QUOTES ON #ತರ್ಪೂರ್ಣ

#ತರ್ಪೂರ್ಣ quotes

Trending | Latest
31 MAR 2020 AT 22:45

ಆಕಿ ನನ್ನಾಕಿ
ಬಾಳ ಬೆಳಗಿದಾಕಿ
ಬಾಳ ಬೆಳಗಾದಾಕಿ
ಆಕಿ ನನ್ನಾಕಿ
ನನ ಮನದಾಕಿ..!

[Caption,,,,,,,,,,✍]

-


29 SEP 2019 AT 9:12

ಬಣ್ಣಿಸಲು ಬರವೆನಿಸಿಹವೆನ್ನೊಳು
ಬಣ್ಣ ಬಣ್ಣದ ಭಾವಪದಗಳು
ಗುಣಿಸಲು ಗೌಣವೆನಿಸಿಹವೆನ್ನೊಳು
ಚಿನ್ನ ಚರಣದ ಚೆಲುವ ಚಿತ್ತಗಳು..!!

ನಯನಗಳೆರಡು ನೋಟದಿರಿಸಲು
ನಿತ್ಯಸೋಲುತಿಹವು ಮಿತ್ಯವೆನಿಸಿಹವು
ಕರ್ಣ ಕುಟಿರಗಳಾದ್ವಂದ್ವದ್ವಾಶಿಕೆ
ಕುಳಿಗಳವನು ಮರಳಿ ಮರಳಿ
ಮುಗಿಲಗಲ ಹಿಗ್ಗಿಸಿರಲು..!

ಕೃಷ್ಣೆಯವಳ ಕನಕ ಕಂಟ
ಸ್ವಪ್ನ ಶ್ರವಣಕೂ ಸಿದ್ಧಿಸಿಹುದು
ಸವಿಯಬೇಕೆಂಬ ಇಂಪುನಾದದ
ನಲುಮೆಯೊಲವ ನವ್ಯ ನಂಟ..!!

ನುಡಿದ ನುಡಿಯ ನುಲಿಯುತಿಹುದು
ನನ್ನವಳ ನಗುಮೊಗವ ನಡುನಡೆಯ
ನುಡಿಸಲೋಗಿ ನಡಿಸಲೋಗಿ
ನಳನಳಿಕೆಯ ನವ್ಯರಾಗದೊಳು
ನಿತ್ಯ ನಿತ್ಯವೂ ನಿರ್ಮಿಸಲೋಗಿ..!!

-


12 AUG 2020 AT 21:48

ಇಲ್ಲಿ ಎಲ್ಲರೂ ಎಲ್ಲದರಲ್ಲೂ
ಆಸೆ, ಅವಶ್ಯಕತೆಗಳನ್ನಷ್ಟೇ
ಅರಸುತ್ತಾ ಹೊರಟರೆ
ಆಳದ ಒಲವಿಗೆ ನೆಲೆಯಿರದು,
ಆಳದಿ ನಲಿವದು ನೆಲೆಯೂರದು..!

—@ಕಹಿಶಾಹಿ,,,✍

-


18 JUL 2020 AT 9:08

ನಿಜ ನಿಜ,
ನಿಜವನ್ನು ಪ್ರೀತಿಸುವಲ್ಲಿ
ನಿಜದಾನಂದವಿದೆ,
ನಿಜ ಪ್ರೀತಿಯದರಲ್ಲಿ
ನಿಜಕ್ಕೂ ಭುಜದೆತ್ತರಕ್ಕೂ
ಪವಿತ್ರ ಪ್ರಭೂತಿಯಡಗಿದೆ..!!

-


22 JUL 2020 AT 20:45

ಕತ್ತಲಾಗುಲವ ತನಕವಾದರೂ
ಎಚ್ಚರವಾಗಿಯೇ ಇರಬೇಕು
ಕಾರಣವಿಷ್ಟೆ, ಕತ್ತಲಾದಮೇಲೆ
ಕಣ್ಮುಚ್ಚುವ ಕೆಲಸ ಇದ್ದೇ ಇದೆ..!

-


3 JUL 2021 AT 10:54

ಹ್ಯಾಪಿ ಹುಟ್ದಬ್ಬ ತಂಗ್ಯಮ್ಮ,💙✨

-


9 JUN 2020 AT 12:03

ಅಪ್ಪಿದ ಎಷ್ಟೋ ಆಸೆಗಳಿಗೆ
ಒಪ್ಪದ ಸಪ್ಪೆಯ ನಿರಾಸೆಯೇ
ತಪ್ಪಿನ ತೆಪ್ಪವಾಗಿ ಆಸರೆಯಾದಾಗ
ಅಸಹಾಯಕರಾಗಿ ಬಿಡುತ್ತೇವೆ
ಎಷ್ಟೆಂದರೆ ;
ಮರಳಿ ಆಸೆಮಾಡಲೂ
ಮನದಿ ಆಸೆಯೇ ಮೂಡದಷ್ಟು..!

-


24 JAN 2020 AT 13:21

ಪ್ರೀತಿ ಎಂದರೆ
ಅಣಕದ ಅಂಕವಲ್ಲ
ಆರಾಧನೆಯ
ಅನುರೂಪದಂತಿರುವ
ಆತ್ಮಸೆಲೆಯು..!

-


26 JUN 2021 AT 0:41

ಕೆನ್ನೆ ಪೂರ್ತಿ ನನ್ನ ಮುತ್ತು
ಕನಸ ಕಸೂತಿ ನಿನ್ನ ಸ್ವತ್ತು
ಸನ್ನೆ ಮಾಡು ಸುಮ್ಮನೆ ನೋಡು
ಮೈಯ್ಯ ಕೊರಡು ಮೃದುಲ ಕಾಡು
ಮಾಡಿ ಬಿಡುವ ಜೀವ ಜೋಡು
ಕೂಡಿ ಕದಿವ ಸಿಹಿಜೇನ ಸೊಗಡು..!

ಇರುಳು ಅರಳಿ ಹೊರಳುತಿರಲಿ
ಬೆರಳು ನನದು ಮುಂಗುರುಳ ಜೋಲಿ
ಹೊಸತು ಹೊಸತು ಬಿಸಿಯ ಬಣ್ಣ
ಅಪ್ಪಿದಷ್ಟು ಅದು ಮಾಗು ಹಣ್ಣ
ಉಸಿರು ಉಸಿರಲೂ ನಂಬುಗೆಯ ಭರಿಸಿ
ಜಾರಿ ಬಿಡುವ ಸಿರಿಪ್ರೇಮ ವರಿಸಿ..!

ಹತಮಾತಿಗೆಷ್ಟು ಹಿತಮೌನ ಮಿಗಿಲು
ಕೊಂಡು ತರುವಾ ಮೌನದಾಚೆಯ ಗೌಣಗಡಲು
ತೊಲಗಿಸೆಲ್ಲಾ ಎದೆಯ ದಿಗಿಲು-ಬುಗಿಲು
ಮೀರಿ ನಿಲ್ಲುತ ಗತ-ಸ್ಥಿತಗಳಾ ಬಂಧ-ಚೆಂದವ
ಮರ ಮರಳಿ ಗೆಲ್ಲುವ ಇತಿಮಿತಿಗಳ ತಿಮಿರ ನೀರವ
ಹೇಳುತ; ನಾ ನಿನ್ನಿರುಳ ತಾಗುವ ತೂಗು ಬಾಗಿಲು,
ನೀ ನನ್ಹಗಲ ಮುಗಿಯದ ಮಿನುಗು ಮುಗಿಲು.!

-


31 MAY 2021 AT 12:30

ನಿಜ ನಿಜ ಇದೊಂದು ಹುಚ್ಚರ ಸಂತೆಯೆ,
ಒಬ್ಬೊಬ್ಬರಿಗೆ ಒಂದೊಂದರದೇ ಹುಚ್ಚು;
ಅದೇ ಮೆಚ್ಚು ಕಿಚ್ಚುಗಳ ಮುಚ್ಚಿಡುವ ಹುಚ್ಚು
ತುಚ್ಛ ಉಚ್ಚಗಳ ಬಿಚ್ಚಿತೋರುವ ಹುಚ್ಚು
ಈ ಹುಚ್ಚು ಒಬ್ಬರಿಗೆ ಹೆಚ್ಚೆಂದರೆ
ಮತ್ತೊಬ್ಬರಿಗೆ ಇನ್ನೂ ಹೆಚ್ಚೆಚ್ಚು
ಈ ಹುಚ್ಚುಗಳ ಹುಚ್ಚೆಂದವನದಂತೂ
ಇಲ್ಲೆಲ್ಲರೆದುರ ನದರಿಗೂ
ಹುಚ್ಚರಲ್ಲಿ ಉಚ್ಛ ಹುಚ್ಚು.!

-