ಬಾಳೆಗೊಂದು ಗೊನೆ;
ರಾಗಿಗೊಂದು ತೆನೆ;
ಬಾಳಿಗೊಂದು ಮನೆ;
ನಾಳೆಗೊಂದು ಕೊನೆ.-
ಕನ್ನಡ
ಕನ್ನಡವನ್ನು ಕಲಿ;
ಕನ್ನಡಕ್ಕಾಗಿ ನೀ ನಲಿ.
ಕನ್ನಡವೇ ನಮ್ಮ ನುಡಿ;
ಕನ್ನಡಕ್ಕಾಗಿ ಎಂದೆಂದೂ ನೀ ದುಡಿ.
ಕನ್ನಡದ ಪರ ನಿಲ್ಲು;
ಕನ್ನಡಿಗರ ಮನಸ್ಸನ್ನು ನೀ ಗೆಲ್ಲು.
ಕನ್ನಡವೆಂಬ ಆಗಸ;
ಇದಕ್ಕೆ ಕರ್ನಾಟಕವೇ ಅರಸ.
ಕನ್ನಡವೆಂಬ ಕಾಮನಬಿಲ್ಲು;
ಮೂಡಲಿ ರಂಗು ಎಲ್ಲೆಲ್ಲು.
ಕನ್ನಡವೆಂಬ ಶ್ರೀಗಂಧ;
ಹರಡಲಿ ಎಲ್ಲೆಲ್ಲು ಸುಗಂಧ.
ಕನ್ನಡ ಭಾಷೆ ಆಡಲು ಬಲು ಚೆಂದ;
ಎಂದೆಂದೂ ನಾ ಆಗಬಯಸುವೆ ಕನ್ನಡದ ಕಂದ.
-
ಪ್ರೀತಿ
ಬಂಗಾರದ ಕಳಶವಿದು ಎಂದೂ ಪ್ರಜ್ವಲಿಸುವುದು
ಸೌಂದರ್ಯದ ರಾಶಿಯಿದು ಎಂದೂ ಸೆಳೆಯುವುದು
ತ್ಯಾಗದ ಸಿರಿಯಿದು ಎಂದೂ ಮುಗಿಯದು
ನಂಬಿಕೆಯ ಕಡಲಿದು ಎಂದೂ ಕಣ್ಮರೆಯಾಗದು
ಆಸರೆಯ ಗೂಡಿದು ಎಂದೂ ಕರೆಯುವುದು
ಆತ್ಮೀತೆಯ ನೆಲೆಯಿದು ಎಂದೂ ಕೈಬಿಡದು
ಹೆಮ್ಮೆಯ ಶಿಖರವಿದು ಎಂದೂ ಕುಸಿಯದು
ಮಂಜಿನ ಹನಿಯಿದು ಎಂದೂ ಕರಗದು
ಸೋನೆ ಮಳೆಯಿದು ಎಂದೂ ಸುರಿಯುವುದು
ಸವಿಸವಿ ನೆನಪಿದು ಎಂದೂ ಮಾಸದು-
ಸ್ವಾತಂತ್ರ್ಯ ದಿನಾಚರಣೆ
ವರ್ಷಗಳುರುಳಿ ವರ್ಷಗಳಾರಂಭಿಸಿದರೂ
ಇಂದಿಗೂ ತಾಂಡವವಾಡುತ್ತಿದೆ ಭಾರತದಲ್ಲಿ ಬಡತನ
ಇದರ ನಿರ್ಮೂಲನೆ ಹೇಗೆ? ಯಾರಿಂದ? ಯಾವಾಗ? - ಒಂದು ನಾ ಕಾಣೇ!
ಬ್ರಿಟಿಷರಿಂದ ಭಾರತೀಯರಿಗೆ ಸ್ವಾತಂತ್ರ್ಯವೇನೋ ದೊರಕಿರಬಹುದು
ಆದರೆ, ಬ್ರಿಟಿಷರು ಭಾರತೀಯರ ಮೇಲೆ ಹೇರಲ್ಪಟ್ಟ ಕೆಲವು ರೀತಿ-ರಿವಾಜ಼ುಗಳು
ಇಂದಿಗೂ ಸಹಾ ಭಾರತದಲ್ಲಿ ಬೆನ್ಬಿಡದೆ ಭೂತದಂತೆ ಕಾಡುತ್ತಿವೆ.
ಇದರಿಂದ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತದೆ
ಅದು ಏನೆಂದರೇ, ನಮಗೆ ಬ್ರಿಟಿಷರಿಂದ ದೊರಕಿರುವುದು
ಅಲ್ಪ ಸ್ವಾತಂತ್ರ್ಯವೇ ಹೊರತು, ಪೂರ್ಣ ಸ್ವಾತಂತ್ರ್ಯವಲ್ಲ.
ಭಾರತ ದೇಶ ಹಾಗೂ ಇನ್ನಿತರ ದೇಶಗಳಲ್ಲಿ ವಾಸಿಸುತ್ತಿರುವ ನನ್ನ ಸರ್ವ ಭಾರತೀಯರಿಗೂ ೭೫ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.-
ಲಾಕ್ ಡೌನ್
ಗಂಡ: ನಿನ್ನ ಕೈಯಾರೆ ಮಾಡಿ ತಿನಿಸು ನನಗೆ ಜಾಮೂನ್.
ಹೆಂಡತಿ: ಆಗಲ್ಲ ರೀ...
ಗಂಡ: ಅದೇ ಯಾಕೆ ಆಗಲ್ಲ ಅಂತ ಹೇಳು?
ಹೆಂಡತಿ: ಮೊದಲು ಕರ್ಕೊಂಡು ಹೋಗಿ ನನ್ನ ಹನಿಮೂನ್.
ಗಂಡ: ಅಯ್ಯೋ! ಆಗಲ್ಲ ಕಣೇ..
ಹೆಂಡತಿ: ಅದೇ ಯಾಕೆ ಆಗಲ್ಲ ಅಂತ ಹೇಳಿ?
ಗಂಡ: ಅಯ್ಯೋ! ಪೆದ್ದಿ, ಇವಾಗ ಎಲ್ಲಾ ಕಡೆಲೂ ಬರೀ ಲಾಕ್ ಡೌನ್!!!-
ಕೊರೋನಾದ ಓಡಾಟ
ಆ ನೋಟ ಈ ನೋಟ
ಕಣ್ಸೆಳೆಯೋ ಮೈಮಾಟ|
ಊಟಕ್ಕಾಗಿ ಪರದಾಟ
ಕ್ಷೀಣಿಸುತ್ತಿದೆ ಮಕ್ಕಳ ಆಟೋಟ||1||
ಜೀವನವಿಡೀ ಕಾದಾಟ
ಸರ್ಕಾರ-ರೈತರ ನಡುವಿನ ಹೋರಾಟ|
ಹೆಚ್ಚುತ್ತಿದೆ ಕೊರೋನಾದ ಓಡಾಟ
ಪ್ರಪಂಚದಾದ್ಯಂತ ಇದ್ದೇ ಇದೆ ಕೊರೋನಾದ ಆರ್ಭಟ||2||
ಕೊರೋನಾದ ಕಾಟಕ್ಕೆ ಇತಿಯಿಲ್ಲ
ಸಾಯುತ್ತಿರುವ ಜನರ ಸಂಖ್ಯೆಗೆ ಮಿತಿಯಿಲ್ಲ|
ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಬೆಡ್ಗಳಿಲ್ಲ
ಕೊರೋನಾವಿಲ್ಲ! ಕೊರೋನಾವಿಲ್ಲ! ಎಂದು ಸಾರುವವನಿಗೆ ಮತಿಯಿಲ್ಲ||3||
ಛಿದ್ರ ಛಿಧ್ರವಾಗುತ್ತಿದೆ ಸಂಸಾರ
ಸಾವು-ನೋವು ಅಪಾರ|
ಆಕ್ಸಿಜನ್ ಸಿಲಿಂಡರ್ಗ್ಗಾಗಿ ಆಹಾಕಾರ
ಎಂದು ಆಗುವುದೋ ಕೊರೋನಾದ ಸಂಹಾರ||4||
ಎಲ್ಲರೂ ಒಗ್ಗೂಡಿ ಹರಸೋಣ
ಈ ಜಗತ್ತಿನಿಂದ ಕೊರೋನಾವನ್ನು ತೊಲಗಿಸೋಣ
ಪ್ರೀತಿ-ಸೌಹಾರ್ದ-ಏಕತೆ ಇಂದ ಜೀವಿಸೋಣ ||5||-
ಬಂತು ಬಂತು ಕೊರೋನಾ
ಬಂತು ಬಂತು ಕೊರೋನಾ ಮಳೆ ಬಂದಂಗೆ
ಬಂತು ಬಂತು ಕೊರೋನಾ ಜಾತ್ರೆ ಸೇರ್ದಂಗೆ
ಡಾಕ್ಟರ್ಸ್ ಎಲ್ಲಿದ್ದಾರೋ ಪೇಶೆಂಟ್ಸ್ ಕಾಯಲು
ಮೀಡಿಯಾದವರೆಲ್ಲಿದ್ದಾರೋ ಕೋವಿಡ್-ಪಾಸಿಟಿವ್ ಅಂತ ಹೇಳಲು
ಏನೇ ಆಗ್ಲಿ ಏನೇ ಹೋಗ್ಲಿ
ನೀ ಓಡು ಕೊರೋನಾ
-
ಬಂದಿದೆ ಕೊರೋನಾ
ಹ...ಹ...ಹಾ... ಬಂದಿದೆ ಕೊರೋನಾ
ಇವಾಗ ಎಲ್ಲಿ ನೋಡಿದರಲ್ಲಿ ಬರೀ ಶೀತ-ಜ್ವರಾನಾ
ನೀನು ಜನರ ನೊಡಿ ಖೇಖೆ ಹಾಕ್ತಿರೋದು ಸರೀನಾ
ಏನು ಮಾಡೋಕಾಗಲ್ಲ ಇದು ಕೊರೋನಾದ ಜ಼ಮಾನಾ
-
ಜೋಡಿ
ನಾನು ನೀನು ಜೋಡಿ
ಮಕ್ಕಳು-ಮರಿ ಮಾಡಿ|
ಬಾಳೋಣ ನಾವು ಕೂಡಿ
ಅದುವೇ ಪ್ರೀತಿಯ ಮೋಡಿ||1||
ಇದುವೇ ನಮ್ಮಯ ವಾಡಿ
ಹಿಡಿದು ತರಲಾ ನಾನು ಏಡಿ|
ತಿನ್ನೋಣ ಒಗ್ಗೂಡಿ
ಮನೇಲಿದ್ದರೆ ಚೆಂದ ಉಪ್ಪಿನಕಾಯಿಯ ಜಾಡಿ||2||
ನೀ ನನ್ನ ಸ್ವೀಟ್ ಲೇಡಿ
ನಾ ಹಾಕಿದೆ ನಿನ್ ಕೊರಳಿಗೆ ಬೇಡಿ|
ಯಾಕೋ ಹೀಟಾಗಿದೆ ನನ್ನಯ ಬಾಡಿ
ದಯಮಾಡಿ! ನಮ್ಮಿಬ್ಬರ ನಡುವೆ ಯಾರೂ ಬರ್ಬೇಡಿ||3||-
ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ||
ಮುಂಜಾನೆ-ಮುಸ್ಸಂಜೆ ಎಂಬ ಸಮಯಪ್ರಜ್ಞೆ ಇಲ್ಲದೆ
ಆ ಜಾಗ ಈ ಜಾಗ ಎಂಬ ಅಂಕೆ-ಶಂಕೆ ಇಲ್ಲದೆ
ದೊಡ್ಡವರು-ಚಿಕ್ಕವರು ಎಂಬ ಭೇದಭಾವ ಇಲ್ಲದೆ
ಮೈಮೇಲೆ ಕೈ ಹಾಕಿ ಪರಪರ ಕೆರ್ಕೊಂಡಾಗ
ಕೆಂಪಾದವೋ ಎಲ್ಲ ಕೆಂಪಾದವೋ
ಕೆಂಪಾದವೋ ಎಲ್ಲ ಕೆಂಪಾದವೋ||
-