ಮೊದಲೆಲ್ಲಾ.....
ಸಾಲ ಕೇಳಿ ಸ್ನೇಹ
ಕಳೆದುಕೊಳ್ಳಬೇಡಿ....
ಆದರೆ...
*****
ಈಗೀಗ....
ಪ್ರೀತಿ ಕೇಳಿ ಸ್ನೇಹ
ಕಳೆದುಕೊಳ್ಳಬೇಡಿ.... 😊-
ನೀ ಎದೆಯಲಿರುವ ಹಾಗೇ
ಎದುರಲ್ಲಿರಬೇಕಿತ್ತು
ದಿನರಾತ್ರಿ ಸುರಿದರೂ
ಈ ಮಳೆ
ಇಷ್ಟೊಂದು ಬೇಸರವೇನಿಸುತ್ತಿರಲಿಲ್ಲ...
ಒಂಟಿ ಒಲವ ತಣಿಸುವ ಶಕ್ತಿ ಈ ಮಳೆಗೂ ಈಗ ಇಲ್ಲ...-
ಈಗ ನಾನೆಲ್ಲೇ ಹೋದರೂ
ನನ್ನವನ ನೆನಪದು
ನೆರಳಂತೆ ಹಿಂಬಾಲಿಸುತಿದೆ...
ಕತ್ತಲಾದರೆ
ಕಣ್ಣೀರಲಿ ಹನಿಮುತ್ತಂತೆ
ಜಾರುತಿದೆ...
Sumatisantosh-
ಇಲ್ಲಿ ಸಾವಿರ ಸಾರಿ ನನ್ನ ಸಾವಾಗಿದೆ
ಒಮ್ಮೆಯೂ
ನನ್ನವನು ನನ್ನ ಬದುಕಿಸಲೇತ್ನಿಸಲೇಯಿಲ್ಲ...
ಎದೆ ಈಗಲೂ ಒಡೆಯುತ್ತದೆ
ಒಮ್ಮೊಮ್ಮೆ ನನ್ನ ಅವನ ಮೌನಕ್ಕೆ
ಮತ್ತೊಮ್ಮೆ ನನ್ನವನ ಮಾತುಗಳಿಗೆ
ಗಟ್ಟಿ ಇದ್ದೇನೆಂದಷ್ಟೇ ಬದುಕಿದ್ದು
Sumatisantosh-
ನಡೆವ ದಾರಿಯಲಿ ಎಡವಿ ಬಿದ್ದಾಗಲೇ ಗೊತ್ತಾಗಿದ್ದು
ಬಿಟ್ಟು ಹೋದವನ ಪೂರ್ಣ ಪ್ರೇಮದಲಿ ನಾ ಪೂರ್ತಿ ಆಹುತಿಯಾಗಿರುವೆನೆಂದು...
Sumatisantosh
(read caption... )-
ಆಕೆ ಬರೀ ಮೌನಗಳ ಒಡತಿ ಅಲ್ಲ
ಅವನ ಸಾವಿರ ಪಟ್ಟು ನೋವುಗಳ ತನ್ನೊಳಗೆ
ಅದುಮಿಟ್ಟುಕೊಂಡು...
ಸತ್ಯಪ್ರೇಮದ ಸ್ವಾದವನುಣುತಿರುವ ಅವನ
ಬಾಳಸಂಗಾತಿ...
Sumatisantosh-
ಕಲ್ಲು ಕರಗಿದ ಕಥೆ ಎಲ್ಲಿದೆ
ಸತ್ಯಪ್ರೇಮವೇ ಹಿಂದಿನಿಂದಲೂ ಚಿತೆ ಏರಿದೆ
Sumatisantosh-
ಬಿಟ್ಟು ಹೋಗುವವರನ್ನು ನಾವೇ ಮುಂದೆ ನಿಂತು ಬೀಳ್ಕೊಟ್ಟುಬೀಡಬೇಕು...
ಹರಿವ ನೀರಿಗೆ ಕೆಲವೊಮ್ಮೆ ದಾರಿ ಮಾಡಿಕೊಡದಿದ್ದರೆ ...ಕೊಳಚೆಯಾಗಿಬೀಡುತ್ತದೆ...-