zainu_ kanyadi_   (insta/ @zainu_kanyadi_)
61 Followers · 28 Following

If u want more updates follow Instagram🌹 follow and support guys 🥰💝
Joined 9 August 2019


If u want more updates follow Instagram🌹 follow and support guys 🥰💝
Joined 9 August 2019
28 DEC 2023 AT 3:54

ಮೇಣದ ಬತ್ತಿಗೆ
ಸಮಯ ಮೀರಿದ ನಂತರ
ಅರ್ಥವಾಯಿತು..
ಇಷ್ಟುದಿನ ಎದೆಯಲ್ಲಿ ಬಚ್ಚಿಟ್ಟು
ಕೊಂಡದ್ದು ,
ತನ್ನನ್ನೆ ಸುಟ್ಟು ಹಾಕುವ
ದಾರವನ್ನು ಎಂದು …

-


25 DEC 2023 AT 23:30

ಎಷ್ಟೆ ಇಷ್ಟವಿದ್ದರು
ಬೇರ್ಪಡಲೆಂದು ನಿಂತ
ಸಂಬಂಧಗಳಿಗೆ ಅತಿಯಾಗಿ
ಅಂಗಲಾಚದಿರು.
ಅದು ಒಂಥರ ಬದುಕೆಂಬ
ಸಂತೆಯಲ್ಲಿ ನಮ್ಮ ತನವನ್ನು
ಹರಾಜಿಗೆ ಇಟ್ಟಂತೆ…

-


23 DEC 2023 AT 19:55

ಸಂಭಂದಿಕರಿಂದ
ಆದಂತಹ ಕೆಲವು
ನೋವುಗಳು ಹಾಗೆಯೆ,
ಎಲ್ಲರಿಂದ,ಎಲ್ಲದರಿಂದಲು
ನಮ್ಮನ್ನು
ದೂರಮಾಡಿಬಿಡುತ್ತದೆ…

-


1 DEC 2023 AT 5:42

ದೇವರ ಮೇಲಿರುವ
ನಂಬಿಕೆಗಿಂತಲು
ಮನುಷ್ಯರ ಮೇಲೆ ನಂಬಿಕೆ
ಇಡುವಂತವರು
ಬಿಕ್ಷುಕರಲ್ಲದೆ ಮತ್ತೆ ಯಾರು ಇರಲಾರರು
ಅಲ್ವಾ…..?

-


8 OCT 2023 AT 23:10

ನನ್ನ ಜೀವನದ ಸಾಗರದಲ್ಲಿ

ಹಣ,ಆಸ್ತಿ, ಅಂತಸ್ತು ಇರಲಿಲ್ಲ,

ಇದೆಲ್ಲದರ ಹುಡುಕಾಟದಲ್ಲಿ

ನೆನಪಿನ ನಡುವೆ ಇದ್ದ

ಪ್ರೀತಿ ಕಣ್ಮರೆ ಯಾಗಿತ್ತು ..

-


23 JUN 2023 AT 4:32

ಬಡತನ ಅಂದರೆ
ತಟ್ಟೆಗೆ ಊಟ ಸಿಗದಷ್ಟು
ಇರಬಾರದು..!
ತಟ್ಟೆಯಲ್ಲಿ ಊಟವನ್ನು
ಹಾಗೆ ಬಿಟ್ಟು ಏಳುವಷ್ಟು
ಶ್ರೀಮಂತನು ಆಗಿರಬಾರದು…

-


18 JUN 2023 AT 5:23

ಜೀವನದಲ್ಲಿ ಹಲವಾರು
ಪುಸ್ತಕಗಳನ್ನು ಸಂಗ್ರಹಿಸಿಟ್ಟು
ಓದುತ್ತಾ ಇದ್ದೆ…
ಅದರಲ್ಲಿ ಕಲಿತಂಥಹ
ವಿಧ್ಯೆ ಜೀವನಕ್ಕೆ ಉಪಯೋಗ
ವಾಗಲಿಲ್ಲ..
ಆದರೆ ಹತ್ತಿರದಿಂದ ಕೆಲವು
ಜನರ ಸಂಭಂದವನ್ನು ಬೆಳೆಸಿದೆ,
ಅವರಿಂದ ನೂರಾರು ಪಾಠ ಕಲಿಯುತ್ತಿರುವೆ…

-


17 JUN 2023 AT 5:07

ಒಂದು ಮನುಷ್ಯನನ್ನು
ಹೊರಗಿನಿಂದ ನೋಡುವಾಗ
ಬರೀ ಮಳೆಯಂತೆ ಶಾಂತವಾಗಿ
ಕಾಣುತ್ತಿದ್ದಾರೆ ಎಂದರೆ !
ಅವರ ಒಳಗೆ ನೋವುಗಳು,
ಮಿಂಚು ಮತ್ತು ಗುಡುಗಿನಂತಿರುತ್ತದೆ
ಎಂದೆೇ ಅರ್ಥ…

-


14 JUN 2023 AT 5:25

ನಿನ್ನ ನೆನಪಾದಾಗ ಎಲ್ಲ
ಎದೆಬಡಿತವು ಜೋರಾಗುತಿಹುದು..,
ಏಕೊ ನೀನು ತುಂಬಾನೆ
ಸನಿಹದಲ್ಲಿ ಇದ್ದಂತೆ…
ಆದರೆ
ಇ ಹೃದಯ ದೇವನ
ಸನ್ನಿಧಿಯಂತೆ ಅನಿಸುತ್ತಿದೆ…
ಆ ಹೃದಯದಲ್ಲಿ ನೀನೆ ದೇವರಂತೆ.

-


12 JUN 2023 AT 4:44

ನೀರಿನಲ್ಲಿ ಬಿದ್ದ ಎಲ್ಲರು
ಮುಳುಗುವುದಿಲ್ಲ..
ಈಜು ಬಾರದವರು
ಮುಳುಗಬಹುದು..
ಜೀವನ ಕೂಡ ಇಷ್ಟೆ..
ಸಮಸ್ಯೆ ಇರುವ ಪ್ರತಿಯೊಬ್ಬರು
ಸೋಲುವುದಿಲ್ಲ..
ಪರಿಹಾರ ಹುಡುಕಲು ಪ್ರಯತ್ನಿಸದವರು
ಸೋಲಬಹುದು…

-


Fetching zainu_ kanyadi_ Quotes