ಅವಳು ನಾಲಕ್ಕು ಕಣ್ಣು ಇರೋ ಸೊಡಬುಡ್ಡಿ
ನಾವು ಉಫ್ ಅಂದ್ರೆ ಹಾರೋಗೋ ಪರ್ಕೆಕಡ್ಡಿ
ಅವಳಿಗೆ ಇರೋದು ಅಬ್ಬಾ ಮಾರುದ್ದ ಜಡೆ
ಕಾಲ್ ಕೇಜಿ ಮಾಂಸ ಇಲ್ದಿರೋ ನಮ್ ತೊಡೆ..!!
ಅವಳ ಒಂದೊಂದು ತೋಳು ಸಹ ತೊಲೆ
ಕೂದಲೇ ಇಲ್ದೆಇರೋ ನಮ್ದು ಬಾಂಡ್ಲಿ ತಲೆ
ಹಾಳ ಮೂಳ ತಿಂದು ಇರುವಳು ತುಂಬಾ ದಪ್ಪ
ಇವಳನ್ನು ಬೀಳಿಸಿ ಕೊಳ್ಳಕ್ಕೆ ಬರ್ದಿರೋ ಬೆಪ್ಪ..!!
ಇವಳು ಹಲ್ಲು ಬಿಟ್ಟರೆ ಸಾಕು ಸೇಮ್ ತುರೆಮಣೆ
ನಮ್ದು ಎಲ್ಲಾ ಹಲ್ಲು ಉದುರಿರೋ ಫ್ಲ್ಯಾಟ್ ಮಣೆ
ಇವಳನ್ನು ನೋಡಿದರೆ ಡ್ರಮ್ಗೆ ಬಟ್ಟೆ ಸುತ್ತಿದಂಗಿದೆ
ನಮ್ಮನ್ನು ನೋಡಿದರೆ ಕೋಲಿಗೆ ಬಟ್ಟೆ ಸುತ್ತುದಂಗಿದೆ..!!
ಅವಳ ಎತ್ತರ ಜಾಸ್ತಿ ಏನಿಲ್ಲ ಐದು ವರ್ ಅಡಿ
ನಮ್ದು ಕಮ್ಮಿ ಏನಿಲ್ಲ ಕೇಳಬೇಡಿ ಎರಡು ವರ್ ಅಡಿ
ಇವಳು ನಡೆದು ಬಂದರೆ ಭೂಮಿ ಅದರುವುದು
ಇವಳು ಕಣ್ಣು ಬಿಟ್ಟರೆ ನನ್ ಹೃದಯ ನಡುಗುವುದು..!!
ಅವಳು ಕುಂತರೆ ಸಾಕು ಬೇಕೇ ಬೇಕು ಡಬಲ್ ಸೀಟು
ನಮ್ಮದು ಗೊತ್ತಲ್ಲ ಕೇಳಬೇಕ ಒನ್ ಬೈಟು ಸೀಟು
ಇವಳನ್ನು ಗಂಟು ಹಾಕಲು ಕಾದು ಕುಳಿತವ್ಳೇ ನಮ್ ಅತ್ತೆ
ಅವಳು ಅಂದುಕೊಂಡಂಗೆ ಆದ್ರೆ ಗ್ಯಾರಂಟಿ ನಾ ಸತ್ತೆ..!!-
11 JUL 2020 AT 19:31
18 MAY 2019 AT 13:22
ಒಳ್ಳೆ ಕೆಲಸಕ್ಕೆ ಮಾಡದಿರು ಕೊಂಕು,
ಎಲ್ಲರ ದೃಷ್ಟಿಗೆ ಗುರಿಯಾಗುವೆ ಮಂಕು,
ಕೆಟ್ಟ ಕೆಲಸ ಮಾಡುವುದೇ ನಿನಗೆ ಸೊಂಕು,
ಪ್ರತಿ ಕಾರ್ಯ ಕಾಣುವುದು ಅಂಕು ಡೊಂಕು.-
18 MAY 2019 AT 11:38
ಒಳ್ಳೇ ಕೆಲಸಕ್ಕೆ ಆಗದಿರು ಅಡ್ಡಿ,
ಹಿತ ಕೊಡುವುದು ಅಂತ
ಮೇಲಿಂದ ಮೇಲೆ
ಹಾಕದಿರಿ ಕಿವಿಯಲ್ಲಿ ಕಡ್ಡಿ,
ಈ ಕಡ್ಡಿ ನರ ನಾಡಿಗಳದು
ಹಾನಿಮಾಡುವದು ಗಡ್ಡಿ..!-
15 DEC 2023 AT 12:09
ನೀನಿದಿಯ ಕಣೆ ಸಣಕಲು ಕಡ್ಡಿ
ಲವ್ ಮಾಡೋದ್ರಲ್ಲಿ ಒಂಚೂರು ದಡ್ಡಿ
ಉಫ್ ಅಂದ್ರೆ ಆರೋಗೊ ದೇಹ
ಆದ್ರು ನಿನ್ಮೇಲೆ ಜಾಸ್ತಿ ಮೋಹ
ನೀ ಸುಮ್ಮನಿದ್ದರೂ ಆಗ್ತೀಯ ಸುದ್ದಿ
ನನ್ನ ಲೈನ್ ಆಗಲಿ ಚೂರು ವೃದ್ಧಿ
ಚುಡಿ ತೊಟ್ಟರೆ ನೀ ತುಂಬಾ ಚೂಟಿ
ಸೀರೆ ಉಟ್ಟರೆ ಅದಕ್ಕಿಂತಲು ನಾಟಿ
ಖಾಲಿ ಹಣೆ ಮೇಲೆ ಬಿದ್ದರೆ ಬಿಂದಿ
ಆಹಾ ನಿನ್ನ ಸೌಂದರ್ಯ ಇನ್ನು ಚಿಂದಿ
ಒಮ್ಮೊಮ್ಮೆ ಜೀನ್ಸ್ ಮೇಲೆ ಕುರ್ತಾ
ಸಕ್ಕತ್ ಕ್ಯೂಟ್ ನಡ್ಕೊಂಡು ಬರ್ತಾ
ಇವೆಲ್ಲ ಗೀಚೋ ನಾನು
ರಸಿಕತೆ ತುಂಬಿರೊ ಶುದ್ಧ ಲೋಪರ್
ಯಾವುದೇ ಡ್ರೆಸ್ ಹಾಕಿದ್ರು ಸಹ
ನೀನು ಮಾತ್ರ ಸೂಪರೋ ಸೂಪರ್..!!-