ಸಂಸ್ಕಾರವುಳ್ಳ ಮಾತುಗಳಿಂದ ಪುಕ್ಸಟೆಯಾಗಿ,
ಇನ್ನೊಬ್ಬರ ಹೃದಯವನ್ನು ಕದಿಯಬಹುದು..-
ನನ್ನ ಕಣ್ಣುಗಳಲ್ಲಿ ಪ್ರತಿಭಟಿಸಲು...
ಅನುಮಾನಗಳ ನೆರಳಿನಲ್ಲಿರುವ ಸಂಬಂಧದ
ಜೊತೆಗೆ ಯಾವ ಚೌಕಾಸಿ ಮಾತುಗಳು ಕೂಡ ಬೇಡ,
ಅವರು ನಮ್ಮ ಯೋಗ್ಯತೆಗೂ ಯೋಗ್ಯರಲ್ಲ....-
ಅನುಭವವು ಸುಖಾಸುಮ್ಮನೆ ದೊರೆತ್ತಿಲ್ಲ,
ಸೋಲು-ಗೆಲುವಿನ ಪರದೆಯಿಂದಲೇ ಉಸಿರಾಡಿದೆ...-
ಗೆಲುವು ಸುಮ್ಮನೆ ದಕ್ಕಿ ಬಿಡುವುದಾಗಿದರೇ,
ಕಾಣುವ ಕನಸ್ಸಿನ ಅರ್ಥವೇ ಶೂನ್ಯವಾಗುತ್ತಿತ್ತು...-
ಗೆಲುವಿನ ಕೇಕೆ ಹಾಕುವ ಮೊದಲು,
ಅವಮಾನಗಳ ಮೆಟ್ಟಿಲುಗಳನ್ನು
ಜಿದ್ದಿಗೆ ಬಿದ್ದು ದಾಟಲೇಬೇಕು...-
ಕಗ್ಗತ್ತಿನಲ್ಲಿ ಯಾವ ಸುಳ್ಳು ಕೂಡ ಹೆಚ್ಚು ದಿನ ಉಸಿರಾಡಿಲ್ಲ,
ಬೆಳಕಿನಾಚೆಗೆ ಅವು ಉಸಿರು ಬಿಟ್ಟಿವೆ...-
ಅವನೊಬ್ಬ ಅವಳ ಹಿಡಿ ಒಲವಿಗಾಗಿ ತನ್ನ ಉಸಿರನ್ನು ಚೆಲ್ಲಿದ,
ಅವನಿಗೆ ಉಸಿರನ್ನು ಬಿಕ್ಷೆಯಾಗಿ ನೀಡಿದವಳು ತನ್ನ ಕೊನೆಯ ಉಸಿರಿನವರೆಗೂ ಕಣ್ಣೀರಿಗೆ ಬಾಡಿಗೆ ಕಟ್ಟುತ್ತಿದ್ದಳು....-
ಹೇ ಹುಚ್ಚು ಮನಸ್ಸೇ,
ನೀನೆಕೆ..? ಸೋಲಿಗೆ ರೋಧಿಸುತ್ತಿರುವೆ..?
ಇಲ್ಲಿ ನಿನ್ನ ಸೋಲಿಗೆ ಹೆಗಲಾಗುವವರು ಯಾರಿಲ್ಲ.
ಆದರೆ, ಒಬ್ಬೊಬ್ಬರು ಒಂದೊಂದು ಸಲಹೆ, ಉಪದೇಶ
ಕೊಡುವ ಧಾರಾಳತೆಗೂ ಕೊರತೆಯಿಲ್ಲ.
ಬದುಕು ಎಂಬುದು ನಿನಗೆ ಯಾವತ್ತಿಗೂ ಇನ್ನೊಂದು ಅವಕಾಶವನ್ನು ಕೊಡುತ್ತಲೇ ಇರತ್ತೆ.
ಅವಕಾಶದ ಬಾಗಿಲು ತೆರೆಯುವವರೆಗೂ
ಪ್ರಯತ್ನಕ್ಕೆ ಅಲ್ವಿದಾ ಹೇಳದಿರು...-
ಬೇರೆಯವರ ಬದುಕಿನ ಸುತ್ತ ಗಿರಗಿಟ್ಲೆ ಹೊಡೆಯುವ ನಮ್ಮ ಮಾತುಗಳೆ ನಮ್ಮ ವ್ಯಕ್ತಿತ್ವವನ್ನು ಸಮಾಧಿ ಮಾಡುತ್ತದೆ....
-
'ಸಾಯದ ಸಾಲುಗಳ' ಒಡತಿಯೆ ಕೇಳು,
ನಿನ್ನ ನೆನಪುಗಳ ಜಾತ್ರೆ ಮುಗಿಯುವುದೇ ಇಲ್ಲ.
ಅದಕೆ, ಅಸಹಾಯಕನಾಗಿ ಅಕ್ಷರಗಳನ್ನು
ತಿದ್ದಿತೀಡಿ ಜೋಡಿಸಿಕೊಳ್ಳುವೆ...-