QUOTES ON #ಧೂರ್ತ

#ಧೂರ್ತ quotes

Trending | Latest
3 AUG 2019 AT 0:08

ಸಾವೆಂಬ
ಸ್ವಘೋಷಿತ
ಧೂರ್ತನಿಗೆಲ್ಲಿಯ
ಭಯ,
ಸರ್ವಾಧಿಕಾರದ
ಹಮ್ಮಿನಲಿ
ತಾ ಕೈಗೆತ್ತಿಕೊಳ್ಳುವನು
ಕರುಣೆಯಿಲ್ಲದ ನಿರ್ಣಯ..

-




But, death is the most beautiful experience.

-


15 JUN 2020 AT 9:15

ಸೃಷ್ಟಿಕರ್ತನೇ ಕಾಣುತ್ತಿಲ್ಲವೇ
ಧೂರ್ತ ಜನರ ಅನ್ಯಾಯ!
ಅಪಹಾಸ್ಯ ಮಾಡುತ್ತಾ
ಮೆರೆದರೂ ಯಾಕಿಲ್ಲ ಅಪಜಯ!!

ಎಲ್ಲರೊಳು ನೋವನ್ನೇ ಬಡಿಸಿದರೂ
ಯಾಕೆ ಖುಷಿಯ ರಸದೌತಣ!
ಅಹಂಕಾರದ ಪರಮಾವಧಿಗಿಲ್ಲವಲ್ಲ
ನಿಯಂತ್ರಣ!!

ಕೆಡುಕಿನ ಹೆಜ್ಜೆಗಳಲ್ಲೇ
ಕುಣಿದು ಕುಪ್ಪಳಿಸುವಿಕೆ!
ವಿವೇಚನೆಯೇ ಮರೆತಂತಿದೆ
ಆ ಭಾವಕ್ಕೆ!!

ಮನದಾಳದಲ್ಲಿ ಹೆಮ್ಮರವಾಗಿ
ಬೆಳೆದು ನಿಂತಿದೆ ಕುಹಕತೆ!
ಸೃಷ್ಟಿಕರ್ತನೇ ಹೇಳು,
ಇವರಿಗೆ ಎಂದು ಬರುವುದು
ಸದ್ಬುದ್ಧಿಯ ಪ್ರಾಮಾಣಿಕತೆ?!

-


28 MAR 2019 AT 20:49

ಧೂರ್ತನಲಿ
ದೂತನನು
ಕಾಣುವ
ಜನರಿರುವವರೆಗೆ
ಸ್ವಾರ್ಥ
ರಾರಾಜಿಸುತ್ತದೆ

-