QUOTES ON #ಮಂದಾನಿಲರಗಳೆ

#ಮಂದಾನಿಲರಗಳೆ quotes

Trending | Latest
15 JUL 2020 AT 22:12

ಅಂದದ ನವಿಲಿನ ರೆಕ್ಕೆಯ ಚಿತ್ರವು
ಚಂದದಿ ತೋರಿಸಿ ಕಳಿಸಿದ ಪತ್ರವು|
ಮರದಲಿ ಕುಳಿತಿದೆ ಸುಂದರ ಹಕ್ಕಿಯು
ಸರಸರ ಜಿಗಿಯುತ ನಲಿದಿದೆ ಪಕ್ಷಿಯು||

ಹಸಿರಿನ ರೆಕ್ಕೆಲಿ ವಿಧವಿಧ ನಕ್ಷೆಯು
ಫಸಲಲಿ ನಿಂತಿಹೆ ನೃತ್ಯದ ರಕ್ಷೆಯು
ಮೆರೆದಿದೆ ಕುಣಿತದಿ ತಣಿಸುತ ಮನವನು
ನೆರೆಹೊರೆ ನೋಡುತ ನಗಿಸುತ ಜನರನು|

ಸುಂದರ ನವಿಲಿದು ಕಣ್ಣಿಗೆ ಸಗ್ಗವು
ಚಂದಿರ ಚಕೋರಿ ಮನದೊಳು ಮಗ್ಗವು
ತಂದಿದೆ ಮನಸಿಗೆ ಖುಷಿಯನು ಹೆಚ್ಚಿಸಿ
ಬಂದಿದೆ ವನದಲಿ ವೃಕ್ಷವ ಮೆಚ್ಚಿಸಿ|

ಕೊಂಬೆಯ ಮೇಲೆಯೆ ಕುಳಿತಿದೆ ಚಂದದಿ
ಕಂಗಳು ತುಂಬಿವೆ ನೋಡುತ ಬಂಧದಿ
ನೀಲಿಯ ಕೆಳಗೆಯೆ ಪಚ್ಚೆಯ ಹಾಸಿದೆ
ಬಾಲವ ಬೀಸುತ ಕಣ್ಮನ ಸೆಳೆದಿದೆ|

ಭಂಗಿಯ ನೋಡಿರಿ ಕುಂತಿಹ ನವಿಲಿನ
ಚಂಗನೆ ನೆಗೆಯುತ ಬಿಮ್ಮನೆ ನಲಿವಿನ|
ಸುಮ್ಮನೆ ಚಿಂತನೆ ಮಾಡುತ ಕುಳಿತಿದೆ
ಬಿಮ್ಮನೆ ನವಿಲದು ಠೀವಿಯ ಬೀರಿದೆ|

-


26 FEB AT 3:59

#ಶಿವರಾತ್ರಿ೨೦೨೫ #ಮಂದಾನಿಲರಗಳೆ
ಮಾಡಿದ ಪಾಪವ ಅಳಿಸುವವನು ಶಿವ
ಎಂದಿಗು ರುದ್ರನ ಪಾದಕೆ ವಂದಿಸಿ
ಭಕ್ತಿಯ ಮಾರ್ಗದಿ ನಡೆಯುತ ಸಾಗುವ
ಶಿವಶಿವ ಎನ್ನುತ ಸ್ತುತಿಯ ನುಡಿಯುವ

ಗಂಗೆಯ ಗೌರಿಯ ಪೂಜೆಯ ಮಾಡುವ
ಈಶನ ಪ್ರಣವವ ಜಪಿಸುತ ನಮಿಸುವ
ಶಿವರಾತ್ರಿಯಂದು ತ್ರಿಶೂಲಧಾರಿಯ
ಪಾವನ ಚರಣವ ಪೊಗಳುತ ಪಾಡುವ
ಶಿವರಾತ್ರಿಯ ಶುಭಾಶಯಗಳು 🎉🕉️🙏🏻

-