QUOTES ON #ಖಾಲಿ_ಸಾಲು

#ಖಾಲಿ_ಸಾಲು quotes

Trending | Latest

ಕಟ್ಟಿಸಿಕೊಂಡ ದುಂಡು ಮಲ್ಲಿಗೆಯ ಹೂಗೇನು ಗೊತ್ತು...
ಕೊಂಡುಕೊಳ್ಳುವವನು ತನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುವನೆಂದು...
"ಗುಡಿಗೋ...ಮುಡಿಗೋ"
"ಮದುವೆಗೋ...ಮಸಣಕೋ "
ಬೇಯಿಸಿಕೊಂಡ ಅಕ್ಕಿಯ ಕಾಳಿಗೇನು ಗೊತ್ತು...
ಮಾಡಿದವನು ತನ್ನನ್ನು ಏನು ಮಾಡುವನೆಂದು..
"ನೈವೇದ್ಯಕೋ..ಸತ್ಕಾರಕೋ "
"ಪಿಂಡಕೋ...ದಂಡಕೋ"

-



ಅಳಿದುಳಿದ ಭಾವಕ್ಕೆ
ನಿನ್ನ ಹೆಸರ ಅಂಟಿಸಿಬಿಡು,
ಶಾಶ್ವತವಾಗಿ ಹಸಿರಾಗಿಬಿಡಲಿ
ಎದೆಯ ಕಾಂಕ್ರೀಟ್ ಕಾಡು!

-



ಅವನಂದ ಅವಳಿಗೆ
ನೀನೇ ನನ್ ಬಂಗಾರ,
ಅದಕ್ಕ್ ಅವಳಂದ್ಲು ಮೆಲ್ಲಗ್
ಹೇಳ ಆಮೇಲ್ ರಾತ್ರಿ
ಯಾರಾದ್ರು ಬಂದ್ ಕದ್ದಾರ!!!

-



ಎರಡೂ ಒಂದೇ;
ನಿನ್ನ ಮುತ್ತುಗಳು ಮತ್ತು ರಾತ್ರಿಗಳು
ಕಣ್ಣು ಮುಚ್ಚಿದರೆ ಸಾಕು,
ಬರಿ ಸಿಹಿಗನಸುಗಳ ಕನವರಿಕೆಗಳು!

-







ಖಾಲಿ ಖಾಲಿ ಪುಟಗಳು
ಕೇಳುತಿದೆ ಹೇಳಿ ಹೇಳಿ ಎಂದು
ಪದಗಳ ಬಂಧು
ಸಾರಿ ಸಾರಿ ಹೇಳಿದರು
ಸಾಲದು ಎಂದು
ಭಾವನೆಗಳ ಬಿಂದು
ಗೀಚಿ ಗೀಚಿ ಬರೆಯಲು
ಪದಗಳೇ ಇಲ್ಲ ಎಂದು
ನೋಡಿ ನೋಡಿ ನಗುತ್ತಿದೆ
ಖಾಲಿ ಖಾಲಿ ಹಾಳೆಗಳು ಇಂದು..
✍Thilaka kulal









-



ಕಪ್ಪು ತಪ್ಪೆಂದವರಿಗೆ
ಒಮ್ಮೆ ಹೇಳಬೇಕು;
ಕರಿಮೋಡ ನಕ್ಕಾಗಲೇ
ಮಿಂಚು ಬರುವುದೆಂದು!!

-



ಗೀಚಿ ಚಿತ್ತು ಕಾಟು ಮಾಡಿದ
ಅಪೂರ್ಣ ಕವಿತೆ ನಾನು,
ಬರೆಯದೇ ಎದೆಗಿಳಿದ
ಮೆಲೋಡಿ ಭಾವ ನೀನು!

-



ಯಾರದೋ ಹೆಸರಿಗಾಗಿ
ಗೋರಂಟಿ ಕೈತುಂಬಿತ್ತು,
ಕಂಗಳು ಕೆಂಪಾಗಿದ್ದವು!

-



ಕಣ್ಣಲ್ಲಿ ಕಣ್ಣಿಟ್ಟು ನೋಡದಿದ್ದರೆ
ಏನಂತೆ ಹುಡುಗ,
ನಾನು ಹರವಿದ ಪದಗಳನ್ನೆಲ್ಲ
ಒಂದೊಮ್ಮೆ ಎದೆಗೊತ್ತಿಕೊಂಡು
ನೋಡು;
ಪ್ರತಿ ಅಕ್ಷರದಲ್ಲಿದ್ದದ್ದೂ ಸಹ ನೀನೇ!

-



ಎದೆಕೊರೆಯುವ ನೋವುಗಳು ಸುಖಾಸುಮ್ಮನೆ
ಬರುವುದಿಲ್ಲ,ಏಟುಕದ್ದನ್ನು ಹುಡುಕಿಹೊರಟರಷ್ಟೇ ಬೆನ್ನಿಗಂಟಿಕೂರುತ್ತವೆ!

-