QUOTES ON #ಯೌವನ

#ಯೌವನ quotes

Trending | Latest
9 JAN 2019 AT 14:31

ಯೌವನದ ಹೊಸ್ತಿಲಿನಲ್ಲಿ
ಬಾಲ್ಯ ನನ್ನ ಸಂಧಿಸುವುದು
ಒಮ್ಮೆ ನನ್ನಮ್ಮನ ಮಡಿಲಿನಲ್ಲಿ
ಒಮ್ಮೊಮ್ಮೆ ನನ್ನವನ ತೋಳಿನಲ್ಲಿ

-



ಖಂಡ ಮಾಂಸ ತುಂಬಿದ ತೊಡೆಗೆ ಕೈ ಹಾಕುವ ಮುನ್ನ
ಎದೆಗಪ್ಪಿ ನೋವ ನೀಡುವ ಮುನ್ನ ನೆನೆಯೋ ಹೆತ್ತ ತಾಯಿಯನ್ನ

ಬರಿ ತೊಗಲಿನ ಹೊದಿಕೆಗೆ ಆಕರ್ಷಿತನಾಗಿ ಕಾಮದಲಿ ತೇಲುತಿರುವೆ
ನೋವ ನೀಡುತಾ ರಾಕ್ಷಸನಂತೆ ವರ್ತಿಸುತಾ ಮಾನವಿಯತೆ ಮರೆತಿರುವೆ

ಹೆಣ್ಣನ್ನ ನೋಡುವ ದೃಷ್ಟಿ ಕೋನ ಬದಲಾಗಬೇಕಿಲ್ಲ ಮೂಡ
ನಿನ್ನೊಳಗಿನ ಮೃಗತ್ವ ಕೊನೆಗಾಣಬೇಕಿದೆ ತುಸು ನೋಡ

ಒಳಗಡೆ ಹುಳುಕು ತುಂಬಿದ ಆಲೋಚನೆಗಳು ನೂರು
ಎಲ್ಲವ ಕಳಚಿ ನೈಜತೆಯಲಿ ಬದುಕುತಿರು ಒಂಚೂರು

ದೇಹವನ್ನು ಭೋಗದ ಸಾಧನೆಯ ವಸ್ತುವನ್ನಾಗಿ ಮಾಡಿಕೊಳ್ಳದಿರು
ದೇಹವನ್ನು ಯೋಗ ಸಾಧನೆಗೆಂದು ಮೀಸಲಿಟ್ಟು ಮುನ್ನಡೆಯುತಿರು...

-


4 DEC 2019 AT 17:47

ಅರಿಯದೇ ಕಳೆವ ಬಾಲ್ಯ,
ಅರಿತು ಅರಿಯದೇ ತೊಳಲಾಟದಲ್ಲೇ ಕಳೆವ ಯೌವನ,
ಎಲ್ಲವ ಅರಿತು ಎಲ್ಲರೊಳು ಬೆರೆತು ಬದುಕು ಹಸನಾಗುವ ಹೊತ್ತಿಗೆ ಮುಪ್ಪಡರಿದ ಬಾಳಿನಂತ್ಯದ ಹೊಸ್ತಿಲು,
ಕೊನೆಗೆ ಓದದೇ ಉಳಿದ ಹಲವು ಅಧ್ಯಾಯಗಳ ಮರುಪರಿಶೀಲನೆಗೆ ಹೊಸದೊಂದು ಜನ್ಮವೆತ್ತುವ ಅನಿವಾರ್ಯತೆ...!

-



ಬಾಲ್ಯ ಹಾಲುಟ ಕೂಗಾಟ
ಯೌವನ ತೇಲಾಟ ಅರಿಯದ ಓಟ
ಮುಪ್ಪು ಪರ(ರ)ದಾಟ....ಮನೆಯಲ್ಲಿ ವಟ ವಟ
ಕೊನೆಗೊ೦ದು ದಿನ ಚಟ್ಟ
ಅದುವೆ ಅ೦ತಿಮ ಗಟ್ಟ.😝😂😂

-


3 NOV 2019 AT 22:35

ಉಸಿರಂತ್ಯದವರೆಗು ನಿಲ್ಲದ ಜಗದಗಲದ ಪಯಣವಿದು, ನಶ್ವರದ ಬದುಕಿನಲಿ, ಶಾಶ್ವತವಾಗಿ ಎಲ್ಲವನ್ನು ಪಡೆಯಬೇಕೆಂಬ ಹುಂಬತನವೇಕೆ ಮೂಢ.
ಬಾಲ್ಯ, ಕೌಮಾರ, ಯೌವನ, ವೃದ್ಧಾಪ್ಯದ ಯಾತ್ರೆ ಮುಗಿಸಿ, ಕೊನೆಗೆ ಮಣ್ಣಿನಲ್ಲಿ ಅಂತ್ಯವಾಗುವ ಅಶಾಶ್ವತವೀ ಬದುಕು ನೀ ಅರಿತು ಬಾಳಿ ನೋಡಾ...

-


12 AUG 2020 AT 17:52

ಊರು ಹೋಗು ಅನ್ನುತ್ತೆ
ಕಾಡು ಬಾ ಅನ್ನುತ್ತೆ,
ಹೇ ಬಾಲ್ಯವೆ ನೀನೊಮ್ಮ
ಮರಳಿ ಬರುವಂತಿರಬಾರದಿತ್ತೇ,
ಯೌವನದ ಕಂಪನದಲಿ ತೇಲಿ
ಮುಪ್ಪಿನ ಮಡುವಿಗೆ ಬಿದ್ದೆ,
ಬದುಕಿನುದ್ದಕ್ಕು ಮುದ್ದೆ ನಿದ್ದೆ ಬಿಟ್ಟು
ಬೇರೇನು ಮಾಡದೆ ಕಳೆದೆ,
ವ್ಯರ್ಥಿಸಿದ ಬದುಕನ್ನು ಮರಳಿ
ಶೃಂಗರಿಸಬೇಕಿದೆ ಹೊಸ ಚೈತನ್ಯದೊಂದಿಗೆ,
ಆಡದೆ ಉಳಿಸಿದ ಬಾಲ್ಯದಾಟಗಳ ಮರಳಿ
ಆರಂಭಿಸಬೇಕಿದೆ ಕಣ್ಣಾಮುಚ್ಚಾಲೆಯೊಂದಿಗೆ,
ಹೇ ಬಾಲ್ಯವೆ ನೀನೊಮ್ಮೆ
ಮರಳಿ ಬರುವಂತಿರಬಾರದಿತ್ತೇ,
ಮರಳಿ ಸಂತಸವ ಅರಳಿಸುವಂತಿರಬಾರದಿತ್ತೇ !

-


10 MAY 2019 AT 11:28

ಬಾಲ್ಯವೇ ಸ್ವಾಗತ ಭಾಷಣ
ಯೌವನವೇ ಉಪನ್ಯಾಸ
ಮುಪ್ಪೇ ವಂದನಾಪ೯ಣೆ...

-


3 AUG 2020 AT 18:03

ಯೌವನದ ಕಂಪನದೊಟ್ಟಿಗೆ ಜೊತೆಯಾದೆ,
ಕಲ್ಲುಮುಳ್ಳಿನ ಹಾದಿಯಲು ಜೊತೆನಡೆದೆ,
ಇಳಿವಯಸ್ಸಿಗೆ ಊರುಗೋಲಾಗಿ,
ಅಕ್ಕರೆಯ ಮಡಿಲಾಗಿ, ಒಲವಿನ ಸತಿಯಾಗಿ,
ಬಳಲಿದ ಬಳ್ಳಿಗೆ ಆಸರೆಯ ಮರವಾಗಿ,
ಬರುಡು ಬದುಕಿಗೆ ಪ್ರೇಮದ ಮಳೆಸುರಿಸಿದೆ.
ನೀ ಎನ್ನ ಮನದ ನಂದಾದೀಪ,
ನೀ ಕೈ ಹಿಡಿದು ನಡೆಸುವ
ಹಾದಿಯೆನಗೆ ಸ್ವರ್ಗಲೋಕ...

-


15 OCT 2020 AT 21:49

ಸೌಂದರ್ಯ ಕರಗುತ್ತದೆ, ಮುಪ್ಪು ಆವರಿಸುತ್ತದೆ, ಐಶ್ವರ್ಯವೂ ಕರಗುತ್ತದೆ, ಒಮ್ಮೊಮ್ಮೆ ಬಡತನವೂ ಅಡರುತ್ತದೆ, ಕಟ್ಟಿಕೊಂಡ ಸ್ವಪ್ನಗಳೂ ಕರಗುತ್ತವೆ, ಕೊನೆಗೊಮ್ಮೆ ಬದುಕು ಕೂಡ ! ಒಂದಾನೊಂದು ದಿನ ಉಡುಗಿಹೋಗುವ ಎಲ್ಲ ಸಂಗತಿಗಳ ಅರಿವಿದ್ದರೂ, ಅದೊಂದು ಭ್ರಾಂತಿ ಮಾತ್ರ ಅಳಿಯದೆ ಆಳುತ್ತದೆ...'ಶಾಶ್ವತತೆ' !

-


27 JUL 2022 AT 21:37

ಎಳೆಬಿಸಿಲ ಹೊತ್ತು ಬರುವ ಬೆಳಗಿಗೆ ನಿತ್ಯಬಾಲ್ಯ, ಕವಲು ಆಯ್ಕೆಗಳ ನಡುವೆ ಹಲವು ಹಾದಿ ತೋರುವ ಇಳಿಮದ್ಯಾಹ್ನಕ್ಕೆ ಬೆರಗು ಯೌವನ, ಸೋತು ಕಾಲೆಳೆಯುವ ಬದುಕಿಗೆ ಸಂಜೆಯ ಸಂಧ್ಯಾರಾಗ,
ಮೈಚೆಲ್ಲಿ ಮೈಮುರಿವ ಇರುಳಿಗೆ ಅರಳುಮರುಳು...

-