QUOTES ON #ಗಂಡ

#ಗಂಡ quotes

Trending | Latest
13 MAR 2020 AT 12:28

ಮುಂದುವರಿದ ವಿಜ್ಞಾನ ತಂತ್ರಜ್ಞಾನದ ಮುಂದೆ
ಆಧುನಿಕತೆಯ ಜಂಜಾಟದಿ ಮನುಷ್ಯರ ಕುರಿ ಮಂದೆ
ಪಾಪ !ಎಳೆ ಮನಸುಗಳ ಬಾರಿ ಗೊಳಾಟದ ಬಾಧೆ
ಅತಂತ್ರದ ಬದುಕಿನೊಳು ಯಾಂತ್ರಿಕತೆಯ ಸುಧೆ.!

ಯಾರಿಗ್ಹೇಳ್ಯಾವು ಅವುಗಳ ತೊಳಲಾಟದ ಹಾವಭಾವ
ಪ್ರತಿಷ್ಟೆ ಪ್ರತಿಕಾರಗಳೊಂದಿಗಿನ ಜೀವ ಮರೆತಿಲ್ಲ ನೋವ
ತಾ ಮುಂದು ನಾ ಮುಂದೆಂಬ ಪೈಪೋಟಿಯ ಭೇದಭಾವ
ಯಾರ ಭಾವನೆಗಳಿಗು ಬೆಲೆಯಿಲ್ಲದೆ ಬದುಕುವ ಮಾನವ.!

ಯಾಂತ್ರಿಕತೆಯ ಹೊಯ್ದಾಟ ಈ ಜಗದದ ಆರ್ಭಟ
ಮುಗ್ದ ಮನಗಳಿಗಿಲ್ಲ ಪ್ರೀತಿ ವಾತ್ಸಲ್ಯದ ತುಂಟಾಟ
ಇನ್ನೆಲ್ಲಿದೆ ಬದುಕಿನುದ್ದಕ್ಕೂ ಬೆಸುಯುವ ಮೇಲಾಟ
ಗಂಡ ಹೆಂಡಿರ ಜಗಳದೊಳಗೆ ಕಂದನ ಕಾಯುವ ಹಠ.!

ತಮ್ತಮ್ಮ ಅಹಂಗಳಲ್ಲಿ ಮೇಳೈಸದ ಅನುಬಂಧದಲೆ
ಪಾಪ! ಮನೆಯೊಳಗಿನ ಮುಗ್ದ ಕೂಸಿಗೆ ಇಲ್ಲವೆ ನೆಲೆ
ದಿನದ ಜಂಜಾಟ ಗೋಳಾಟಗಳಲ್ಲೆ ಬೆಂದು ಸೊರಗಿದ ಮೊಲೆ
ಭವ ಬಂಧಗಳ ಬೆಸುಗೆಯಿಲ್ಲದೆ ಅನಾಥವಾಯಿತು ಮನೆಯಲ್ಲೆ.!

ಯಾಂತ್ರಿಕ ಲೋಕದಿ ಹೊಂದಾಣಿಕೆಯಿಲ್ಲದೆ ಪರದಾಟ
ಸಂಸಾರದಲ್ಲಿ ನೆಮ್ಮದಿಯಿಲ್ಲದೆ ನಿತ್ಯ ನಡೆಯುತ್ತಿದೆ ಕಿತ್ತಾಟ
ಅಂಧಕಾರದಿ ಮುಳುಗೇಳುತಿವೆ ಪ್ರತಿಷ್ಟೆಯ ಸ್ವಾರ್ಥ ಹಾರಾಟ
ಅತಂತ್ರವಾಗುತಿದೆ ಮಗುವಿನ ಬಾಳು ಕಣ್ಣೀರಲ್ಲೆ ಚೀರಾಟ.!!

ಹಸುಗೂಸಿಗೆ ಏನು ಗೊತ್ತು ಅಪ್ಪ ಅಮ್ಮನ ಒಳ ಜಗಳ
ಮಮತೆ ಕಾಣದ ಮಗು ಚೀರಾಡುತಿದೆ ನೊಂದು ಬಹಳ
ಮನೆಯ ಯಜಮಾನಿಕೆ ಸರಿಯಿದ್ದರೆ ಮನಗಳು ನಿರಾಳ
ಮಾತುಗಳ ಭರಾಟೆಯಲ್ಲಿ ಮರೆಯದಿರಿ ಹೆತ್ತ ಮಕ್ಕಳ.!

-


19 DEC 2019 AT 14:31

ವೈಜ್ಞಾನಿಕತೆಯ ನಾಗಲೋಟದೊಳು
ಆಧುನಿಕತೆಯ ಮೆರೆದಾಟ ಹೆಚ್ಚುತಿರಲು
ಎಣಗಾಡುತಿವೆ ಎಳೆ ಮನಸುಗಳು
ನನಸಾಗದ ಕನಸುಗಳ ಸಂತೆಯೊಳಗೆ.!!

ಎಲ್ಲರಿಗೂ ಅವರದ್ದೆ ಪ್ರತಿಷ್ಟೆಯ ಹಾರಾಟ
ತಾ ಮುಂದು ನಾ ಮುಂದೆಂಬ ಹೋರಾಟ
ಇಲ್ಲಿ ಯಾರ ಭಾವನೆಗಳಿಗೆ ಬೆಲೆಯಿಲ್ಲ
ನಿಷ್ಕಲ್ಮಶ ಮನಗಳು ನೆಲೆಯಿಲ್ಲದೆ ಬರಡಾಗುತಿವೆ.!!

ಯಾಂತ್ರಿಕತೆಯ ಜಗದ ವಿಸ್ಮಯತೆ
ಮುಗ್ದ ಮನಗಳೊಂದಿಗಿಲ್ಲದ ತನ್ಮಯತೆ
ಇನ್ನೆಲ್ಲಿದೆ ಪ್ರೀತಿ ವಾತ್ಸಲ್ಯಗಳ ಬೆಸುಯುವಿಕೆ
ಗಂಡ ಹೆಂಡಿರ ಜಗಳದೊಳಗೆ ಬಡವಾಗುತಿದೆ ಕೂಸು.!!

ತಮ್ತಮ್ಮ ಅಹಂಗಳಲ್ಲಿ ಮರೆಯುತಿಹರು
ಪಾಪ! ಮನೆಯೊಳಗಿನ ಮುಗ್ದ ಕೂಸ
ದಿನದ ಜಂಜಾಟ ಗೋಳಾಟಗಳಲ್ಲಿ ಕೊರಗಿದೆ
ಭವ ಬಂಧಗಳ ಬೆಸುಗೆಯಿಲ್ಲದೆ ಅನಾಥವಾಗುತಿದೆ.!

ಯಾಂತ್ರಿಕ ಲೋಕದಿ ಹೊಂದಾಣಿಕೆಯಿಲ್ಲದೆ ಪರದಾಟ
ಸಂಸಾರದಲ್ಲಿ ನೆಮ್ಮದಿಯಿಲ್ಲದೆ ನಿತ್ಯ ಕಿತ್ತಾಟ
ಅಂಧಕಾರದಿ ಮುಳುಗೇಳುತಿವೆ ಪ್ರತಿಷ್ಟೆಯ ಹಾರಾಟ
ಅತಂತ್ರವಾಗುತಿದೆ ಮಗುವಿನ ಬಾಳು ಚೀರಾಟ.!

-


8 OCT 2019 AT 20:45


ಮಂದಿಯ ಮಾತು ಕೇಳಿ ತನ್ನ ಗಂಡನನ್ನು ಕುರೂಪಿಯಂತೆ ಕಾಣುವ ಹೆಣ್ಣು. ಹಾಗೂ ಕೇವಲ ಸೀಮಿತ ವಿಷಯಕ್ಕಾಗಿ ತನ್ನ ಹೆಂಡತಿಯನ್ನು ಬಳಸಿಕೊಳ್ಳುವ ಗಂಡು. ಇವರ ಸಂಸಾರ ದೇವರೇ ಕಾಪಾಡಬೇಕು..

-


12 NOV 2019 AT 11:47

ಹೆಂಡತಿ ಕೂಲಿ ಮಾಡಿ ಸಂಸಾರ ಸಾಗಿಸಲು ಕಷ್ಟಪಡುತ್ತ, ಬಿಡಿಗಾಸಿಗಾಗಿ ಪರರ ಹತ್ತಿರ ಕೈ ಚಾಚುತ್ತಿದ್ದರೆ, ಗಂಡ ಹೆಂಡದಂಗಡಿಯ ಮಾಣಿಗೆ ಭಕ್ಷೀಸು ಕೊಡುತ್ತ ನಿಂತಿದ್ದನಂತೆ...

-



ಅಪ್ಪಿ ತಪ್ಪಿ ಹೆಣ್ಣಾಗಿ ಹುಟ್ಟಿದರೆ
ತಾಯಿಯಂತೆ ಭಾವಿಸುವ ಗಂಡ ಆದ್ರೂ ಸಿಗಬೇಕು,
ಇಲ್ಲ ಪ್ರಾಣಕ್ಕಿಂತ ಹೆಚ್ಚಾಗಿ
ಪ್ರೀತಿಸುವ ತಂದೆ ತಾಯಿಯಾದರೂ ಇರಬೇಕು.

-



H - ಹಠಾತ್ತಾಗಿ
U - ಯುವರಾಣಿಯಂತೆ ಜೀವಿಸುತ್ತಿದ್ದ ಹೆಣ್ಣಿನ
ಜೀವನದಲ್ಲಿ ಬಂದು
S - ಸರ್ವಸ್ವವೂ ತಾನೆ ಅಂತ
B - ಬಂಧ ಬೆಸೆದು
A - ಎಲ್ಲಾ ಸಮಯದಲ್ಲೂ ಜೊತೆಯಾಗಿರುವೆ ಎಂದು
N - ನನ್ನ ಅರ್ಧಾಂಗಿಯಾಗಿ ಬಂದ ಹೆಣ್ಣನ್ನ ಉಸಿರಿರುವವರೆಗೂ
ನೆರಳಂತೆ ಬೆನ್ನ ಹಿಂದೆ ಇದ್ದು ಕಾಪಾಡುವೆ ಎಂದು
D - ಧರ್ಮೇಚ, ಅರ್ಥೇಚ, ಕಾಮೇಚ, ಮೋಕ್ಷೇಚ,
ನಾತಿ ಚರಾಮಿ ಎಂದು ಪ್ರಮಾಣ ಮಾಡುವವನೇ.
"Husband" (ಗಂಡ)

-



ಹೆಂಡತಿ ಮುನಿಸ್ಕೊತಾಳೆ,
ತನ್ನ ಗಂಡ ಮುದ್ದು ಮಾಡ್ತಾನಾ ಇಲ್ವಾ ಅಂತ.
ತಮಾಷೆ ಮಾಡ್ತಾಳೆ,
ಭರಿಸ್ತಾನ ಇಲ್ವಾ ಅಂತ.
ಊಟ ಮಾಡದೇ ಹಾಗೆ ಇರ್ತಾಳೆ,
ಬಂದು ತಿನ್ನಿಸ್ತಾನ ಇಲ್ವಾ ಅಂತ.
ಕೋಪ ಮಾಡ್ಕೋತಾಳೆ,
ಬಿಟ್ಟು ಇರ್ತಾನಾ ಇಲ್ವಾ ಅಂತ.
ಕೊನೆಗೆ ಅಳ್ತಾಳೆ,
ಕಣ್ಣೀರು ಒರೆಸ್ತಾನ ಇಲ್ವಾ ಅಂತ.
ಇಷ್ಟೆಲ್ಲಾ ಅರ್ಥ ಮಾಡ್ಕೊಂಡು ಒಬ್ಬ ಗಂಡನಾಗಿ ನೀನು ಮಾಡಿದ್ರೆ,
ಜೀವನದಲ್ಲಿ ಎಂತಾ ಪರಿಸ್ಥಿತಿ ಬಂದ್ರೂ,
ನನ್ನ ಗಂಡ ನನ್ನ ಬಿಟ್ಟು ಹೋಗಲ್ಲ ಅಂತ
ಅವಳಿಗೆ ನಿನ್ನ ಮೇಲೆ ಅಪಾರ ನಂಬಿಕೆ ಬರುತ್ತೆ,
ಅವಾಗ ನಂಬ್ತಾಳೆ ನಿನ್ನ ಹುಚ್ಚಾಗಿ ಅವಳ ಪ್ರಾಣಕ್ಕಿಂತ ಹೆಚ್ಚಾಗಿ.

-



ಬಟ್ಟೆ ಒಗೆಯುವಾಗ
ಕೆಲ ಹೆಂಡತಿಯರು,
ಒಗೆಯೊ ಬಟ್ಟೆಯಲ್ಲಿ ತನ್ನ
ಗಂಡನನ್ನ ನೋಡ್ಕೊಂಡು
ಒಗೀತಾರಂತೆ🤭
ಇಲ್ಲ ಅಂದ್ರೆ ಅವ್ರ
ಮನಸು ತಣ್ಣಗಾಗಲ್ಲ,
ಬಟ್ಟೇನೂ ಬೆಳ್ಳಗಾಗಲ್ವಂತೆ😜

ಹೌದಾ 🤔🤔

-



ಮನೆಗೆ ದೀಪ ಹೆಂಡತಿ ಅಂತಾರೆ,
ಮತ್ತೆ ಗಂಡ ಏನು?🤔
ಅದರಲ್ಲಿ ಸುಟ್ಟು ಕರಕಲಾಗುವ ಬತ್ತಿ ನಾ🤔😳

-



ಗಂಡಸರ ಹಣೆಬರಹ ಮದುವೆ ಆಗುವವರೆಗೆ ಮಾತ್ರ ಬ್ರಹ್ಮ ಬರ್ದಿರ್ತಾನಂತೆ,
ಮದುವೆ ಆದಮೇಲೆ ಹೆಂಡತಿ ಬರೀತಾಳಂತೆ ನಿಜಾನಾ🤔

-