ..‌
ಮನಸುಗಳ ಮಿಲನಕ್ಕೆ ಸಾಕ್ಷಿಯಾಯಿತು ಮೊದಲ ಭೇಟಿ...

ಅವಳನ್ನು ನೆನೆದಾಗೆಲ್ಲ ಮನಸ್ಸು ಮುಸಿಮುಸಿ ನಗುತ್ತಿತ್ತು....
ಇಂದು ಅವಳ ವಿರಹದ ತಾಪಕ್ಕೆ ಹೃದಯ ಬಿಕ್ಕಿ-ಬಿಕ್ಕಿ ಅಳುತ್ತಿತ್ತು
ಸಂತೈಸಿ ಕೊಳ್ಳಲು ತೋರಿಕೆಗೆ ಮೊಗದಲ್ಲಿ ನಗೆ ತುಂಬಿತುಳುಕುತ್ತಿತ್ತು...

ಪ್ರೇಮದ ಓಲೆ, ನನ್ನೊಲವ ರಕ್ತದಿಂದ ಗೀಚಿ ಹೇಳಬೇಕೆಂದು,
ಪುಷ್ಪಗುಚ್ಛದೊಂದಿಗೆ ಎದುರು ನೋಡುತ್ತಿರುವೆ
ಅವಳ ಕಿರು ನೋಟಕ್ಕೆ ಅರೆಹುಚ್ಚನಂತೆ ಪ್ರೀತಿಯ ನಶೆಯಲ್ಲಿ ತೇಲುತ್ತಿರುವೆ

ಗೆಳೆಯ ನನ್ನ ಪ್ರೀತಿ ಅವಳಿಗೆ ಹೇಳದೆ ಒಂದು ವೇಳೆ ಮಡಿದರೆ
ಮುಕ್ತಿ ದೊರೆಯದೆ ಕಂಬನಿಯ ಕೋಡಿ ಹರಿಸುವುದು ಹೃದಯ

ಎನ್ನ ಸಮಾಧಿ ಮೇಲೆ, ಪುಷ್ಪಗುಚ್ಚ ಅರ್ಪಿಸಿ ಹೇಳಿ ಬಿಡು
ಒಂದೇ ಒಂದು ಸಾರಿ ನಾನು ನಿನ್ನನ್ನೇ ಪ್ರೀತಿಸುವೆ ಎಂದು
ಒಂದು ಹನಿ ಕಂಬನಿ ಮಿಡಿದು ಗೆಳತಿ
ನೆಮ್ಮದಿಯಿಂದ ಜೀವ ಬಿಟ್ಟು ಬಿಡುವೆ ನನ್ನ ಉಸಿರಿನ ಒಡತಿ
☛✍ಸಿದ್ದರಾಜಗುರು ಎಸ್ ವಡ್ನವರ ಹೆಸ್ಕಾಂ ಗದಗ☛✍

-