ಸಹಾಯ ಮಾಡಿ ಫೋಟೊ ತೆಗೆಸಿಕೊಂಡು
ಸೋಶಿಯಲ್ ಮೀಡಿಯಾದಲ್ಲಿ ಹಾಕಿ
ಲೈಕ್ ಗಿಟ್ಟಿಸಿಕೊಳ್ಳುತಿರುವವರ ನಡುವೆ
ಎಲೆ ಮರೆಯ ಕಾಯಾಗಿ
ಸೋತವರ ಪಾಲಿಗೆ ಧೈರ್ಯವಾಗಿ
ಅನಾಥರ ಪಾಲಿಗೆ ಬಂಧುವಾಗಿ ನಿಂತಿರುವ
ಆಲದಮರವೆ ಅಸುನೀಗಿತು.-
ನಿಜಕ್ಕೂ ನೀವೊಂದು
ಮರೆಯದ ಮಾಣಿಕ್ಯವೇ
ಮಾಣಿಕ್ಯದ ಹೊಳಪು
ಎಂದು ಮಾಸದು,
ಹಾಗೆ ನಿಮ್ಮ ನೆನಪುಗಳು
ಅಭಿಮಾನಿಗಳ ಮನದಲ್ಲಿ
ನಿತ್ಯ ವಿನೂತನವು...-
ಹಣೆಯಲ್ಲಿ ಬರೆದಿದ್ದನ್ನು
ಯಾವ ಜೋತಿಷ್ಯದಿಂದಲೂ
ಬದಲಾಯಿಸಲು ಸಾಧ್ಯವಾಗದು
ಲೋಹಿತಾಶ್ವ ಅನ್ನುವುದು
ಅಲ್ಪಾಯುಷಿ ಆದರೆ ಈಗ
ಪುನೀತ್ ಅನ್ನೋದು ಇನ್ನೇನು..!!??-
ಸಾವನ್ನು ಅಪ್ಪಿ ಪ್ರಥ್ವಿಯ
ತೊರೆದು ಹೋಗಲು ಇಷ್ಟೊಂದು
ಅವಸರವಿತ್ತೆ ಅಪ್ಪು..??
ನಗುವಿನ ಆರ್ಭಟ ನಿಲ್ಲಿಸಿ
ಹೊರಟೆ ಬಿಟ್ಟರು ಆರ್ಯಭಟರು.-
ಮರೆಯಲಾದೀತೆ
ನಿಮ್ಮಯ ಮೊಗವ
ಮೊಗದಲ್ಲಿನ ಆ ನಗುವ
ಆದರೂ ನೀವಿಲ್ಲ ಎಂಬುದೇ
ಒಂದು ನೋವಿನ ಹಿಂಸೆ🙂-
ಉಮ್ಮಳಿಸಿ ಉಮ್ಮಳಿಸಿ ಬಂದರು ಬತ್ತದ ಕಣ್ಣೀರು
ನಮ್ಮಯ ಹೃದಯದಲ್ಲಿ ನೀವೆಂದೂ ಅಚ್ಚ ಹಸಿರು-
ಬರೆದಿಟ್ಟಂತೆ ಬದುಕಲು ಸಾಧ್ಯವಾಗದು
ಆದರೆ ಬರೆದಿಡುವಂತೆ ಬದುಕಲು ಸಾಧ್ಯವೆಂದು
ತೋರಿಸಿಕೊಟ್ಟ ಕರ್ನಾಟಕದ ಪ್ರತಿಯೊಂದು ಮನೆ ಮನದ ಆಸ್ತಿ-
ದಾನಧರ್ಮ ಮಾಡಿದರೆ ಭಗವಂತನು ನಿನ್ನ ಮೆಚ್ಚುವನು
ಎನ್ನುವ ಮಾತು ಸುಳ್ಳಾಯಿತು
ನಗುತ್ತ ಇದ್ದರೆ ನಿನ್ನ ಆಯಸ್ಸು ಅಧಿಕ ಅನ್ನುವ ಮಾತು ಸುಳ್ಳಾಯಿತು
ಸತ್ಯವಾಗಿ ಕಣ್ಣ ಮುಂದೆ ಉಳಿದಿರುವುದು ಒಂದೇ
ನಿಮ್ಮ ಒಳ್ಳೆಯ ಕಾರ್ಯ, ನಿಮ್ಮಯ ಸರಳ ವ್ಯಕ್ತಿತ್ವ
ಅದರಿಂದ ದೇವರಿಗೂ ಅಸೂಯೆ ಆಗಿತ್ತು ನಿಮ್ಮ ಮೇಲೆ-
ಈ ದಿನ,
ಕಣ್ಣೀರಿನಿಂದ ಕಣ್ಣುಗಳು ಕುರುಡಾಗಿವೆ.
ನೋವು ಹೃದಯವನ್ನು ಬಿಗಿದಪ್ಪಿಕೊಂಡಿದೆ.
ಉಸಿರಿನ ಪ್ರತಿ ಶಾಖದಲ್ಲಿಯೂ ಕೂಡ ಬಿಸಿಯೇರಿದೆ.
ಆ ವಿಧಿಯ ಅಟ್ಟಹಾಸಕ್ಕೆ ನನ್ನ ಧಿಕ್ಕಾರ...
ಪುನೀತ್ ಸರ್...
ನೀವು ಮುಗಿದು ಹೋಗುವವರಲ್ಲ.
ಆ ವ್ಯಕ್ತಿ, ಆ ವ್ಯಕ್ತಿತ್ವ ಯಾವತ್ತಿಗೂ ಅಮರ...-