ಈ ನಶ್ವರ ಲೋಕದಿ ಜೀವವಿರುವರೆಗೂ
ನಂಬೋದು ಶಾಶ್ವತನಾದ ನಿನ್ನನ್ನೇ ಹರನೇ🙏
ಈ ದೇಹದೊಳ ಉಸಿರು ,ಉಸಿರಿಗೊಂದು
ಬದುಕು ನೀನಿಟ್ಟ ವರ😍
ಸರಿ-ತಪ್ಪುಗಳ ಅಳೆದು ತೂಗಿ ಶಿಕ್ಷಿಸುವವನು
ನೀನೇ ,ರಕ್ಷೆ ನೀಡುವವನು ನೀನೇ❤️
ತಲೆ ಬಾಗೆನು ,ತಲೆದೂಗೆನು ಹೀನ ಮತಿಯ
ಮತಿಗೇಡಿಗಳೆದುರು, ಪ್ರಾಣವನ್ನೇ ಮುಡಿಪಿಟ್ಟು
ಬಿಡುವೆ ನಿನ್ನೆದುರು🤗
ಸಕಲ ಚರಾಚಾರಗಳ ಅರಿತವನು ನೀನೇ ಅರಿವು
ಮೂಡಿಸುವವನು ನೀನೇ😊
ಮತಿಗೇಡಿಗಳ ಕೊಳಕ ಅಳಿಸಿ ತುಸು ಸುಸಂಸ್ಕೃತಿಯ
ಮತಿಯ ನೀಡು, ಕರ್ಮಕ್ಕೆ ತಕ್ಕ ಶಿಕ್ಷೆ ವಿಧಿಸು🙂
ಈ ಜೀವದ ಉಸಿರಿರುವವರೆಗೂ ಹೃದಯ ಬಡಿತದ
ಪ್ರತಿ ಮಿಡಿತದ್ದಲ್ಲಿಯೂ ಮಿಡಿಯುವ ಹೆಸರು ನಿಂದೆ
ಪರಮಾತ್ಮ, ನಿನ್ ಚರಣ ದಾಸಿಯಾಗಿಯೇ ಜೀವ
ಸವೆಸುವವಳು ನಾನು ನೀ ಎನ್ನಾತ್ಮ 😊
-✍️ಭಾವನಾ 💕-
ಇಣುಕಿ ಇಣುಕಿ
ನೋಡಬೇಕೆನ್ನುವ
ಸುಂದರಿ ಅವಳು,
ನನ್ನ ತುಂಬಾ ಕೆಣಕಿ ಕೆಣಕಿ
ಕಾಟ ಕೊಡುತಿರುವವಳು.
ಇಣುಕಿ ಇಣುಕಿ ನೋಡುತಾಳ,
ಜುಮುಕಿ ತೋಟ್ಟಾಕಿ.
ಅವಳು ಕಣ್ಣೋಟವ
ನೋಡಿ ನೋಡಿ ಕೆಣಕುತಾಳ,
ನನ್ನ ಹೃದಯವ ಈ
ಉದ್ದ ಜಡೆಯಾಕಿ... ಈ ಸುಂದರ
ಮೂಗುತಿ ಸುಂದ್ರೀ ನನ್ನವಳು...!-
ಸಂಗಾತಿ ನೀನು
ಜೊತೆಗಿದ್ದರೆ ಸಾಕಿನ್ನು ,🤗
ಏಳೇಳು ಜನ್ಮಗಳ
ಒಲವನ್ನೆಲ್ಲ ಒಗ್ಗೂಡಿಸಿ
ಈ ಜನ್ಮ ನಿನಗೆ
ಧಾರೆಯೆರೆದುಬಿಡುವೆ💕
ಅಂಗೈಮೇಲೆ ಪಾದವಿರಿಸಿ
ಜಗವನ್ನೇ ಸುತ್ತಾಕುವೆ,❣️
ನಿನ್ನ ನಿಸ್ವಾರ್ಥದ
ಮಡಿಲಲ್ಲಿ ಕೊನೆವರೆಗೂ
ಮಗು ನಾನು😘
ಕೈಹಿಡಿದು ನಡೆದು ಬಂದ
ಕ್ಷಣದಿಂದ ನನ್ನಿಡೀ
ಜಗ ನೀನು❤️-
ಗರಿ ಮುದುರಿದ
ಹಕ್ಕಿಯದು
ಗರಿಗೆದರಿ ಆಕಾಶದೆತ್ತರಕ್ಕಾರಿ
ಬೆಳ್ಮುಗಿಲ ಸೀಳಿ ಹೊಸ
ಲೋಕದನ್ವೇಷಣೆ
ಮಾಡಲಾತೊರೆಯುತ್ತಿದೆ
ತಾನ್ನೆಲ್ಲ ಮಿತಿಯ
ಮೀರಿ ಹಾರಲೋರಟಿದೆ
ಬೀಳುವ ಬಿಗುಮಾನ
ತೊರೆದಿದೆ..!!-
Yq ವೇದಿಕೆಯಲ್ಲಿ ದೊರೆತ ಎಲ್ಲ ಮುದ್ಮುದ್ದು ಮನಗಳಿಗೂ
Happy friendship day😍❤🤝-
ಯಾರಿಗ್ ಬೇಕು ಈ ಅರ್ಧ ರಾತ್ರಿಲೂ
ಕಾಡೊ record ಸಹವಾಸ 🙇🏻♀️
ಸಾಕಾಗಿದೆ ನಮ್ ಈ life science
ವನವಾಸ💆
Submission date ಒಳಗೆ ಕೊಟ್ಟಿರೋ
Works ಮುಗಿಸೋದೆ ಒಂದ್ ಹರಸಾಹಸ🤦-
💛ಜೊತೆ ಹುಟ್ಟಿಲ್ಲ ಜೊತೆ ಆಡಿಲ್ಲ ಅಕ್ಕ
ನಿಮ್ ಪ್ರೀತಿಗೆ ಸಾಟಿ ಇಲ್ಲ💖
💜ಕಣ್ಣೊರೆಸಿಲ್ಲ ಅಪ್ಪಿ ಬೆನ್ತಟ್ಟಿಲ್ಲ ಆದರೂ
ನಿಮ್ಮಷ್ಟು ಧೈರ್ಯ ನಾ ಎಲ್ಲೂ ಕಂಡಿಲ್ಲ ❤️
💛ಅಕ್ಕರೆ ಮಾತುಗಳ ಸಕ್ಕರೆ ತುತ್ತನಿಟ್ಟ ನನ್ ಮುದ್ದಿನ
ಅಕ್ಕ ನೀವು ಆ ಹೆಜ್ಜೇನ ಸವಿಯಂತಹ ಸವಿ ನುಡಿಗಳ
ಮಡಿಲಲ್ಲಿ ನೆಮ್ಮದಿ ಕಾಣುವ ತಂಗಿ ನಾನು😍
💜ಬಂದು ಹೋದ ಬಂಧುಗಳೆಷ್ಟೋ ಅವರ ನಡುವೆ
ಜೊತೆ ಉಳಿದ ಭಾಂಧವ್ಯಗಳಲ್ಲಿ ಶ್ರೇಷ್ಠರು ನೀವು
💛ಕುಸಿದು ಕೂತಾಗ ಕೈ ಚಾಚಿ ಮೇಲೆತ್ತಿದವರು
ಹೆಚ್ಚಾಗಿ ನನ್ನ ಸಂಪೂರ್ಣ ಅರಿತವರು.😘
💜ಅದೆಷ್ಟೋ ಬಾರಿ ಅನಿಸಿದ್ದುಂಟು ಜೀವ ಬೇರಾದರು
ಇರ್ವರ ಭಾವ ಒಂದೆಂದು, ನಿಮ್ ಬರಹಗಳಲ್ಲಿ ನನ್ನನ್ನ
ನಾ ಕಂಡದ್ದುಂಟು 🤗
💛ಸ್ವಲ್ಪ ಮೊಂಡಿ ನಾನು ಅದರಾಚೆಗೂ ಮಮತೆ
ತೋರುವ ಸಕಾರಮೂರ್ತಿ ನೀವು😘
💜ಇರಲಿ ಈ ಅವಿನಾಭಾವ ಸಂಬಂಧ ಚಿರವಾಗಿ ಇನ್ನು
ನಿಮ್ ನಗುವಿನ ಹೊರೆತು ಕೇಳೇನೂ ಇನ್ನೇನನ್ನು🤗
💛Soulfull bestie, sister from another
mother luv u sweetie💖-