ನಿನ್ನ ನಗುವಿನ ಮೊಗವೇ ಹೇಳುತಿವೆ
ಇಂದು ನಿನ್ನ ಹುಟ್ಟಿದ ದಿನವೆಂದು
ಹೆತ್ತವರು ಆನಂದದಿಂದ ಸಂಭ್ರಮಿಸಲು ಕಾರಣ
ನೀ ಭೂಮಿಗೆ ಕಾಲಿರಿಸಿದ ದಿನವಿಂದು
ಮನೆಮಂದಿಯಲ್ಲಾ ಸಂತೋಷದಿಂದ ಸಂಭ್ರಮಿಸಲು ಕಾರಣ ನಿನ್ನ ಜನುಮ ದಿನವಿಂದು
ಪುಟ್ಟ ಪುಟ್ಟ ಹೆಜ್ಜೆಯಿಡುತ್ತ ತೊದಲು ಮಾತುಗಳಿಂದಲೇ ಅಜ್ಜ ಅಜ್ಜಿಯರ ಮನಸ್ಸು ಗೆದ್ದೇ ನೀನಿಂದು
ನಿನ್ನ ಸಂತೋಷದ ಪ್ರತಿ ಕ್ಷಣವೂ ತುಂಬುತ್ತಿದೆ ಮನೆಯವರಿಗೆಲ್ಲ ಹರುಷದ ಕ್ಷಣವಿಂದು
ಹುಟ್ಟುಹಬ್ಬದ ಶುಭಾಶಯಗಳು ಶಮಿ
ದೇವರು ನಿನ್ನೆಲ್ಲ ಪುಟ್ಟ ಕನಸುಗಳನ್ನು ಆದಷ್ಟು ಬೇಗ ಆಶೀರ್ವದಿಸಿ ನೆರವೇರಿಸಲಿ..
-
1 MAY 2020 AT 3:09
26 OCT 2020 AT 13:02
#ಶಮಿ ಅಥವಾ #ಬನ್ನಿ
ಶಮಿ ಶಮಯತೇ ಪಾಪಂ
ಶಮಿ ಶತ್ರುವಿನಾಶನಮ್|
ಅರ್ಜುನಸ್ಯ ಧನುರ್ಧಾರಿ
ರಾಮಸ್ಯ ಪ್ರಿಯ ದರ್ಶನಮ್ || 🌿🌿🙏🏻
ಶಮಿ ಅಥವಾ ಬನ್ನಿ ಒಂದೇ..
ಶಮಿ ಎನ್ನುವುದು ಸಂಸ್ಕೃತದಲ್ಲಾದರೆ
ಬನ್ನಿ ಎನ್ನುವುದು ನಮ್ಮ ಕನ್ನಡದ ಆಡುಭಾಷೆಯಲ್ಲಿ.
ಬನ್ನಿಯನ್ನು ಗುರುಹಿರಿಯರಿಗೆ ನೀಡಿ
ಅವರ ಆಶೀರ್ವಾದವನ್ನು
ಪಡೆದುಕೊಂಡು,
ಚಿಕ್ಕಮಕ್ಕಳಿಗೆ ನೀಡಿ ಆಶೀರ್ವದಿಸಿ,
ಸಮಾನವಯಸ್ಕರಿಗೆ ನೀಡಿ
ಅವರ ಪ್ರೀತಿಯಗಳಿಸಿ,
ವೈರತ್ವವ ಮರೆತು,
ಬಾಳನ್ನು ಹಸನಾಗಿಸೋಣ.
ಸರ್ವರಿಗೂ ವಿಜಯದಶಮಿಯ
ಶುಭಾಷಯಗಳು🙏
-