*ಹನಿಗವನ ಸ್ಪರ್ಧೆಗಾಗಿ* *"ಚೋಮನ ದುಡಿ"*
ಚೋಮನ ದುಡಿ ಕಾದಂಬರಿ,
ಇದಲ್ಲ ಕೇವಲ ಚೋಮನ ಬಗೆಗಿನ ಕಾದಂಬರಿ,
ಆ ಕಾಲದಲ್ಲಿನ ಶೋಷಿತ ವರ್ಗದವರೆಲ್ಲರ,
ಸಾಂಕೇತಿಕ ರೂಪವಾಗಿಹುದೀ ಕಾದಂಬರಿ!
ಚೋಮನು ದಲಿತ ವ್ಯಕ್ತಿಯಾಗಿದ್ದುಕೊಂಡು,
ತನ್ನ ಕನಸುಗಳನ್ನೆಲ್ಲ ಈಡೇರಿಸಿಕೊಳ್ಳಲಾಗದ ಚಿತ್ರಣ,
ಆಳ್ವಿಕೆ ಮಾಡುವ ವರ್ಗದವರ ಆಳಾಗಿ ಉಳಿಯಬೇಕಾದ ಸನ್ನಿವೇಶ,
ಆಗಿನ ಕಾಲದ ಇಡೀ ವ್ಯವಸ್ಥೆಯನ್ನು ಬಿಂಬಿಸುವಂತಿಹುದು!
-
13 OCT 2020 AT 18:27
22 OCT 2019 AT 19:47
ಒಮ್ಮೆ ನನ್ನ ಕನಸ್ಸಿನಲ್ಲಿ ಅರಿವಿಲ್ಲದೆ
ನಡೆದೋದೆ ಸ್ಮಶಾನದಲ್ಲಿಗೆ.
ಡಮ ಡಮ್ಮ ಡಕ ಡಕ್ಕ ಸದ್ದು
ಒಂದು ಕ್ಷಣ ಬೆಚ್ಚಿಟ್ಟಂತಾದೆ..!
ಅದು ಚೋಮನ ದುಡಿಯ ಸದ್ದು..
ಅದಕ್ಕಾವ ನಾದ ಮಾಧುರ್ಯವಿಲ್ಲ
ಅದು ಅವನ ದುಃಖ ಮರೆಸೋ ಸಾಧನ
ಕುಡಿತ ಅವನ ಜೀವನ.
ಪಂಜುರ್ಲಿ ಭೂತಕ್ಕೆ ನಮಸ್ಕರಿಸಿದ
ಮರಳಿ ಬಂದ ಎತ್ತುಗಳ ತಂದು
ವೀರಬಾಹುವನ್ನ ಕಾಡಿ ಬೇಡಿ
ಕಡೆಗೆ ಸ್ಮಶಾನವನ್ನೇ ಬಳುವಳಿಯಾಗಿ ಪಡೆದು
ರೊಚ್ಚಿಗೆದ್ದ ಉತ್ತುತ್ತಿದ್ದಾನೆ,
ಹದಮಾಡಿ ಬಿತ್ತುತ್ತಿದ್ದಾನೆ.
ನನ್ನ ಕನಸ್ಸಿನಲ್ಲಿ ಕಡೆಗೂ ಅವ ಗೆದ್ದ
ಕೃಷಿಕನಾಗೋ ಅವನಾಸೆ ಫಲಿಸಿತು..!-