ಎಷ್ಟೋ ಸಲ, ಕಟುನಿರ್ಧಾರಗಳೇ ಬದುಕಿನ ದಾರಿ ಸುಗಮವಾಗಿಸೋದು...
-
ಮುಸ್ಸಂಜೆಯ ಹೊಂಬೆಳಕಲ್ಲಿ ನೀ ಹಣತೆಯಾಗಿ ನಾ ಎಣ್ಣೆಯಾಗಿ ಜೊತೆ ಸೇರಿ ಬತ್ತಿಯ ಮಾಡಿ
ಬಾಳ ದೀಪ ಹಚ್ಚೋಣಬಾಳು ಪರಿಪೂರ್ಣವಾಗಿ
ಜೀವನದ ಸಾರ್ಥಕತೆಯ ಮೆಟ್ಟಿಲೇರುವ ಬಾ ಗೆಳೆಯ......-
ಬದುಕೊಂಥರಾ ಭಾವಗೀತೆ... ಕೇಳಿದಷ್ಟೂ ಕೇಳಬೇಕೆನಿಸೋ ಹಾಗೆ ಬದುಕಿದಷ್ಟೂ ಬದುಕಬೇಕೆನಿಸುತ್ತೆ...
-
ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆ
ಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ....-
ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....
ಆದರೆ
ಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು-
ಹಾಕದಿರೂ.. ಕೈಯನ್ನು ಬಲವಂತವಾಗಿ ಹೆಣ್ಣಿನ ಸೆರಗಿಗೆ,
ಮರೆಯದಿರು ಒಂದು ಹೆಣ್ಣೇ.... ಕಾರಣ ನಿನ್ನ ದೇಹದಲ್ಲಿರುವ ಉಸಿರಿಗೆ-
ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲು
ಈಗಲೂ ಶಿಕ್ಷೆಯೇತಕೆ ಅರಿಯೆ ನಾ.......
ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು-
ಕನಸುಗಳ ಬುತ್ತಿ ಅಕ್ಷಯ ಪಾತ್ರೆಯಾಗಲಿ... ನೆಮ್ಮದಿ ನಿದ್ರೆ ನಿಮ್ಮದಾಗಲಿ...
-
ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..
ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ....-