ಸುಂದರವಾದ ಅನುಬಂಧದಲ್ಲಿ
ಬತ್ತಿ ಇಟ್ಟು ಸಡಗರ ಪಡುವ
ನಿನ್ನ ಅಡ್ನಾಡಿತನಕ್ಕೆ
ನನ್ನದೇನೂ ತಕರಾರಿಲ್ಲ!!
ಕಾರಣ ಇಷ್ಟೇ,,
ಅದೇ ಬತ್ತಿಯನ್ನು ಎಣ್ಣೆಯಲ್ಲದ್ದಿ
ಜ್ಯೋತಿ ಬೆಳಗಿಸುವ ಕಲೆ
ನನಗೆ ಚೆನ್ನಾಗಿಯೇ ಕರಗತವಾಗಿದೆಯಲ್ಲ!!..-
26 JUN 2020 AT 19:18
19 MAR 2019 AT 10:18
ಸ್ಟ್ರೇಟು ದಾರಿಯಲಿ
ಅಡ್ಡ ದಾರಿ ಹಿಡಿದು
ಪದಗಳ್ನ ದೋಚುವ
ಅಡ್ನಾಡಿ ಕವಿಗಳು.
ಯದ್ವಾತದ್ವಾ ಕದ್ದ
ಪದಗಳ್ನ ಗುಡ್ಡೆ ಹಾಕಿ
ಭಾವನೆಗಳ್ನ ಬೆರೆಸಿ
ತಯಾರಿಸಿದ ಪಾಕವೇ
ಸ್ವೀಟಾದ ಕವಿತೆಗಳು.-