ನನ್ನ ಕವನಗಳು,
ನವೋದಯ - ಆಕೆ ಒಪ್ಪಿದಾಗ;
ಪ್ರಗತಿಶೀಲ - ಆಕೆ ಒಪ್ಪದಿದ್ದಾಗ;
ನವ್ಯ - ಆಕೆಯ ಮನೆಯವರು ಒಪ್ಪದಿದ್ದಾಗ;
ಬಂಡಾಯ - ನನ್ನ ಮನೆಯವರು ಒಪ್ಪದಿದ್ದಾಗ;
ತತ್ವಪದಗಳು - ಜಗತ್ತು ಒಪ್ಪದಿದ್ದಾಗ;
ಜಾನಪದ - ಜಗತ್ತು ಒಪ್ಪಿದಾಗ.-
~YourQuoteಜೋಗಿ~
ನನ್ನೆಲ್ಲಾ ಸಾಲುಗಳಿಗೆ
ಬೇಕಿತ್ತು ಕೋಟು,
ಆಗ ನನ್ನ ನೆರವಿಗೆ ಬಂತು
Yourಕೋಟು.
YourQuote ಜೋಗಿ
ಸದಾ ಹಾಕಿದ ಸವಾಲನು,
ನನ್ನ ಸಾಮರ್ಥ್ಯ ಹೆಚ್ಚಿಸಲು.
ನನ್ನೊಳಗಿದ್ದ ಬರಹಗಾರನ
ಬಡಿದೆಬ್ಬಿಸಲು.
ಪ್ರತಿದಿನ ಬರುವೆ
ಸವಾಲನು ಕೊಡುವೆ
ಪ್ರಶಂಸೆಯೂ ನೀಡುವೆ
ಹೀಗೇ ಗುರುವಾಗಿ ನೆಡೆವೆ.
YourQuote ಜೋಗಿಗೆ
ಈ ಪ್ರೀತಿಯ
ಕಿರಿಯ ಹೃದಯದ ಜೋಗಿ(ತಪಸ್ವಿ)ಯ
ಹಿರಿಯ ನಮನಗಳು.
ಸರ್ ಸದಾ ನಿಮ್ಮೊಂದಿಗೆ ನಾವು..😊-
"ಅಭಿವರ್ಣಿತ"
ಅಭಿನಂದನ
ಶತ್ರು ಪಡೆಯ ಗೆದ್ದು
ಬಂದ ವೀರನೂ
ಉಗ್ರರ ಸೊಕ್ಕು
ಮುರಿದು ಮುಗುಳ್ನಕ್ಕ
ಹೆಮ್ಮೆ ಪುತ್ರನೂ
ಚೆಂಡಾಡಿಸಿದ
ಪಾತಕಿ ಅಂಗಳದಿ
ಅಂಜದ ಗಂಡೂ
ಜೀವದಂಗನು
ತೊರೆದು ತಾಯ್ನಾಡಿಗೆ
ಕೀರ್ತಿ ತಂದನೂ
ಭಾರತಾಂಬೆಯ
ಜಗದೇಕ ಮಲ್ಲನು
ಅಭಿನಂದನೂ
ಅಭಿಜ್ಞಾ ಎಮ್
-
#ನಗು
ನಕ್ಕು ನಲಿವ ಸದ್ದು ನನ್ನ
ಇಲ್ಲಿ ತನಕ ಸೆಳೆಯಿತು;
ನಗುವಿನಲ್ಲಿ ಒಲವು ಸೇರಿ
ನನ್ನ ಇಲ್ಲಿ ಕರೆಯಿತು.
ನಗುವೆ ಒಂದು ಮಾಯ ಜಾಲ
ಸಿಕ್ಕಿದಂಗೆ ಸುಳಿಯಲಿ;
ನಕ್ಕು ನಗಿಸಿ ಬಾಳುವುದು
ಶ್ರೇಷ್ಠ ಇಂದು ಜಗದಲಿ.
ಮಂದಹಾಸ ಮೊಗದಲಿ
ಮುತ್ತಿನಂತೆ ಜಗದಲಿ;
ನಗಲು ನಿನಗೆ ಏನು ಬೇಕು?
ಶುಧ್ಧ ಹೃದಯವೊಂದೆ ಸಾಕು.-
ಪ್ರಕೃತಿಗಿಂತ ದೇವಾಲಯವುಂಟೆ?
ಅಲ್ಲಿ ನೆಡೆಯುವ ವಿಸ್ಮಯಗಳನ್ನು
ಬೇರೆಡೆ ಕಾಣಲು ಸಾಧ್ಯವೇ?
"ಪ್ರಕೃತಿಯನು ಪೂಜಿಸು ರಕ್ಷಿಸು"-
#ಸನಿಹ
ನೀ ಬಂದಾಗ ಸನಿಹ;
ಸರಿಯಿತೆನ್ನ ವಿರಹ!
ನಿಂತ ನೀರಂತಿದ್ದ ಜೀವನಕೆ;
ಹರಿಯಲೊಂದು ಹಾದಿ ದೊರೆಯಿತು.
ತಮಂಧದಲ್ಲಿ ಮಿಂದೇಳುತ್ತಿದ್ದ ಮನಕೆ;
ಹೊಂಬೆಳಗು ಬಂದು ನಲಿಯಿತು.
ಸಾಗರದಿ ಹುಟ್ಟಿಲ್ಲದೆ ತೇಲುತ್ತಿದ್ದ ದೋಣಿಗೆ;
ಹರಿಗೊಲು ಸಿಕ್ಕಿ ಹೊಸ ಹುಟ್ಟೊಂದ ಪಡೆದಂತಾಯಿತು.
ಬೆಂದ ಮರಳುಗಾಡಿನಲ್ಲಿ ಸಿಕ್ಕ ತೊರೆಯಂತೆ
ನೀ ಬಂದೆ ಎನ್ನ ಜೀವನದಲಿ!!
ಯಾಕೋ ಏನೋ ತಿಳಿಯೆ, ನೀ ಇದ್ದರೆ ಬಳಿ
ಮನದ ತಲ್ಲಣಗಳಿಗೆ ಬಿಗಿವುದು ಸರಪಳಿ.-
ಹೆಚ್ಚಾಗಿ ಹಚ್ಚಿಕೊಂಡಿರುವೆ;
ಹುಚ್ಚನೇನಲ್ಲ!
ಹುಚ್ಚು ಹುಚ್ಚಾಗಿ ಪ್ರೀತಿಸುತ್ತಿರುವೆ;
ಹೆಚ್ಚೇನಲ್ಲ!
ಹುಸಿ ಮುನಿಸಿಂದ ಹೊಮ್ಮಿದ ಪ್ರೀತಿಗೆ -
ಸರಿಸಾಟಿಯಿಲ್ಲ!
ಬೆಸೆದಿರುವ ಬಂಧನಕೆ;
ಕೊಂಡಿಯೆಂಬುದಿಲ್ಲ.
ಅಕ್ಕ-ತಮ್ಮನ ಈ ಬಾಂಧವ್ಯಕೆ-
ಕೊನೆಯೆಂಬುದಿಲ್ಲ!
ನಮಗೆ ನಾವೇ
ಸರಿಸಾಟಿಯಲ್ಲ!!-
ಕಾದಂಬರಿ ಓದುವಾಗ ಬರುವ ಏಕಾಗ್ರತೆ,
ಈ ಪಠ್ಯಪುಸ್ತಕ ಓದುವಾಗ ಬಂದಿದ್ ನೋಡೇ ಇಲ್ಲ.-