ಕವನಗಳಾಗಿ ಮೂಡುವ ನಿನ್ನ
ನಾ ಹೇಗೆ ಮುದ್ದಿಸಲಿ
ಹೇಳು?
ನೆನಪುಗಳಾಗಿ ಕಾಡುವ ನಿನ್ನ
ನಾ ಹೇಗೆ ನಂಬಲಿ
ಹೇಳು?
ಕನಸುಗಳಾಗಿ ಆವರಿಸುವ ನಿನ್ನ
ನಾ ಹೇಗೆ ಸಂಧಿಸಲಿ
ಹೇಳು?
ಚಿತ್ತದಲ್ಲಿ ಚಿತ್ರವಾಗಿರುವ ನಿನ್ನ
ನಾ ಹೇಗೆ ಬಂಧಿಸಲಿ
ಹೇಳು?
ದೂರವಿದ್ದು ಮನಸ್ಸಿಗೆ ಹತ್ತಿರವಾದ ನಿನ್ನ
ನಾ ಹೇಗೆ ಬಿಟ್ಟಿರಲಿ
ಹೇಳು?????-
ಅವನೆಂದರೆ ಹುಡ್ಗಿರಿಗೆಲ್ಲ ಅಚ್ಚುಮೆಚ್ಚು
ಅದಕೆ ನಂಗೆ ಅವನೆಂದರೆ ಹೊಟ್ಟೆಕಿಚ್ಚು-
ಅಳಿದದ್ದು ಯಾವುದು ಮನಸ್ಸಲ್ಲಿ ಉಳಿಯಲ್ಲ
ಉಳಿದದ್ದು ಯಾವುದು ಮನಸ್ಸಿನಿಂದ ಅಳಿಯಲ್ಲ..
ಪಡೆದುಕೊಂಡು ಬಂದಿದ್ದು ಕೈಜಾರಿ ಹೋಗಲ್ಲ.
ಕೈಜಾರಿ ಹೋದದ್ದನ್ನು ನಾವು ಪಡೆದುಕೊಂಡಿರಲ್ಲ..
ಕಣ್ಣಿಗೆ ಕಂಡಿದೆಲ್ಲಾ ಸತ್ಯವಾಗಬೇಕೆಂದಿಲ್ಲ
ಸತ್ಯವು ಕಣ್ಣಿಗೆ ಕಾಣಿಸಬೇಕೆಂದಿಲ್ಲ...
ನಡೆವ ಹಾದಿಯೆಲ್ಲಾ ಗುರಿಯ ತಲುಪಿಸಲ್ಲ..
ಗುರಿ ತಲುಪುವ ಹಾದಿಯಲ್ಲಿಯೇ ನಡೆಯಬೇಕಲ್ಲ..
ನಮಗೆ ನನಸಾಗುವ ಕನಸುಗಳೇ ಬೀಳುವುದಿಲ್ಲ
ಬೀಳುವ ಕನಸುಗಳ ನಾವೇ ನನಸಾಗಿಸಬೇಕಲ್ಲ..-
❤ ಅಕ್ಕರೆಯ ತಂಗಿಗೆ ನನ್ಮನದಾಳದ ❤
💐ಪದಮಾಲೆಯ ಕಟ್ಟಿರುವೆ..💐
ಅಡಿ ಬರಹದಲ್ಲಿ ಓದಿ 👇🙏-
ಹಾಡಲೇ ಬೇಕೆಂದಿಲ್ಲ ಸಖಿ..
ನಿನ್ನ ಮಿಡಿವ ಮನ
ಮಾಡುವಾಗ
ನನ್ನದೇ ಒಲವಿನ
ಧ್ಯಾನ, ನಾನಾಗಿರುವೆ
ಪ್ರೇಮದಲ್ಲಿ ಪರಮ ಸುಖಿ..-
ಕಾದಿದೆ ಮನವೀಗ ನಿನಗೆ
ಭೂಮಿ ಕಾದಂತೆ ಮಳೆಗೆ
ನಿನ್ನ ನೆನಪೊಂದೆ ಹೃದಯಕೆ
ನಿನ್ನ ಬರಹವೆ ಸಾಕು ಜೀವಕೆ...-
ನಾ ನಿನ್ನೊಡನೆ ಮುಚ್ಚಿಟ್ಟ ಭಾವನೆಗಳೆಲ್ಲಾ,
ನನ್ನ ನನ್ನೊಳಗೆ ಕೊಚ್ಚಿ ಕೊಚ್ಚಿ ಕೊಲ್ಲುತ್ತಿದೆ..
ನೀ ನನ್ನೊಡನೆ ಬಿಚ್ಚಿಟ್ಟ ಭಾವನೆಗಳೆಲ್ಲಾ,
ನನ್ನ ನಿನ್ನೊಳಗೆ ಮೆಚ್ಚಿ ಮೆಚ್ಚಿ ಬೆರೆಯುವಂತೆ ಮಾಡುತ್ತಿದೆ..-
ಪರಿಸ್ಥಿತಿ ಅರಿಯಲು
ಹೋದರೆ,
ಮನಸ್ಥಿತಿ ಹದಗೆಡುತ್ತದೆ.
ಮನಸ್ಥಿತಿಗೆ ಅನುಗುಣವಾಗಿ
ಹೋದರೆ,
ಪರಿಸ್ಥಿತಿ ಕೈ ಮೀರಿ ಹೋಗುತ್ತದೆ.
ಪರಿಸ್ಥಿತಿ ಮನಸ್ಥಿತಿಯ ಉಪಸ್ಥಿತಿಯಲ್ಲಿ
ಜೀವನ ಅದೋಗತಿ
ಹಿಡಿದಿದೆ..-
ಅರೆಬರೆ ಬೆಂದ ಅಕ್ಕಿ ಹೇಗೆ ತಿನ್ನಲು ಯೋಗ್ಯವಲ್ಲವೋ,
ಅರೆಬರೆ ತಿಳಿದ ಜ್ಞಾನ ಬುದ್ಧಿ ಹೇಳುವುದಕ್ಕೆ ಯೋಗ್ಯವಲ್ಲ...-
ನೆಲೆಯೂರ ಬೇಕಾದ
ಸಂಬಂಧಗಳು
ನೆಪವಾಗಿ ಹೋದಾಗ
ಸಂಬಂಧಗಳ ಮೇಲೆ
ನಂಬಿಕೆ ಹೋಗುವುದು..
ನೆನಪಾಗಿ ಉಳಿಯ
ಬೇಕಾದ ಸಂಬಂಧ
ನಾಮಕಾವಸ್ತೆ ಆದಾಗ
ಸಂಬಂಧಗಳ ಮೇಲೆ
ಅಸೂಯೆ ಮೂಡುವುದು..-