𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕  
730 Followers · 3 Following

read more
Joined 23 March 2021


read more
Joined 23 March 2021

ಸಂಬಂಧಗಳನ್ನು ಸುಟ್ಟು ಒಂಟಿಯಾಗಿ ಬದುಕಲು ಮಾಡಬೇಕಿದೆ ವಲಸೆಗೆ ತಯಾರಿ


ಕಾಡುತಿದೆಯಲ್ಲಾ....

ವಲಸೆಯ ಹಾದಿಯಲಿ ಚುಚ್ಚಲು ಕಾಯುತ್ತ ಕುಳಿತಿತ್ತು ಮಾಸಲಾಗದ ನೆನಪುಗಳೆಂಬ ಚೂಪಾದ ಚೂರಿ..

-



ಸಿರಿತನದ ಅಂಧಕಾರದಲ್ಲಿ ನಿರೀಕ್ಷೆಗಳು ಹುಟ್ಟುತ್ತಾ..

ನೆಮ್ಮದಿಯು ಗಲ್ಲಿಗೆ ತಲೆಯೊಡ್ಡಿತ್ತು ತನ್ನ ಅಂತ್ಯದ ಗಳಿಗೆಯನ್ನು ಎಣಿಸುತ್ತಾ....

-



ಕಂಡ ಕನಸುಗಳ ಹೆಣೆದು ಪ್ರಯತ್ನದ ಬೀಜ ಬಿತ್ತಿ ವ್ಯವಸಾಯ ಮಾಡಬೇಕಿತ್ತು....

ಆದರೆ

ಹೆಗಲ ಮೇಲೆ ಹೊತ್ತ ಜವಾಬ್ದಾರಿಯ ನೇಗಿಲು ಎದೆಗೆ ಹೊಕ್ಕಿ ಆಸೆಗಳೆಲ್ಲ ಅಸುನೀಗಿತ್ತು

-



ಹಸಿವಿನ ಕೂಗಿಗೆ ಒಡೆಯುತ್ತಿದೆ ಮುಗ್ದ ಧ್ವನಿಗಳ ಗಂಟಲು

ಈಗಲೂ ಶಿಕ್ಷೆಯೇತಕೆ ಅರಿಯೆ ನಾ.......

ಹರಸು ದೇವರೇ ತುಂಬಲಿ ಒಣಗಿದ ಬಡವನ ಒಡಲಿನ ಬಟ್ಟಲು

-



ನಿನ್ನನ್ನು ಜಗತ್ತಿಗೆ ಪರಿಚಯಿಸಲು ಸೆಣೆಸಾಡಿದಳು ಆಕೆ ಸಾವಿನೊಡನೆ

ಮರೆತು ನೀ ಹೇಗೆ ಯೋಚಿಸಿದೆ.. ಕ್ರೂರ ಮನಸೇ ಅವಳನ್ನು ಬಂದಿಸಿಟ್ಟೆಯೆಲ್ಲ ವೃದ್ರಾಶ್ರಮದ ಪಂಜರದೊಳಗೆ....

-



ನಮ್ಮ ನಿಜವಾದ ಅಭಿಮಾನಿ ಯಾರೆಂದರೆ


ಅದು ನಮ್ಮ




ಮಾತ್ರ.....



ಏಕೆಂದರೆ
ಅದೊಂದೇ ನಮ್ಮನ್ನು ಹುಟ್ಟಿನಿಂದ ಸಾಯುವವರೆಗೂ FOLLOW ಮಾಡುತ್ತಲೇ ಇರುತ್ತದೆ...

-



ಪ್ರಶ್ನೆಗಳ ರುದ್ರಭೂಮಿಯಲ್ಲಿ ಉತ್ತರಗಳೆಲ್ಲ ಮೌನದಿ ಚಿರನಿದ್ರೆಗೆ ಜಾರಿರಲು...


ಹುಡುಕಲು ಹೋದಷ್ಟು ಉತ್ತರವೆಂಬ ಪಳೆಯುಳಿಕೆಗಳು ಮಾತ್ರ ದೊರೆಯುವುದೇ ಹೊರತು, ಜೀವಂತ ಕುರುಹುಗಳಲ್ಲ...

-



ನಿನ್ನನ್ನು
ನಿಷ್ಪ್ರಯೋಜಕ ನೆಂದು ದೂರುವ ಜನರ ನಡುವೆ ಬದುಕುವುದು ಹೇಗೆ...?

ಶ್ರಮದಿ ದುಡಿದು ಬದುಕಿ ತೋರಿಸು ನಿನ್ನತ್ತ ಬೆರಳು ತೋರಿಸದ ಹಾಗೆ.....

-



ಆದಿ ಅಂತ್ಯದ ನಡುವೆ ಅಹಂಕಾರವೇಕೆ,

ಮರಳಿಬಾರರೂ ಕಳೆದು ಹೋದವರು ಒಂಟಿತನವೇ ನಿನಗೆ ಶಿಕ್ಷೆ........

-



ಕಾಲವೂ ಕರೆದೊಯ್ಯುವುದೂ ಹಸಿವಿನ ಗುಡಿಯ
ಬಾಗಿಲೆಡೆಗೆ


ಶಪಿಸದಿರು ಒಳಗೆ ಕುಳಿತವನಿಗೆ....

ಹಸಿವು ಕಲಿಸುವಷ್ಟು ಬೇರೆ ಯಾವ ಜ್ಞಾನವೂ ನೀಡುವುದಿಲ್ಲ, ತಲುಪಲು ಸಾಧನೆಯೆಂಬ ಯಾತ್ರೆಯ ದಿಕ್ಕಿನೆಡೆಗೆ....

-


Fetching 𝙶A𝙽𝙶A𝙳𝙷A𝚁 𝙱𝙸𝙻𝙻𝙰𝚅𝙰♕ Quotes