QUOTES ON #ಹಿಂಗೆ_ಒಂದ್_ಮಾತು

#ಹಿಂಗೆ_ಒಂದ್_ಮಾತು quotes

Trending | Latest
23 SEP 2020 AT 9:58

ಸಮಯ,ಸಂದರ್ಭ ಕೆಲವೊಮ್ಮೆ ತಪ್ಪೇ ಮಾಡದೆಯಿದ್ರೂ ಜೀವಮಾನವಿಡೀ ಮರಗುವಂತ ಶಿಕ್ಷೆ ಕೊಟ್ಟುಬಿಡುತ್ತೆ.. !!

-


10 APR 2021 AT 21:42

ಕತ್ತಲೊಳಗೆ ಕಳೆಯುತಿರುವೆ ಖಾಲಿ ನನ್ನ ಜೀವನ
ಬೆಳಕೇ ನೀನು ಇಳಿದುಬಂದು ಬೆಳಗಿಸೆನ್ನ ಬಾಳನ

ಅರುಣ ನಡೆಸುವ ರಥದ ಒಳಗಿನ ರವಿಯ ತೇಜದ ತುಣುಕ ತಾ
ವ್ಯೋಮಕೇಶನ ಶಿರದ ಮೇಲಿನ ಚಂದ್ರಬಿಂಬದ ಮಿಣುಕ ತಾ
ಅಹರ್ನಿಶವು ಜಗವ ಬೆಳಗುವ ಚುಕ್ಕಿ ಚೆಲುವನು ಕರೆದು ತಾ
ಸುರಿವ ಮಳೆಯಾ ಸಂಗಾತಿಯ ಮಿಂಚ ಮೆರುಗನು ಮನಕೆ ತಾ

ಶರಧಿಯಲೆಯಾ ಮೇಲೆ ಮಿನುಗೋ ಪ್ರಕಾಶವನು ಹೊಸೆದು ತಾ
ಜೀವಜನಕ ಮರದ ಹಸಿರಾ ಹೊಳಪನು ನೀ ಬಸಿದು ತಾ
ತಾನು ಸುಟ್ಟರೂ ಲೋಕ ಬೆಳಗುವ ದೀಪವನು ದಯವಿಟ್ಟು ತಾ
ಮನೆಯ ಉಜ್ವಲ ಬೆಳಕು ಮಾತೆಯ ಪ್ರಭೆಯನು ನೀ ಇಸಿದು ತಾ

ಹಿರಿಯ ಕಿರಿಯರ ಹರಕೆ ಹೊರೆಯಾ ತೇಜಪುಂಜವ ಕೆಳಗೆ ತಾ
ಜೀವಸಖಿಯಾ ಕಣ್ಣಕಾಂತಿಯ ಭಿನ್ನರೂಪವ ಬಳಿಗೆ ತಾ
ಗೆಳೆಯರೆಲ್ಲರ ಮನಸಿನಾಳದ ಶುಭಾಶಯಗಳ ಗುಚ್ಛ ತಾ
ಈ ಸೃಷ್ಟಿಯ ಕಾಂತಿಕವಚವ ನನ್ನ ಎದೆಯಾ ಇಳೆಗೆ ತಾ

-


10 MAY 2021 AT 15:41

ಕಷ್ಟಕ್ಕಾಗೋರಿಗಿಂತ,
ಕಷ್ಟ ಕೊಡೋರು, ಆಡ್ಕೊಳ್ಳೋರೆ ಹೆಚ್ಚು.

#ಹಿಂಗೆ ಒಂದ್ ಮಾತು.

-


1 AUG 2021 AT 12:01

ಯಾವಾಗ್ಲೂ ಸಿಗೋರು ಸ್ನೇಹಿತರಾಗುತ್ತಾರೆ
ಅಂತ ಹೇಳೋಕೆ ಆಗಲ್ಲ..
ಹಾಗೇ,
ಸ್ನೇಹಿತರೆಲ್ಲ ಯಾವಾಗ್ಲೂ ಸಿಗ್ತಾ ಇರ್ತಾರೆ
ಅಂತ ಹೇಳೋಕೂ ಆಗಲ್ಲ.
ಆದರೆ ಅವರು ಸಿಗಲಿ ಬಿಡಲಿ ಆ ಸ್ನೇಹ ಮಾತ್ರ ಶಾಶ್ವತ.

#ಹಿಂಗೆ_ಒಂದ್_ಮಾತು

-


14 MAY 2021 AT 17:53

ಈ ಕ್ಷಣ 'ಸತ್ಯ'.
ಮರುಕ್ಷಣ 'ಸುಳ್ಳು'.

#ಹಿಂಗೆ ಒಂದ್ ಮಾತು.

-


12 AUG 2021 AT 22:49

ಎಲ್ಲರೂ ನಮ್ಮ ಒಳ್ಳೆಯದಕ್ಕಾಗಿ ನಮ್ಮನ್ನು ಬದಲಾಯಿಸುವುದಿಲ್ಲ.
ತಮ್ಮ ಒಳ್ಳೆಯದಕ್ಕಾಗಿ ನಮ್ಮನ್ನು ಬಳಸಿಕೊಳ್ಳಲು ಬದಲಾಯಿಸಬಹುದು.
ಎಚ್ಚರದಿಂದಿರಿ.

#ಹಿಂಗೆ_ಒಂದ್_ಮಾತು

-


7 AUG 2021 AT 18:57

ಡಿಗ್ರಿ ಜೀವನ ಮನೆಯಲ್ಲಿ ಕಳೆದೆ ಮುಗಿಯಿತು.
😔😑

-


31 MAY 2021 AT 16:05

ಸ್ವಂತದ್ದು ಅಂತ ಇಲ್ಲಿ ಏನೂ ಇಲ್ಲಾ.

#ಹಿಂಗೆ ಒಂದ್ ಮಾತು.

-


16 JUN 2021 AT 22:01

ಬೇರೆಯವರ ಜೀವನಕ್ಕೆ ಚೌಕಟ್ಟನ್ನು ಹಾಕಲು ನಮಗೆ ಅಧಿಕಾರವಿರುವುದಿಲ್ಲ.
ಅವರವರ ಜೀವನ ಅವರವರದ್ದು.

#ಹಿಂಗೆ ಒಂದ್ ಮಾತು.

-


24 JUL 2020 AT 13:56

ಮತ್ತೊಮ್ಮೆ ಮಾಡೆನು ಈ ತಪ್ಪನ್ನ.
ಅರಿಯದೆ ಮಾಡಿದ ತಪ್ಪಿಗೆ
ಅರಿತು ಮಾಡಿದವರಿಗೆ
ಕೊಡುವ ಶಿಕ್ಷೆಯೇಕೆ ಕೊಡುವೆ?
ಸಹಿಸಲಾಗದು ಇದನ್ನು..
ದಯವಿಟ್ಟು ಕ್ಷಮಿಸಿ ಬಿಡು..

#ನನ್ನ ಯೋಚನೆ_ನನ್ನ ಬರಹ

-