ಶಕುನಿಯು
ರೋಷಕ್ಕಾಗಿ ದಶಕಗಳ ಕಾಲ
ರಣ ಹದ್ದಿನಂತೆ ಕಾಯ್ದು,
ತನ್ನ ಗಾಂಧಾರ ಸಹೋದರರ ಪಾಲಿನ
ಒಂದೊಂದು ಅಗುಳು ಅನ್ನವಾ ಉಂಡು,
ಸಹೋದರರು ಮಲ ಮೂತ್ರಗಳಲಿ
ಬಿದ್ದು ಒದ್ದಾಡಿ ಸಾಯುವುದ ಕಂಡು,
ಕುರು ವಂಶದ ನಾಶಕ್ಕಾಗಿ
ಶಪಥ ಮಾಡಿ,
ಸಹೋದರರ ಮೂಳೆಗಳಿಂದ
ದಾಳಗಳನ್ನು ಮಾಡಿ,
ಶ್ರೀಕೃಷ್ಣನ ಪರಮ ಭಕ್ತನಾದ
ಶಕುನಿಯು ಸುಯೋಧನನ
ಪಕ್ಷವನ್ನೇ ಸೇರಿ,
ಚತುರತೆಯಿಂದ ಎಲ್ಲಾ ತಂತ್ರಗಳನ್ನು
ಸಾಂಗೋಪಾಂಗವಾಗಿ ಮುಗಿಸಿ
ಸುಯೋಧನನನ್ನೇ ನಾಶ ಮಾಡಿ,
ಧರ್ಮ ಸ್ಥಾಪನೆಗೆ ಸಹಕಾರಿಯಾದ🙏🙏-
22 JAN 2020 AT 19:53
3 DEC 2020 AT 19:58
ಭಜಿಸಿರೋ ಕನಕನ
°°°°°°°°°°°°°°°°°°°°°°°°°
ತಿರುಪತಿ ತಿಮ್ಮಪ್ಪನ ಆಶೀರ್ವಾದದಲಿ ಜನಿಸುತ
ತಿಮ್ಮಪ್ಪ ನಾಯಕನೆಂದು ಹುಟ್ಟು ಹೆಸರು
ದಂಡನಾಯಕನಾಗಿದ್ದು ಯುದ್ಧದಲಿ ಸೋತಾಗ
ವೈರಾಗ್ಯ ಉಂಟಾಗುತಲಿ ಹರಿಭಕ್ತರು.!
ಕಾಗಿನೆಲೆಯ ಆದಿಕೇಶವನ ಭಜಿಸಿ ಭಕ್ತನಾಗಿದ್ದು
ತಾರತಮ್ಯದ ನೀತಿಯನು ಅಲ್ಲಗೆಳೆದರು
ಸಾಹಿತ್ಯದ ವಿವಿಧ ಪ್ರಕಾರದಿ ತನ್ನನು ತೊಡಗಿಸಿ
ನಾಡಿನೆಲ್ಲೆಡೆ ಜನಜನಿತರು ಕನಕದಾಸರು.!-