10 MAY 2018 AT 14:56

ಹಲ್ಮಿಡಿ ಶಾಸನ

ಕನ್ನಡ ಭಾಷೆಯ ಚರಿತ್ರೆಯನ್ನು ಹುಡುಕುತ್ತಾ ಹೊರಟ ಅನೇಕ ಸಂಶೋಧಕರು ಹಾಗು ಇತಿಹಾಸ ತಗ್ಞರಲ್ಲಿ ಒಬ್ಬರಾದ ಡಾ. ಎಂ. ಎಚ್. ಕೃಷ್ಣ ಅವರಿಂದ 1936 ರಲ್ಲಿ ಒಂದು ಶಿಲಾಸನವನ್ನು ಹಾಸನ ಜಿಲ್ಲೆಯ ಹಲ್ಮಿಡಿ ಎಂಬ ಸ್ಥಳದಲ್ಲಿ ಸಂಶೋಧಿಸಲ್ಪಟ್ಟಿತು.

ಶಾಸನದ ಮೂಲ ಹುಡುಕಿದಾಗ ಅದು ಕ್ರಿ ಶ. 450 ನೆಯ ಇಸವಿಯಲ್ಲಿ ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಎಂದು ತಿಳಿದುಬಂದಿದೆ.

ಇದುವರೆಗೂ ದೊರೆತಿರುವ ಶಾಸನಗಳಲ್ಲಿ ಇದು ಮೊಟ್ಟ ಮೊದಲ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟ ಶಿಲಾಸನವಾಗಿದೆ. ಇದರಲ್ಲಿ ಹದಿನಾರು ಸಾಲುಗಳಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲಾಗಿದೆ.

- YQ Jogi