ಇಂಗದಿರಲಿ ಕಡಲು
ಹನಿಯು ಆವಿಯಾಗಲಿ
ಮೋಡ ಕಟ್ಟಲಿ..
ಸುರಿವ ಸ್ನೇಹಸುಧೆಗೆ
ಮನದ ಇಳೆಯು
ಮತ್ತೆ ಮತ್ತೆ ನೆನೆಯಲಿ..-
ನಿರಂತರ ಸಕರಾತ್ಮಕತೆಯನ್ನು
ಬೆಳೆಸಿ ದೃಢತೆಯಲ್ಲಿರು ಮನವೆ/
ಮನಸ್ಸು ಸಾಗರದಂತೆ,
ಅರ್ಥಗರ್ಭಿತವಾಗಿ ಯೋಚಿಸುವುದನ್ನು
ಕಲಿತು ಸಂಮಮದಿಂದಿರು ಮನವೆ/
-
ತೊರೆದಷ್ಟು ಜೀವನವು
ಬಂಗಾರವಯ್ಯ/
ವಿಶ್ವಾಸವು ಅಮೃತದ್ದಂತೆ,
ನಂಬಿದ್ದಷ್ಟು ಬದುಕು
ಸಿಂಗಾರವಯ್ಯ/
-
ಪ್ರೀತಿಯಿಂದ ಕೊಡುವ
ವಸ್ತು ಯಾವುದಾದರೇನು?
ನಾಡಿನದೋ, ಕಾಡಿನದೋ
ಅದರ ಬೆಲೆಯು
ಕೊಡುವ ವ್ಯಕ್ತಿಯ
ನಿಯತ್ತಿನ ಪ್ರೀತಿಯನ್ನೇ
ಅವಲಂಬಿಸಿದೆ,
ಹೂ ನೆಪ ಮಾತ್ರ
ಸಾವಿರದ ಪ್ರೀತಿಯ ಸುಧೆ
ಎಂದಿಗೂ ಅಮೃತಪಾನ.-
ಸಕರಾತ್ಮಕತೆಯ ಯೋಚನೆಯ
ಜೊತೆಗೆ
ಜೀವನದ ಅನುಭವಬೇಕು/
ಜ್ಞಾನವಂತರಾಗಲು,
ಶ್ರದ್ಧೆಯಿಂದ ಕಲಿಯುವುದರ
ಜೊತೆಗೆ
ನಿರಂತರ ಅಭ್ಯಾಸಬೇಕು/
- ಸುಧೆ ಸಂಪದೆ🍁
-
ಹೆಜ್ಜೆಯ ಮೇಲೆ ಹೆಜ್ಜೆ ಹಾಕುತಾ
ಕೊರಗಿ ಸೋತಿರುವ ನೆನಪುಗಳಿಗೆ
ವಿದಾಯವನ್ನು ಹೇಳುತಾ ನಡೆದರೂ
ನೆರಳಿನಂತೆ ಹಿಂಬಾಲಿಸುತಿರುವ
ನಿನ್ನದೆ ನೆನಪುಗಳು ನನಗೆ ಅಚ್ಚುಮೆಚ್ಚು/
ಕಂಗಳು ಮರೆವಿಗೆ ಜೊತೆಯಾಗಿ
ಕಾಂತಿಯ ಲೇಪದಲ್ಲಿ ಮುಗುಳ್ನಗೆಯ
ತುಂಬುತಾ ಕಂಗೆಟ್ಟಿರುವ ಭಾವವನ್ನು
ಮರೆತರೂ ಮನದಲ್ಲೇ ಕಾಡುತಿರುವ
ನಿನ್ನದೆ ನೆನಪುಗಳು ನನಗೆ ಅಚ್ಚುಮೆಚ್ಚು/
- ಸುಧೆ ಸಂಪದೆ🍁-
#ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್
ಕಪ್ಪುಬಿಳಿಪಿನಲ್ಲೇ
ನಾಗರಹಾವಿನ
ಉಪಾಸನೆಯನ್ನು
ಸಾವಿರ ಮೆಟ್ಟಿಲೇರಿ
ಸಾಧಿಸಿದ ಕಾಲೇಜು ರಂಗ/
ಶುಭಮಂಗಳದೊಂದಿಗೆ
ರಂಗನಾಯಕಿಯನ್ನು
ಅಮೃತ ಘಳಿಗೆಯಲ್ಲಿ
ಸಾಕ್ಷಾತ್ಕಾರಗೊಳಿಸಿದ
ಪಡುವರಳ್ಳಿ ಪಾಂಡವ/
ಧರಣಿ ಮಂಡಲ ಮಧ್ಯದೊಳಗೆ
ಪಾದಾರ್ಪಣೆ ಮಾಡಿದ
ಸ್ಯಾಂಡಲ್ ವುಡ್ನ
ದಿ. ದ್ರೋಣಾಚಾರ್ಯರಿಗೆ
ಜನ್ಮದಿನದ ಶುಭಾಶಯಗಳು/
- ಸುಧೆ ಸಂಪದೆ🍁
-
ಕಾಲದ ಜೊತೆ ಜೊತೆಯಲ್ಲಿ ಹಳತೆಲ್ಲವೂ ಕರಗುತ್ತಿದೆ
ಕರಗುವ ಕನವರಿಕೆಯಲ್ಲಿ ಹೊಸತನವು ಚಿಗುರುತ್ತಿದೆ.-
"ಸಿಹಿ ಸುಳ್ಳಿನ ಭರವಸೆಯ
ಪುರಸ್ಕಾರಕ್ಕಿಂತ
ಕಹಿ ಸತ್ಯದ ಪ್ರಾಮಾಣಿಕ
ತಿರಸ್ಕಾರವೇ ಉತ್ತಮ "-