QUOTES ON #ಕನ್ನಡ_ಬರಹಗಳು

#ಕನ್ನಡ_ಬರಹಗಳು quotes

Trending | Latest
20 JUN 2020 AT 19:58

ವೇಶ್ಯೆಯ ಬದುಕಿನ ಚಿತ್ರಣ
ಕವನ ಮಾಲಿಕೆ
ಚತುಶ್ರಯ ಏಳೆ
ಛಂದಸು ಪ್ರಕಾರ
(Read Caption)

-


22 AUG 2020 AT 6:50

ಭಗವತಿ ತನಯನೆ ಈಶನ ಪ್ರಿಯನೆ
ಜಗದಲಿ ಪೂಜೆಗೆ ಪ್ರಥಮನು
ಮಗುವಿನ ಮನವದು ಗೌರಿಯ ಪುತ್ರನು
ನಗುತಿಹ ನಿತ್ಯವು ಗಜಾನನು||

ನೃತ್ಯವ ಮಾಡುತ ಜನರನು ನಗಿಸುತ
ನಿತ್ಯವು ಒಳಿತನು ಮಾಡುತಿಹನು
ಕೃತ್ಯದಿ ತೊಡಗುವ ಮಂದಿಯ ವಧಿಸುತ
ಸತ್ಯದ ಪಥವನು ತೋರಿಸುತಿಹನು||

ಮಂಗಳ ಪೂಜೆಯ ಪಡೆಯುವ ಬೆನಕನು
ಅಂಗಳದಲ್ಲಿಯೆ ನಲಿಯುವನು
ಕಂಗಳ ನೋಟವು ಹೃನ್ಮನ ಸೆಳೆಯುತ
ರಂಗದಿ ನೃತ್ಯವ ಕುಣಿತಿಹನು||

ಗೌರಿಯ ಮಾತಿಗೆ ನಿಷ್ಠೆಯ ಮೆರೆಯುತ
ಭಾರಿಯೆ ವಂದಿಸಿ ಸಾಗುವನು
ತೇರಲಿ ಶೋಭಿಸಿ ಶುಭವನು ಕೋರುತ
ಸಾರದ ಧ್ಯೇಯವ ಹೇಳುವನು||

ಗಣಗಳ ಅಧಿಪತಿ ನಮಿಸುತ ತಥ್ಯವು
ಕಣವದು ವಿಜಯದ ಹಾದಿಯಲಿ
ಚಣದಲೆ ಭಕ್ತಿಯ ತೋರಿಸಿ ಅವನಲಿ
ಧಣಿಯನು ನೆನೆಯುತ ತೋಷದಲಿ||

-


19 APR 2021 AT 22:00

ಹೆತ್ತವಳನ್ನು ಪದಗಳಲ್ಲಿ ಸೆರೆ ಹಿಡಿಯಲು
ಪ್ರಯತ್ನಿಸುತ್ತಿರುವಾಗಲೇ ಲೇಖನಿ ನನಗೆ
ಮೂರ್ಖನೆಂದು ನಾಮಕರಣ ಮಾಡಿತ್ತು...

-


30 NOV 2019 AT 16:35

ಪ್ರಿಯಾಂಕ ರೆಡ್ಡಿ
ಅವಳೊಂದು
ಮುಗ್ದ ಹೆಣ್ಮಗಳು
ನಮ್ಮೆಲ್ಲರ ಮನೆಮಗಳಲ್ಲವೇ!
ಮನೆಯಂಗಳದಿ
ನಳನಳಿಸುತಿದ್ದ ಕುಸುಮವಿಂದು
ದುಷ್ಟರ ಪಾಪಕೃತ್ಯಕ್ಕೆ
ಸುಟ್ಟುಕರಕಲಾಗಿದೆ
ಆ ಮುಗ್ದ ಆತ್ಮಕ್ಕೆ ಶಾಂತಿ ಕೋರೋಣ..
(Read Caption)...👇🏾👇🏾👇🏾👇🏾👇🏾

-


23 DEC 2019 AT 11:50

ವಿಶ್ವ ಮಂಟಮದೊಳು
ವಿರಾಜಿಸುತಿಹ ಜಗದ ಕಣ್ಣು
ವಿಶ್ವವಿಖ್ಯಾತಿಯೂ ತನ್ನೀ ಕಾಯಕದೊಳು
ವಿಕೀರ್ಣದೊಳು ವಿಕಸಿಸುವಿಕೆಯ ಬಿಂದು
ವಿಭಿನ್ನತೆಯಲಿ ವಿಜೃಂಭಿಸುವ
ವಿಶಾಲತೆಯ ವಿಖ್ಯಾತಿ ಈ
ವಿಜೇತ ವಿಸ್ಫುರಣ ವಿದ್ಯೋತಕ ಅನ್ನದಾತನೂ
ವಿದ್ಯಾಲಯವೆಂಬ ಹೊಲದೊಳು
ವಿವಿಧತೆಯ ಬೆಳೆಯ ಬೆಳೆದು ಅನ್ನನೀಡುವ
ವಿಶ್ವದ ಹಸಿವಿನ ಜೋಳಿಗೆಯ ನಿಟ್ಟುಸಿರು!
ವಿನಮ್ರತೆಯ ಹರಿಕಾರ
ವಿನಂತಿಸುವೆನು ನಾ ನಿಮಗೆ
ವಿನತಿಯಿಂದಲೆ ನಿನ್ನೀ ಕಾರ್ಯ
ವಿನೂತನ ˌಪುಣ್ಯವಾದುದ್ದೆಂದು.!
ವಿಭೂತಿಪುರುಷನಿವ ಕಾಯಕವೆ
ವಿಭೂಷಣವೂ ಇವನಿಗೆ ವಿಭ್ರಾಜನಾಗಿಹನು
ವಿಮಗ್ನನೂ ಅಹರ್ನಿಶಿಯಲ್ಲೂ.!
ವಿವರ್ಧಿಸಲಿ ಕಾಯಕದಲಿ
ವಿಶೇಷದೊಳಗೆ ವಿಶೇಷಣನಾಗಿರು
ವಿಶುೃತವಾಗಿ ಬೆಳೆಯುತಿರು ನಿನ್ನೀ
ವಿಶ್ವವಿದ್ಯಾಲಯದ ಮುಂದೆ ನಾವು ನಗಣ್ಯ
ವಿಶ್ವತೋಮುಖವಾಗುತಿರು ಓ ರೈತ
ವಿಶ್ವರೂಪದಿ ವಿಶ್ವಾಸನೀಯವಾಗಿರು
ವಿಶ್ವಂಭರೆಯ ಒಡಲೊಳಗೆ
ವಿಶ್ವಕರ್ತನ ಮೆಚ್ಚುಗೆಗೆ ಪಾತ್ರವಾಗುತ್ತ
ವಿಶ್ವಕುಟುಂಬಕ್ಕೆ ಅನ್ನನೀಡುವ
ವಿಳಾಸಿ ನೀ ನಾಗು ಓ ಜೀವದಾತ!
ವಿನಯಪೂರ್ವಕ ವಂದನೆಗಳೊಂದಿಗೆ.! ಅಭಿಜ್ಞಾ ಪಿ ಎಮ್..ಗೌಡ

-


26 MAY 2020 AT 19:47

ಕಂದ ಪದ್ಯ

ಛಂದೋಬದಿ

ಮಲ್ಲಿಯ ಕಾತರ
ನಲ್ಲನ ನೋಡುವ ಆತುರದಿ
ಕಾದಿರುವ ಮನ

(Read Caption

-


20 MAR 2020 AT 22:23

ಕರೋನಾ ನೀ ಏಕೆ ಬಂದೆ
ಇಲ್ಲಿಗೆ?
ಪೂರ್ತಿ ಕಾಪ್ಷನ್ ಓದಿ
(Read Caption)
👇🏾👇🏾👇🏾👇🏾👇🏾

-


10 FEB 2020 AT 20:20

ಕತ್ತಲೆಯ ಲೋಕವಿದು
ಬರೀ ಬೆತ್ತಲೆಯ ಅನಾವರಣ
ಇರುಳ ಹೊಳೆವ ರಾಣಿಗೆ
ಕತ್ತಲೆಯೆ ಕಣ್ಮಣಿಗಳ ಆವರಣ.!

ತನ್ನೆಲ್ಲ ಆಕಾಂಕ್ಷೆಗಳಿಗೂ
ತಿಲಾಂಜಲಿಯ ಬಿಟ್ಟಿಹಳು
ಭಾವನೆಗಳಿಗೆ ಕೊಳ್ಳಿಯೆಂಬ
ಅಗ್ನಿಜ್ವಾಲೆಯ ಕಿಡಿ ಹಚ್ಚಿಹಳು..!

(Read Caption) 👇🏾👇🏾👇🏾👇🏾

-


3 MAY 2020 AT 10:18

ಮುಂಗಾರಿನ ಮಳೆ
ಸಂಗಮದಲಿ ಬೆಳೆ
ದಂಗಾದ ಕೊಳೆಯು ಕೊಚ್ಚುತಿದೆ/
ಬೆಂಗದಿರನ ಕಳೆ
ತಂಗಾಳಿಯ ಸೆಳೆ
ಕಂಗಳ ಕಾಂತಿಯು ಚಿಮ್ಮುತಿವೆ//

ಚಿಗುರುತಿವೆ ಹಸಿರು
ಜಿಗಿಯುತಿವೆ ಮನವು
ನಿಗಿನಿಗಿ ಕಾಮನ ಬಿಲ್ಲಿನಲಿ/
ನೆಗೆಯುತ ನಲಿಯುತ
ಧಗೆಯನು ತಳ್ಳುತ
ತಗಾದೆ ತೆಗೆಯದೆ ತಂಪಿನಲಿ//

ರೈತನ ಬದುಕಲಿ
ಜತನದ ಚಿಂತೆಯು
ಹಿತಮಿತವಿಲ್ಲದೆ ಸಾಗುತಿದೆ
ಶತಕದ ನೋವಿನ
ಕಥನವು ಮಿಂಚಿತ
ಪಥದೊಳು ಶ್ರಮಿಕನು ನಿಂತಿಹನು//

ವರುಣನು ತಂದಿಹ
ಹರುಷದ ಧಾರೆಯ
ಕರಿನೆರಳ ಛಾಯೆ ಮುಚ್ಚುತ/
ಬರವನು ತಡೆದಿದೆ
ತರತರದಿ ಧರೆಯು
ಜರತಾರಿ ಹಸಿರಲಿ ಹೊಳೆದಿದೆ// ಅಭಿಜ್ಞಾ ಪಿ ಎಮ್ ಗೌಡ

-


18 JAN 2020 AT 16:29

ಎಷ್ಟೆ ಸಿರಿವಂತರಾದರು
ಸಹಾಯ ಮಾಡುವ ಮನಸ್ಸಿರಲಿ
ಬಡತನವಿದ್ದರು
ಹೃದಯ ಶ್ರೀಮಂತಿಕೆಯಿರಲಿ
(Read Caption)
👇🏾👇🏾👇🏾👇🏾👇🏾👇🏾👇🏾

-