ನಿನ್ನ ಸ್ವಾಗತಿಸಲು ಸೂರ್ಯ ದೇವನೆ
ನಿಸರ್ಗವೇ ನಿಂತಿದೆ ಎಂಬ ಭಾವನೆ
ಚಿನ್ನದ ಬಣ್ಣದ ಹಕ್ಕಿಗಳು ಕೂಡಿ
ಭಿನ್ನ ವಿಭಿನ್ನ ಹಾಡುಗಳು ಹಾಡಿ
ಕಾನನ ಬಾನಿನ ತುಂಬ ಜಾರಿ
ಚಿತ್ತಾರದಿ ಸ್ವಾಗತಿಸಲು ಹಾರಿ ಹಾರಿವೆ
ರಂಗು ರಂಗಲಿ ಹೂಗಳೆಲ್ಲ ಒಗ್ಗೂಡಿ
ಗಂಧದ ಸುಗಂಧ ಎಲ್ಲೆಡೆಗೂ ಹರಡಿ
ತಂಗಾಳಿ ತುಂಬಾ ಸುಗಂಧ ಮೂಡಿ
ಆನಂದದಿ ಸ್ವಾಗತಿಸಲು ಹಠವ ಮಾಡಿವೆ
ಭೂಮಿಯ ಎಲ್ಲೆಡೆ ನೀರು ಚಿಮುಕಿಸಿ
ಬಾನಿನ ಎಲ್ಲೆಡೆಗೂ ಸ್ವರ್ಣವ ಅಂಟಿಸಿ
ನಗು ಮೊಗದ ಜಗದೊಡೆಯನ ಬಯಸಿ
ಇಳೆಯಲ್ಲಾ ಸ್ವಾಗತಿಸಲು ಸೇರಿ ನಿಂತಿವೆ-
🌷YQ ಕುಟುಂಬಕ್ಕೆ ಮತ್ತೊಮ್ಮೆ ಸ್ವಾಗತ ಶಿವು🌷
ನಮ್ಮ ಮನಸಿಗ್ಗೆ ಹತ್ತಿರವಾದುದು ಹಾಗೂ ನಾವು ತುಂಬಾ ಇಷ್ಟ ಪಡೋದನ್ನ ಕಳೆದುಕೊಂಡರೆ ಮನಸ್ಸಿಗೆ ತುಂಬಾನೇ ನೋವಾಗುತ್ತೆ ಎನ್ನುವುದನ್ನು ನಾನು ಅರಿತಿರುವೆ ಶಿವು, ಅದನ್ನು ಹಿಂತಿರುಗಿ ಪಡೆಯಲು ಸಾಧ್ಯವಿಲ್ಲದಿದ್ದಾಗ ಮತ್ತೆ ಹೊಸ ಪ್ರಯತ್ನದತ್ತ ಸಾಗಿ ಅದರಲ್ಲಿ ಸಂತೋಷ ಕಂಡುಕೊಳ್ಳಬೇಕು💞
ನೀನು ಮತ್ತೆ YQ ಗೆ ಬಂದದ್ದು ನನಗೆ ತುಂಬಾ ಖುಷಿಯಾಯಿತು.
ವಾರದಲ್ಲಿ ಎರಡೂ ಬಾರಿಯಾದ್ರು ನಾನು ನಿನ್ನ ಮೊದಲ profile ಗೆ visit ಕೊಟ್ಟಿರುವೆ ಯಾಕೆ ಬರೀತಿಲ್ಲ ಅಂತ.
ಎಲ್ಲಿ ಹೋದ ಕೆಲಸದ ಮಧ್ಯೆ ಬರಿಯೋಕೆ ಆಗಿಲ್ಲ ಅನಿಸುತ್ತೆ ಅಥವಾ ಯಾವುದಾದರೂ ಪರೀಕ್ಷೆಗೆ ಓದುತ್ತಿರಬಹುದು ಹೀಗೆ ಏನೇನೋ ಅಂದುಕೊಂಡು ಸುಮ್ಮನಾದೆ.
ನೀನು ಆಂಗ್ಲ ಶಿಕ್ಷಕನಾದ್ರು ಕನ್ನಡ ಬರಹದ ಮೇಲೆ ಹೆಚ್ಚು ಒಲವು ಹಾಗೂ ಪ್ರೀತಿ.
ಮೊದಲಿಗಿಂತ ಚನ್ನಾಗಿ ನೀನು ಮತ್ತೆ ಮತ್ತೆ ಬರೆಯುವೇ❣️.....
ಈ ನಿನ್ನ ಬರವಣಿಗೆ ಹೀಗೆ ಮುಂದುವರಿಯಲಿ.... ಇದು ನಿನ್ನ ಆತ್ಮೀಯ ಸ್ನೇಹಿತೆಯ ನಿಷ್ಕಲ್ಮಷ ಸ್ನೇಹ ಹಾಗೂ ಪ್ರೀತಿಯ ಪ್ರೋತ್ಸಾಹದ ಹಾರೈಕೆ💗💗
-
ಕೆಮ್ಮುಗಿಲ ಕಡಲೊಳಗೆ
ಕೆನ್ನೀರಿನ ಮಡಿಲೊಳಗೆ
ಹೊನ್ನ ಕಿರಣವ ಬೀರುತ
ಅರಳಿದ ಆದಿತ್ಯನ
ಪಸರಿಸುವ ಹೊಂಬೆಳಕಿನ
ಸ್ವಾಗತಕೆ ಇಬ್ಬನಿಯಾರತಿಯ
ಅಣಿಮಾಡಿ ನಿಂದಿಹಳು
ಈ ನಮ್ಮ ವಸುಮತಿಯು..
ಇನನ ಕಂಡ ಇಳೆಯಲಿ
ನಿತ್ಯ ಉತ್ಸವದ ಐಸಿರಿಯು..-
ಚಿಲಿಪಿಲಿ ನಾದ
ಮಂಗಳವಾದ್ಯದ ಜೊತೆಗೆ
ಮುಸುಕಿದ ಮಂಜಲಿ
ಮುತ್ತಂತೆ ಹೊಳೆವ
ಮಧುಮಗಳಂತೆ
ಆರಾಜಿತ ವಸುಧೆಯ
ದರ್ಶಿಸಲು
ನಸುಕಿನ ಪರದೆಯ
ಸರಿಸುತ
ಬೆಳಕಿನ ಪಂಜ ಪಿಡಿದು
ಬಂದನೀ ಪಿತ
ಕೆಂಗಿರಣ ಸೂಸುತ
ವಿಭಾವಸು ಪ್ರಭಾತ..
ಮಣ ಭಾರವ ತಾ ಹೊತ್ತು
ನಗುತಲಿ ಸಂತಸವನಿತ್ತು
ಸ್ವಾಗತಿಸಲು ನಿಂತಿರುವಳು ನೀರೆ
ತನುಜೆ ವಸುಂಧರೆ...-
ಕತ್ತಲು ಸೋಲುತಿದೆ
ನೀ ಜಗವ ಮುತ್ತಲು..
ಸಂಜೆಯಾಗುತ್ತಲೆ ಸತ್ತು
ಅದೇ ತೇಜಸ್ಸಿನಲಿ
ನೀ ಪುನರವತರಿಸಲು..
ನೀಲಿ ತುಂಬಿದ ಮೋಡಗಳು
ಕೆಂಪ್ಪಿಟ್ಟಿವೆ ತುಸು ನಾಚುತ್ತ..
ಸನಿಹ ಸರಿದ ನಿನ್ನ
ತದೇಕ ಚಿತ್ತದಿ ನೋಡುತ್ತ..
ಬೆರಗಾಗಿ ನೆರಗಿಗೆ
ಬೆಳ್ಳಕ್ಕಿ ಬಾನಿನಲಿ ಉಲಿದಿತ್ತು..
ಸಪ್ತ ಸ್ವರ ಮಿಲನಕೆ
ಓಂಕಾರ ನಾದವು ಮೊಳಗಿತ್ತು..
ಬಾಂದಳದ ಕಾಪುಗನ
ಮುಕ್ಕಟೆಯಲಿ ಸತ್ಕರಿಸಲು..
ಸಂತಸದಿ ಕಾದಿಹುದು
ಸಂಪ್ರೀತಿಯಿಂದ ತಿರೆಯ ಒಡಲು..-
ಮುಗಿಲ ಕಡಲಲಿ
ಕೆಂಪು ಕೆಂದಾರೆ ಕಮಲದ
ಮಿಸುನಿಯಾ ಮೊಗ್ಗೊಂದು
ಅರಳಿ ತಾ
ಹೊನ್ನ ಕಿರಣವ ಸೂಸಿ
ಬೆಳಕಿನೊಡೆಯನು ತಾನು
ತಮವನಳಿಸಿ ಬಂದಿಹೆನು
ಹರಸುತಲಿ ನಿಂದಿಹೆನೆನುತ
ನಭದ ತುಂಬಲಿ ತನ್ನ
ಹರಡುತ್ತ
ಮಿರುಗುವ ಮಯೂಖವನ್ನ
ವ್ಯಾಪಿಸಿಹನು
ಸರ್ವವ್ಯಾಪಿಯಾಗಿ
ಈ ಇಡೀ ಭೂ ಮಂಡಲವನ್ನ...-
ಸಾಗುವ ಸಮಯದಿ
ಕೊಂಚ ಸ್ಥಬ್ದವಾದಂತಿವೆ
ಸಾಲುಗಟ್ಟಿದ ಮೋಡಗಳು..
ರಂಗೇರಿದ ಮುಗಿಲೊಂದಿಗೆ ತಾವೂ
ಓಕುಳಿಯಾಡಲು ಹವಣಿಸಿದಂತಿವೆ
ನೀಲ್ಗಡಲ ತೆರೆಗಳು..
ಬೆಳ್ಳಕ್ಕಿ ಬಾನಿನಲಿ
ಹೊನ್ನ ಹೂವ ಸುರಿದು
ಹೊಳೆವ ದಿನಮಣಿಯ
ಸ್ವಾಗತಿಸಲು ಕಾಯುತ್ತ ನಿಂದಿವೆ..
ಮುಸುಕ ಸರಿಸುವ
ಮಿಹಿರನ ಮುದ್ದಿಸಲು
ಆಗಸದ ತೆವರಲರಳಿದ
ತರಣಿಯ ತಣಿಸಲು-
ಮೇಘರಾಜನ ಕದಪಿಗೆ
ರಂಗಿನೋಕುಳಿಯ ಹಚ್ಚಿ
ಕೆಂಪಾಗಿ ನಗುವ
ಕೆಂಗದಿರನಿಗೆ
ದೃಷ್ಟಿ ನೀವಳಿಸಲು...
ಅರಳಿ ನಿಂತ ನನ್ನ
ಚೆಲುವ ಚಂಗದಿರನನ್ನ
ಚೆಂದದಿ ಸ್ವಾಗತಿಸಲು...
ತಿರೆಗೆ ತರಣಿಯ ಕರೆಯಲು...
ತುಂಟ ತಗಾದೆ ತೆಗೆಯದೆ
ತರುಣಿಯರೆಲ್ಲ
ತ್ವರಿತವಾಗಿ ಬನ್ನಿ...
ಅರುಣವಾರಿಯ ತನ್ನಿ...
ಶುಭವ ಕೋರುವೆನೆನ್ನಿ...-