ಏನೋ ಒಂದು ಸೆಳೆತ ನಿನ್ನಲ್ಲೇ
-
ಅಂದುಕೊಂಡತೆ ಎಲ್ಲವ ನಡೆದುಬಿಟ್ಟರೆ ದೇವಸ್ಥಾನಗಳಿಗೆ ಯಾರು ಹೋಗುತ್ತಿರಲಿಲ್ಲವೇನೋ ಅದಕ್ಕೆ ಹಣೆ ಬರಹವನ್ನು ನಮ್ಮ ಕೈಯಲ್ಲಿ ಬರೆಯಲು ಅವಕಾಶ ಕೊಟ್ಟಿಲ್ಲ....
-
ನಿನ್ನದೇ ನೆನಪುಗಳ ಹೊತ್ತು ಸಾಗುವ ನನಗೆ
ನಾನೇ ಮರೆತುಹೋಗಿತ್ತು ನಿಜವೇ ಹೌದು...-
ಪ್ರತಿಯೊಂದು ಸೋಲಿಗೂ ಬದುಕು ಕಲಿಸುವ ಪಾಠ ದೊಡ್ಡದು ಗೆಲ್ಲಲು ಪ್ರೇರಣೆಯು ಹೌದು....
-
ಹುಣ್ಣಿಮೆ ಚಂದ್ರ ಬಂದಿಹನು
ನೋಡು ನಲ್ಲ
ಅನುರಾಗದ ಸುಂದರ ಆಲಿಂಗನಕ್ಕೆ
ಇದುವೇ ಸಡಗರದ ಗಳಿಗೆ
ಭುವಿ ತಂಪಾದ
ಮುಂಗಾರು ಮಳೆಯ
ಹನಿಗಳ ಸಿಂಚನದಂತೆ ನಿನ್ನೊಲವು
ನೂರು ಕನಸುಗಳ ಹೆಣೆದು
ಪ್ರೀತಿ ನೌಕೆಯಲ್ಲಿ ಈಜಾಡುವ
ನವಿರಾದ ಬಾಳಿಗೆ ಇಬ್ಬರು
ಜೊತೆಯದ ಸುದಿನ ಇದುವೇ
ಪ್ರೇಮಾನುರಾಗದ ಹೊಸತನ
ನವಿರಾದ ದಿವ್ಯ ಬಂಧನಕ್ಕೆ
ಪ್ರೇಮದ ಕರೆಯೋಲೆ
ಜನ್ಮ ಜನ್ಮಕ್ಕೂ
ಈ ದಿವ್ಯ ಬಂಧನ ಬಯಸೋಣ ಬಾ
ನಲ್ಲ...
-
ಮರೆಯದ ಪ್ರೇಮಕಾವ್ಯ ನೀನಾದೆ
ಮರೆತರು ನಿನ್ನದೆ ಪ್ರೀತಿ ಧಾರೆ ನನ್ನೊಳಗೆ...
-
ಜನುಮದಿನದ ಶುಭಹಾರೈಕೆಗಳು ನಲ್ಮೆಯ ಹೃದಯದ ಗೆಳತಿಗೆ....
🌹🌹🌹🌹💫🌹🌹🌹🌹
ಮಾತಿನಲ್ಲಿ ಹೃದಯವಂತೆ
ಸ್ನೇಹಕ್ಕೆ ಅಪರಂಜಿ
ಮುತ್ತಿನ ಮನಸಿನವಳು
ಮುಗ್ದ ಮನಸಿನ ಮುದ್ದು ಕಿನ್ನರಿ
ಪ್ರೀತಿಗೆ ಪಾರಿಜಾತ ಇವಳು
💫💫💫
ಸದಾ ಹೊಳೆಯಲಿ ನಿನ್ನ ಬಾಳಲಿ ನಗುವ ನಕ್ಷತ್ರ
ಸದಾ ಬೆಳಗಲಿ ನಲಿವಿನ ದೀಪ
ಸದಾ ಹರ್ಷದ ಹೊನಲು ಹಾಲ್ಗೆನ್ನೆಯಂತೆ ತುಂಬಿ ತುಳುಕಲಿ ನಿನ್ನ ಬಾಳಲ್ಲಿ...
ಮತ್ತೊಮ್ಮೆ ಮನದಿಪೂರ ಹಾರೈಸುವೆ ಹುಟ್ಟುಹಬ್ಬದ ಶುಭಾಶಯಗಳು ನನ್ನ ಮುದ್ದಿನ ಗೆಳತಿ ನನ್ನ ಪ್ರೀತಿಯ ಗೆಳತಿ ನನ್ನ ಒಲವಿನ ಗೆಳತಿಗೆ
ಜನುಮದ ಗೆಳತಿ ❤️😍💝💖🧡💛💚💙-
ಬದುಕಿನ ಬೆಲೆ ಅರಿಯಲು ಕಷ್ಟಪಡಬೇಕು
ಸುಖದಿಂದ ಎಲ್ಲವ ಗೆಲ್ಲುವೆ ಎನ್ನುವ ಅಹಂಭಾವ
ಇಡೀ ಬದುಕನ್ನೇ ನಾಶ ಮಾಡಿಬಿಡುತ್ತದೆ
ಪೆಟ್ಟು ತಿಂದಷ್ಟು ಜೀವನ ಲಾಲಿತ್ಯವಾಗಿ ಅರಳುವುದು .....-