ನಿನ್ನ ನೆನಪುಗಳು ಬೆನ್ನತ್ತಿ ಬಂದಾಗ
ನಾನು ತಲುಪುವ ತಾಣ ಮಾತ್ರ ನಿನ್ನೆಡೆಗೆ.-
3 APR 2023 AT 23:10
ವರ್ಷಗಳ ಗಾಲಿ ಮುಂದೊಡುತಿರಲು,
ಬೆರಗಿನ ಬಾಲ್ಯ ಚೂರು ಹೆಚ್ಚೇ
ಬೇಕೆನಿಸುತ್ತದೆ.....
ಅಲ್ಲಿ ಆಯ್ಕೆಗಳ ಗೊಂದಲವಿರಲಿಲ್ಲ,
ಒತ್ತಡಗಳ ಮೂಟೆಯದು ಕಂಡಿರಲಿಲ್ಲ....
ಬರೀ ಕನಸುಗಳು,
ಮಣ್ಣುಮೆತ್ತಿದ ಕೈಗಳು!
ಅಪ್ಪ ಕೊಡಿಸಿದ ಬಣ್ಣದ ಗೊಂಬೆ,
ಹತ್ತಿ, ತೂಗಾಡಿದ ಮಾವಿನ ರೆಂಬೆ!
ಚಿಂದಿ ಬಟ್ಟೆಯ ಕುಲಾವಿ,
ಅಮ್ಮನೆದುರು ಮುಗ್ಧ ಮನವಿ...
ಇವಿಷ್ಟೇ ಸಾಕಿತ್ತು.
'ನೆಮ್ಮದಿ'ಯೆಂದು ಕರೆಯುವುದಕ್ಕೆ
ಮುಕ್ತವಾಗಿ ನಗುವುದಕ್ಕೆ....-