ಈ ಮನುಷ್ಯ ಜನ್ಮವೇ ತುಂಬಾ ಅಮೂಲ್ಯವಾದುದು.
-
☑️ ಹವ್ಯಾಸಿ ಬರಹಗಾರ್ತಿ.
☑ ವಿದ್ಯಾರ್ಥಿನಿ.
☑ ️ಛಾಯಾಗ್ರಾಹಕಿ.
ನಾನು ಸ್ವಲ್ಪ ತುಂಟಿ,🙈
ಆದರೂ ಜಗಳಗಂಟಿ.😁
ಆಗಿರುವೆ ಒಂಟಿ,😇
ಆಗಲಾರೆ ಜಂಟಿ.🙆
.....☆☆.....-
#ಶಮಿ ಅಥವಾ #ಬನ್ನಿ
ಶಮಿ ಶಮಯತೇ ಪಾಪಂ
ಶಮಿ ಶತ್ರುವಿನಾಶನಮ್|
ಅರ್ಜುನಸ್ಯ ಧನುರ್ಧಾರಿ
ರಾಮಸ್ಯ ಪ್ರಿಯ ದರ್ಶನಮ್ || 🌿🌿🙏🏻
ಶಮಿ ಅಥವಾ ಬನ್ನಿ ಒಂದೇ..
ಶಮಿ ಎನ್ನುವುದು ಸಂಸ್ಕೃತದಲ್ಲಾದರೆ
ಬನ್ನಿ ಎನ್ನುವುದು ನಮ್ಮ ಕನ್ನಡದ ಆಡುಭಾಷೆಯಲ್ಲಿ.
ಬನ್ನಿಯನ್ನು ಗುರುಹಿರಿಯರಿಗೆ ನೀಡಿ
ಅವರ ಆಶೀರ್ವಾದವನ್ನು
ಪಡೆದುಕೊಂಡು,
ಚಿಕ್ಕಮಕ್ಕಳಿಗೆ ನೀಡಿ ಆಶೀರ್ವದಿಸಿ,
ಸಮಾನವಯಸ್ಕರಿಗೆ ನೀಡಿ
ಅವರ ಪ್ರೀತಿಯಗಳಿಸಿ,
ವೈರತ್ವವ ಮರೆತು,
ಬಾಳನ್ನು ಹಸನಾಗಿಸೋಣ.
ಸರ್ವರಿಗೂ ವಿಜಯದಶಮಿಯ
ಶುಭಾಷಯಗಳು🙏
-
ನೀವು ಪ್ರೀತಿಸುವ
ಜೀವಕ್ಕೆ ಸ್ವಾತಂತ್ರ್ಯ ನೀಡಿ.
ಹಕ್ಕಿಗೆ ಹಾರಲು ಹಕ್ಕಿದೆ.🌼-
❛ಮನಸ್ಸೆಂಬ ಸಮುದ್ರದಲ್ಲಿ
ಭಾವನೆಯೆಂಬ ಅಲೆಗಳ
ಭೋರ್ಗರೆತವು..
ಹೃದಯವೆಂಬ ಬಂಡೆಕಲ್ಲನ್ನು
ಅಪ್ಪಳಿಸುತ್ತಿದೆ❜.
•─────✧─────•-
ಮಾತಾಡಲು ಎಲ್ಲರಿಗೂ
ಬಂದೇ ಬರುತ್ತದೆ ಆದರೆ
ಯಾರ ಬಳಿ ಹೇಗೆ ಮಾತಾಡಬೇಕು
ಎನ್ನುವುದು ತುಂಬಾ ಮುಖ್ಯವಾದ ಅಂಶವಾಗಿರುತ್ತದೆ.
──── ◉ ────-
ಮಾತನಾಡಲೇಬೇಕು ಅನ್ನುವುದಕ್ಕೂ
ಮಾತನಾಡಲೇಬೇಕಲ್ಲ ಅನ್ನುವುದಕ್ಕೂ
ಅಜಗಜಾಂತರ ವ್ಯತ್ಯಾಸವಿದೆಯಲ್ಲಾ!!
∴━━━✿━━━∴-