QUOTES ON #SHRUTHISHAIVA

#shruthishaiva quotes

Trending | Latest
28 MAY 2020 AT 7:46

🌺
ಮಹಾ
ಮಹಿಮನು
ಪಂಚಮುಖನು
ಜಗದ ಅಧಿಪತಿ
ಲಿಂಗ ಸ್ವರೂಪಿ
ಸರಳ ಭೂಷಣ
ಸುತ್ತ ಭೂತಗಣ
ಭಕ್ತರ ಪೋಷಕ
🌺ಮಹಾಸೇನಜನಕ🌺
ತಮಸ್ಸೆಂಬ ಅಜ್ಞಾನವನ್ನು ಅಳಿಸಿ ಜ್ಞಾನ ದೀವಿಗೆಯ ಬೆಳಗಿಸೊ ಕರುಣಾಕರ ಜಟಾಯ @@@
ಸರಳ ಸಜ್ಜನಿಕೆಯ ನಿರಾಭರಣ ಸುಂದರ ಆದ್ಯಂತ ರಹಿತ ದೇವ ಮೃತ್ಯುಂಜಯಾಯ @@@
ಭಕ್ತರ ಆರಾಧ್ಯ ದೈವ ಶಂಕರ ಡಮರುಗನಾದ ಸ್ವರಮಯಾಯ ಶಿವಪ್ರಿಯಾ ಉಗ್ರಾಯ @@@
ನಿರಾಕಾರ ರೂಪ ತ್ರಿಮೂರ್ತಿ ಸ್ವರೂಪ ನಿರಾಭರಣ ರುದ್ರಾಯನು @@@
ಶಿವ-ಶಕ್ತಿಯು ಅನಂತವು ಸತ್ಯದ ಅರಿವು ನಿತ್ಯ ನಿರಂತರವು
ನಿಷ್ಕಲ್ಮಶ ಮನಸ್ಸಿನ ಪ್ರತೀಕನು ಹಠಬಿಡದ ಧ್ಯೋತಕನು
ಶಿವಲಿಂಗನು ಅಭಿಷೇಕ ಪ್ರಿಯನು
ಜಗದ ಒಳಿತಿಗೆ ವಿಷವ ಕುಡಿದನು
ಶಕ್ತಿವಂತನು ಆಡಂಬರ ಮುಕ್ತನು
ನಂಬಿ ಬಂದ ಭಕ್ತರ ಕೈ ಬಿಡದ ವರನೀಡೊ ಪರಶಿವನು
ಇಂದ್ರಿಯ ನಿಗ್ರಹಿಸಿ ಧ್ಯಾನಸ್ತಕರಿಗೆ ಒಲಿಯೊ ಪರಮೇಶ್ವರನು
ಭಸ್ಮವನ್ನ ಧರಿಸಿದ ನಿರಲಂಕಾರನು ಸೋಮವಾರಪ್ರಿಯ ಈಶ್ವರನು
ಅಹಂಕಾರ ಅಳಿಸುವ ದುಷ್ಟರ ಶಿಕ್ಷಕ ಶಿಷ್ಟರ ರಕ್ಷಕ ಅರಿವಿನ ಗಂಗೆಯೊತ್ತ ಜಗದ ನಾಯಕ
ಹಣೆಯಲ್ಲಿ ಜ್ಞಾನದ ತಿಲಕವಿರಿಸಿ ಶುದ್ಧ ಚಿತ್ತದ ರುದ್ರಾಕ್ಷಿ ಧರಿಸಿ ಕೈಯಲ್ಲಿ ಡಮರುಗ ಇರಿಸಿ
ಶಾಂತಚಿತ್ತನಾಗಿ ಬುದ್ಧಿ ನಿಯಂತ್ರಣದಲ್ಲಿರಿಸಿ ಅಹಂಕಾರ ನಾಶಗೊಳಿಸೊ ಮಹಾದೇವನು
ದೇವರುಗಳ ದೇವನು ಬಂಧ ರಹಿತ ಶಿವನು
ಸರ್ವಸೃಷ್ಟಿಗಳಿಗೂ ಜೀವ ನೀಡುವ ದೇವನು
🌿🌺🌿🌺 ಶೃತಿ ಶೈವ 🌺🌿🌺🌿

-


11 DEC 2019 AT 22:19

ಕನಸಿನ
ಕನವರಿಕೆ
ಕಲ್ಪನೆಗೆ ಗೊತ್ತು.!

ಅವಲೋಕದೊಳಗಿನ
ಆಲೋಚನೆ
ಅಂತರಾಳಕ್ಕೆ ಗೊತ್ತು.!

-


4 APR 2020 AT 10:09

ಏಕೆ ನೀ ಹೀಗಾದೆ
ಧೀರ್ಘ ಮೌನಿ ನೀ ಯಾಕಾದೆ
ನಿನ್ನುಸಿರಿನ ಧೀಘ್ರತೆಯ
ನೀ ಅರಿಯದಷ್ಟು ಮೌನವೇ
ನಿನ್ನ ನಗುವ ಕಾಣ ಬಯಸುವ
ಮನಗಳು ಇರುವಾಗ
ಈ ಮೌನ ತರವೆ ನಿನಗೆ
ಹೇ ಹೆಣ್ಣೇ ನೀನೊಂದು
ಮರೀಚಿಕೆ ಆಗದಿರು
ಜೋಡಿ ನಕ್ಷತ್ರಗಳು
ಒಲುಮೆಯ ತೇರಿನಲ್ಲಿ
ಹೊರಡಲು ಸಜ್ಜಾಗಿರುವಾಗ
ನಿನ್ನೊಲವಿನ ನಕ್ಷತ್ರವ
ನೀ ಹುಡುಕದಾದೆಯ...??

-


30 JAN 2020 AT 22:10

ಹೊರಟು ನಿಂತೈತಿ ನವವಧುವಿನ ಮದುವೆ ದಿಬ್ಬಣ;
ಮುಗಿಯಲಿಲ್ಲವೆ ಅವಳ ಅಧರದಲಂಕಾರದ ಹೂಬಣ್ಣ.!

-


12 JUN 2019 AT 23:46

ಓ ಮಳೆಯೇ ಓ ಮಳೆಯೇ
ಮೇಘದಿ‌ ಇಳಿದೆ ನೀ ಧರೆಗೆ
ಬಿಸಿಲ ಝಳಕೆ ಬೆಂದ‌ ಜೀವಕೆ
ನೀರೆರೆದು ದಾಹ ತೀರಿಸಿದೆ.!

ಗಿರಿ, ಶಿಖರಗಳಲ್ಲಿ ಸುರಿದ ಮಳೆಗೆ
ತರುಲತೆಗಳು ನೆನೆದು ಹೂನಗೆ ಚೆಲ್ಲಿದೆ
ಹಕ್ಕಿಗಳು ಸಂತಸದಿ ರೆಕ್ಕೆ ಬಿಚ್ಚಿದೆ
ಜಿಗಿದು ಕುಣಿಯುತ್ತಿದೆ ಆಸೆಗೆ.!

ಪ್ರಕೃತಿಯ ಸೌಂದರ್ಯ ಹೆಚ್ಚಾಗಿದೆ
ಇಳೆಗೆ ಮಳೆಯು ಮುತ್ತಿಕ್ಕುತ್ತಿದೆ
ಘಟ್ಟದಿಂದ ‌ನೀರು ಧುಮ್ಮಿಕ್ಕಿದೆ
ಹರಿಯುತ ‌ನದಿಯ ಸೇರಿದೆ.!

ಮೃಗಗಳು ಕುಣಿದು‌ ಕುಪ್ಪಳಿಸಿದೆ
ಮಳೆಯಲಿ ನೆನೆದು‌ ಮಿಂದೆದಿದೆ
ತಂಗಾಳಿಯು ಮಳೆಯ ‌ಸ್ಪರ್ಶಿಸಿದೆ
ಸಸ್ಯಕಾಶಿ‌ಯ ಸಿರಿ‌‌ ಇಮ್ಮಡಿಯಾಗಿದೆ.!_ಶೃತಿ ಶೈವ






-


20 FEB 2019 AT 23:05

ನಗು ಮೊಗದ ಚೆಲುವನಿರಬಹುದು,
ಎಲ್ಲರ ಕವನ ಮೆಚ್ಚುವ ಸಹೃದಯದವರು,
ಬರಹಗಾರರಿಗೆ ವೇದಿಕೆ ಕಲ್ಪಿಸಿ ಅವರಲ್ಲಿರೊ
ಭಾವನೆಗಳನ್ನ ಹೊರ ತೆಗೆದು ಜೀವ ನೀಡಿದವರು.
ದಿನವೂ ಹೊಸ ಬರಹಗಾರರನ್ನ ಯುವರ್ ಕೋಟ್ನಲ್ಲಿ
ಆಹ್ವಾನಿಸಿ ಬರಹ ಬರೆಯುವಂತೆ ಪ್ರೇರೆಪಿಸುವರು,
ದಿನಕ್ಕೆ ಕೊಲ್ಯಾಬ್ನ ಸವಾಲ ಎಸೆದು
ಅದಕ್ಕೆ ತಕ್ಕಂತೆ ಕವನ ರಚಿಸಲು ಹುರಿದುಂಬಿಸುವರು,
ದಿನವು ನಡುರಾತ್ರಿ ಕವನ ತಪ್ಪದೆ ಹಾಕಿ‌ ಮಲಗುವರು,
ಹೆಚ್ಚು ಹೆಚ್ಚು ಬರಹ ಬರೆಯಲು ಸ್ಪೂರ್ತಿ ತುಂಬುವರು,
ಎಲ್ಲಾ ಬರಹಗಾರರಿಗೆ ತಮ್ಮಲ್ಲಿರುವ ಪ್ರತಿಭೆಯನ್ನ
ಪದಗಳ ಮೂಲಕ ಹೊರ ಹಾಕಲು ಅವಕಾಶ ಕೊಟ್ಟವರು,
ಸ್ಮೇಹಿತರ ಪದಗಳಿಗೆ, ನಮ್ಮ ಪದಪುಂಜ ಸೇರಿಸಲು
ಅನುವು ಮಾಡಿದ ಜೋಗಿಯವರಿಗೆ ಅಭಿನಂದನೆಗಳು.
_ಶೃತಿ ಶೈವ

-


13 AUG 2019 AT 21:00

ಕರುಳು ಕಿತ್ತು ಬರುತಿದೆ
ಮುಗ್ದ ಜೀವಿಗಳ ಆರ್ತನಾದವೂ
ಬಡತನದ ಬೇಗುದಿಯೂ!
ಭೀಕ್ಷಾಟನೆಯಿಲ್ಲದೆ ವಿಧಿಯಿಲ್ಲ
ಅವರೊಡಲ ವೇದನೆ
ಮೂಕಜೀವಿಗಳಂತಾಗಿದೆ ಇವರ ರೋಧನೆ
ಹಸಿವಿಗಾಗಿ ತತ್ತರಿಸುತಿರುವ ಬಾಳು
ನೋಡಲಾಗದು ಆ ಮುಗ್ದ ಮನದ ಗೋಳು....

-


9 DEC 2020 AT 10:11

شمع بُجھ رہی ھے کوئی تو ا اُسے بلاؤ
جو بُجھ گئی شمع تو خالی موم کا کرے گا کیا

-


5 SEP 2021 AT 16:37

ಪ್ರಕೃತಿಯೆ ಜೀವದುಸಿರು
*****************
ಓ ದೈವದತ್ತ ಪ್ರಕೃತಿಯೆ ನೀನೆಷ್ಟು ಸುಂದರ
ಒಡಲಲಿಟ್ಟು ಸಲಹುತ್ತಿರುವ ನಿನ್ನೀ ಮನಸು ಉದಾರ
ತೋರುತ್ತಿರುವೆ ಜೀವಸಂಕುಲಗಳಿಗೆ ಪ್ರೀತಿಯ ಆಗರ
ಪ್ರಕೃತಿಯ ನಿಶ್ಯಬ್ದವು ಸಂಗೀತದಂತೆ ಕರ್ಣಕೆ ಮಧುರ||1||

ಪಚ್ಚಲೆಗಳಿಂದ ಆವೃತವಾದ ಮನಮೋಹಕ ಪ್ರಕೃತಿ
ನವವಧುವಿನಂತೆ ಕಂಗೊಳಿಸುವ ಚೆಲುವಿನ ಆಕೃತಿ
ಜೀವಿಗಳ ಬದುಕಿಗೆ ಆಸರೆಯಾಗುವ‌ ಸುಕೃತಿ
ಹಸಿರನೊದ್ದ ವನದೇವತೆಯ ಅಮೋಘ ಕಲಾಕೃತಿ ||2||

_✍️ಶೃತಿ ಶೈವ

(ಅಡಿ ಬರಹ ಓದಿ)
👇👇👇

-


5 APR 2020 AT 17:53

ದೇಶದಲ್ಲಿನ ಅಂಧಕಾರವನ್ನು ತೊಲಗಿಸೋಣ
ಮಾರಕ ರೋಗವಾದ ಕೊರೋನ ಹಿಮ್ಮೆಟ್ಟಿಸೋಣ
ಜಾತಿ-ಭೇದ, ಮೇಲು-ಕೀಳೆನ್ನದೆ ಕೈಜೋಡಿಸೋಣ
ಕೊರೋನ ಓಡಿಸಲು ಸಂಕಲ್ಪ ಮಾಡೋಣ!

ಭಾರತದೆಲ್ಲೆಡೆ ಒಗ್ಗಟ್ಟಿನ‌ ಮಂತ್ರ ಸಾರೋಣ
ಸುಳ್ಳು, ಸ್ವಾರ್ಥ, ಹಿಂಸೆ ಮನದಲಿ ದಹಿಸೋಣ
ಎಲ್ಲೆಡೆ ಸತ್ಯ, ಮಾನವೀಯತೆಯ ಪೂಜಿಸೋಣ
ವಿಶ್ವಕ್ಕೆ ಕಂಟಕವಾದ ಸೂಕ್ಷ್ಮ ಜೀವಿಯ ಹುಟ್ಟಡಗಿಸೋಣ!

ಬಡತನ ಸಿರಿತನ ಎನ್ನದೆ ಪ್ರೀತಿಯಿಂದ ಹೆಜ್ಜೆ ಹಾಕೋಣ
ನೆಮ್ಮದಿ ಜೀವನ ನಡೆಸಲು ದೇವರಲ್ಲಿ‌ ಪ್ರಾರ್ಥಿಸೋಣ
ಸರ್ವರಿಗು ಬದುಕಲ್ಲಿ ಭರವಸೆಯ ಬೆಳಕ ಹರಿಸೋಣ
ಮನೆ ಮನಗಳಿಗೂ ವ್ಯಾಧಿ ಬಗ್ಗೆ ಅರಿವು ಮೂಡಿಸೋಣ!

ಪಂಚಭೂತಗಳಲ್ಲಿ ಒಂದಾದ ಅಗ್ನಿಗೆ ವಂದಿಸೋಣ
ಸಂಕಷ್ಟದಿ ಪಾರು‌ ಮಾಡೆಂದು ಮೊರೆ ಹೋಗೋಣ
ಎಲ್ಲರು ಮನೆಯ ಮುಂಬಾಗಿಲಲ್ಲಿ ದೀಪ ಹಚ್ಚೋಣ
ನಗು ನಗುತ್ತ ಪವಿತ್ರ ದೀಪವ ಕತ್ತಲೆಯಲ್ಲಿ ಬೆಳಗೋಣ!

ಜಗತ್ತಿಗೆಲ್ಲಾ ಉತ್ತಮ ಸಂದೇಶ ರವಾನಿಸೋಣ
ದೇಶದ ಉಳಿವಿಗೆ ಸರ್ಕಾರದ ಜೊತೆ ಸ್ಪಂದಿಸೋಣ
ನೀತಿ ನಿಯಮ ಆದೇಶ ತಪ್ಪದೆ ಪಾಲಿಸೋಣ
ಸಹನೆ, ಶಿಸ್ತಿನಿಂದ ಎಲ್ಲರೊಂದಿಗು ವರ್ತಿಸೋಣ!
_ಶೃತಿ ಶೈವ






-