ಅನುಮತಿ
ತುರ್ತುನಿಮಿತ್ತ ಕೆಲಸಗಳಿಗೆ ಸಿಗಲಿ ಅನುಮತಿ
ಕೆಟ್ಟದಕ್ಕೆ ಬಳಸಿಕೊಳ್ಳದಿರಲಿ ಕೊಟ್ಟ ಸಮ್ಮತಿ
ಒಳಿತು ಮಾಡುವ ಮನಕೆ ಬರದಿರಲಿ ದುರ್ಗತಿ
ಸನ್ನಡತೆಯಿಂದ ಸಿಗಲಿ ಅನವರತ ಸದ್ಗತಿ|-
20 JUL 2020 AT 18:41
24 APR 2021 AT 11:32
|ಅವಶ್ಯಕತೆ|
ಸಂಪಾದಿಸಿಲೇ ಬೇಕಿದೆ
ಅವಶ್ಯಕತೆಗೆ
ಧನ.
ಕಾರಣ ಇಳಿಯುತ್ತಲೇ ಇಲ್ಲ
ಗಗನಕ್ಕೆರಿದ ಇಂ-
ಧನ.
-
17 APR 2021 AT 8:29
|ಮಗಳು|
ತಂದೆ ತಾಯಿಗೆ ಖುಷಿ,
ಆಡುವ ಮಗಳ
ಕಂಡರೆ.
ಕಸಿವಿಸಿ ಅವಳು
ನಿಯಮಗಳ..
ಕೊಂದರೆ.
-
12 APR 2021 AT 9:07
|ಅದೇ ಕಣ್ಣು|
ಅವಳ ಕಣ್ಣು ನೋಡಿ
ಪ್ರೀತಿಗೆ..
ಸೆರೆಯಾದೆ.
ಅವಳ ಅಪ್ಪನ ಕೆಂಗಣ್ಣು
ನೋಡಿ!!
ಸರಿಯಾದೆ.
-
19 MAY 2021 AT 13:53
|ಈಗ|
ಎಲ್ಲರೂ ಎಲ್ಲರಿಂದ
ದೂರ ಇರುವುದೇ
ವಾಸಿ.
ಕರೋನ ಬಂದರೆ
ಅಂತರ ಕಾಯ್ದುಕೊಳ್ಳದೇ
ಆಗದು
ವಾಸಿ.
-
16 MAY 2021 AT 0:54
|ಗ್ರಾಮ|
ಜಗತ್ತಿನ ಅತೀ ಹೆಚ್ಚು ಜನರು
ವಾಸಿಸುತ್ತಿರುವ
ಗ್ರಾಮ.,
ಟೆಲಿ
ಗ್ರಾಮ.
-
15 OCT 2020 AT 20:44
ದೇವರ ಹುಂಡಿ
ದೇವಸ್ಥಾನದ ಜೀರ್ಣೋದ್ಧಾರಕ್ಕೆಂದು
ಮಾಡಿದ್ದಾರೆ ದೇವರ
ಹುಂಡಿ.
ಈಗ ಹೇಗಾಗಿದೆ ಅಂದರೆ,
ಪಂಚಮಿ ನೈವೇದ್ಯಕ್ಕೆಂದು ಮಾಡಿ!
ನಾವೇ ತಿಂದಂತೆ
ಉಂಡಿ.
-
18 MAY 2021 AT 23:50
|ಪರಿಸ್ಥಿತಿ|
ಹೊರಗೆ ಓಡಾಡಲು
ಕಡ್ಡಾಯ
ಪಾಸು.
ಇಲ್ಲದಿದ್ದರೆ ಬಿಸಿ ಬಿಸಿ
ಕಜ್ಜಾಯ!! ತಿಂದು
ವಾಪಾಸು.
-