CAPTION
👇
ಹೆಣ್ಣು
👇
(ನಲಿದಿರುವುದಕ್ಕಿಂತ
ನೊಂದವರೆ ಹೆಚ್ಚು)
ನನ್ನ ಚಿತ್ರ ಬರಹ
(Vಚಿತ್ರ)-
ಪ್ರಕೃತಿಯ ವೈಶಿಷ್ಟ್ಯತೆಯ ಪ್ರತಿರೂಪವೇ ಹೆಣ್ಣಾಗಿ
ಬಂಧುವಾಗಿ ಸ್ನೇಹಿತೆಯಾಗಿ ಮಗಳಾಗಿ ಪ್ರೇಯಸಿಯಾಗಿ
ಅತ್ತೆಯಾಗಿ ಅಮ್ಮನಾಗಿ ಮತ್ತೊಬ್ಬರ ಭಾವನೆಗಳಿಗೆ
ಸ್ಪಂದಿಸುತ ಮನೆ ಬೆಳಗುತಿರುವಳು ಜ್ಯೋತಿಯಾಗಿ.!-
ಸಾಧನೆಗಳ ಸವಾರಿ
ಹೊರಡುವ ಅಂಬಾರಿ
ಹಟತ್ಕಾರ ಅಡಗಿಸುವ ನಾರಿ
ಹೃನ್ಮನವ ಗೆದ್ದ ಮದನಾರಿ
ಸಂಸಾರ ಸಾಗರದ ರೂವಾರಿ
ತಥ್ಯಗಳ ಹೊನಲೇರುವ ಪ್ರಭಾರಿ.!-
"ಭಾವನೆಗಳಿಲ್ಲದ ಹೆಣ್ಣಿನ ಮನಸ್ಸು
ಬರಿದಾಗಿ ಹೋದ ಬಹುದೊಡ್ಡ ತೋಟದಂತೆ"
"ಬರಿ ಹೆಸರಿಗೆ ಮಾತ್ರ ದೊಡ್ಡದಾದ ತೋಟ
ಆದರೆ ಯಾವುದಕ್ಕೂ ಉಪಯೋಗವಿಲ್ಲ...!!!-
ಇವಳು ಸರ್ವ ಕ್ಷೇತ್ರಕ್ಕೂ ಜೀವನಾಡಿ
ಮನೆಮಂದಿಗೆ ಸಮಾಜಕ್ಕೆ ನುಡಿವಳು ಹೊನ್ನುಡಿ
ಪ್ರೀತಿ ಸ್ನೇಹದ ಸೇತುವೆಗೆ ಮುನ್ನುಡಿ
ಕಲ್ಪನಾಲೋಕದ ಕಾವ್ಯಮಂಜರಿಗೆ ಕನ್ನಡಿ
ಅವಳ ಹಿತವಚನಗಳೆಲ್ಲಾ ಚಿನ್ನುಡಿ
ಕಾಯ್ವಳು ಬೆನ್ನಿಂದೆಯೆ ನುಡಿವ ಬೆನ್ನುಡಿ!-
ಮನೆಯೆಂಬ ರಥದ ಸಾರಥಿ
ಇವಳಿಗಾರಿಲ್ಲ ನೋಡಿ ಸರಿಸಾಟಿ
ಅವನಿಯೊಳಗಿರುವ ಇವಳೆ ಇಳೆಗೆ ಭಾತಿ
ಅವಳ ಸಾಧನೆಗಳಿಗೆ ಪರಿಶ್ರಮವೇ ಸಾಕ್ಷಿ
ಸಂಸಾರಕ್ಕೂ ಸಮಾಜಕ್ಕೂ ಇವಳು ಅಕ್ಷಿ.!-
ಗಂಡೆಂದರೆ ಹೀಗಿರಬೇಕು
ಮನೆಮಂದಿಗೆ ಪ್ರೀತಿಯ
ನವಚೈತನ್ಯ ಧಾರೆಯಂತೆ
ಅವಶ್ಯಕಗಳಿಗೆ ಹೊತ್ತಾಸೆಯಾಗಿರಬೇಕು//
ದುಶ್ಚಟಗಳಿಗೆ ದಾಸನಾಗದೆ
ಮನೆಯೆ ಮಂತ್ರಾಲವೆಂದು
ಹೆಣ್ಮನಗಳ ಆರಾಧಿಸಿ ಗೌರವಿಸುತ
ಅರ್ಥೈಸಿಕೊಳ್ಳುವ ಗುಣವಿರಬೇಕು//
ಪೋಷಕರ ಸಲಹುವ
ಔದಾರ್ಯತೆಯ ಮನವಿದ್ದು
ನಿಸ್ವಾರ್ಥತದೊಳು ಶುದ್ಧತೆಯ
ಸದಾ ಮೆರೆಯುವಂತಿರಬೇಕು//
ಪತಿಯು ಪರರ ದೈವವಾಗಿರದೆ
ಹೆಂಡತಿಗೆ ಶ್ರೇಷ್ಠತೆಯ ಪತಿರಾಯ
ಸೌಜನ್ಯತೆಯ ಆಗರ ಸಹಬಾಳ್ವೆಯ
ಮಹಾಸಾಗರದಂತಿರಬೇಕು//
ಮಕ್ಕಳಿಗೆ ಸಿಪಾಯಿಯಂತೆ
ಹೆಂಡತಿಗೆ ಸರದಾರನಂತೆ
ಪೋಷಕರಿಗೆ ಧೀರನಂತೆ ಮೆರೆದು
ಸದಾ ಕಾಲಕ್ಕೂ ದಿಗ್ಗಜನಾಗಿರಬೇಕು//-