ಒದ್ದಾಡುತಿದೆ ಈ ಪಾಪಿ ಹೃದಯವು
ನಿನ್ನ ಚಿಗುರು ಮೀಸೆಯಂಚ ನಗುವಿಗೆ
ಮೂಡಿದ ನಿನ್ನ ಹೆಜ್ಜೆಯ ಗುರುತಿಗೆ
ಜೊತೆಸೇರಿಸಿ ನಾ ಬರುತ್ತಿರಲು
ಈ ಮನಸ್ಸೇ ರಂಗಸಜ್ಜಿಗೆಕೆಯು...
ಕಣ್ಣಿನ ಕನವರಿಕೆಯಲ್ಲೂ ನಿನ್ನಯ
ಕನಸುಗಳು ಕುಣಿದಾಡಲು
ಮನಸಿನ ಕವಲು ದಾರಿಯಲ್ಲಿ
ನಡೆದು ಹೋದ ನಿನ್ನ ನೆನಪುಗಳ
ಹಿಂಬಾಲಿಸಿ ಬರುವ ಅಲೆಮಾರಿ ನಾ
ಈ ಪಿಸುಮಾತುಗಳು ಕಾಯುತ್ತಿವೆ
ನಿನ್ನೊಲವ ಸೇರಲು ಸನಿಹವೇ
ಅನುಮತಿಯ ನಿರೀಕ್ಷೆಯಲ್ಲಿ....!!
-
ಕೊಂಚ ಸಮಯದ ನಿದಿರೆಯು
ನೀಡುವುದೆಷ್ಟು ಆರಾಮವ
ಮನದ ಹತಾಶ ಲಹರಿಯಾಟ
ಯಾರ ನೆನಪು ಸುಳಿಯದೆನೇ
ಮಲಗುವುದು ಸುಪ್ತವಾಗಿಯೇ
ನೀರವತೆಯ ಮೌನಧಾರಿಣೀ
ಸ್ಮಶಾನದ ಮಡಿಲಲ್ಲಿ ಒಮ್ಮೆ
ಅಪ್ಪಿ ಮಲಗಿದರೆ ಸಾಕೆನಗೇ
ಸುಡುವ ಚಿತೆಯು ಸಾಯಿಸದೇ
ಅರೆಕ್ಷಣ ಕೊಲ್ಲುತ್ತಿರುವ ಚಿಂತೆಯ...!!-
ಪದಗಳೇ ಅಪೂರ್ಣವು
ನಿನ್ನ ಮೌನದ ನಡುವೆ
ಮೂಡಿರುವ ಪ್ರಶ್ನೆಯೇ
ಎಡೆಬಿಡದೆ ಕಾಡುವ
ಕಣ್ಣ ನೋಟಗಳಲ್ಲೇ
ಅಡಗಿದೆ ಸಾವಿರಾರು
ಮುಗಿಯದ ಕೌತುಕವು
ಮುಚ್ಚಿದ ತುಟಿಯಲ್ಲಿ
ಮಾಸಿದ ನಗುವಾಟ
ಹೇಳಿದೆ ಕೊನೆಯಿರದ
ಕಥೆಗಳ ಗೊಂಚಲನ್ನು..!!-
ಅದೆಷ್ಟೋ ಹಸಿದಿರುವ
ಜೀವಗಳ ಹಸಿವು ತಣಿಸಿ
ಸಾವಿರಾರು ಮಕ್ಕಳಿಗೆ
ಮಮತೆಯ ಮಡಿಲು ನೀಡಿ
ತಾಯಿ ಪ್ರೀತಿಯ ಉಣಬಡಿಸಿದ
ಮಮತಾಮಯಿ ಮಾತೆಗೆ
ಜನುಮದಿನದ ಶುಭಾಶಯಗಳು☺️-
ಹೇ ಕೃಷ್ಣಾ❣️
ನಿನ್ನ ಮುರಳಿ ನಾದದಲ್ಲೇ
ನನ್ನ ಪ್ರತಿಯೊಂದು ಉಸಿರ
ಏರಿಳಿತವು ಬೆಸೆದಿದೆ
ನಿನ್ನ ಪ್ರೀತಿಯ ಝೇಂಕಾರ
ಅರೆಕ್ಷಣವೂ ಆಗಲದೆ
ಕಣ್ಗಾವಳಾಗಿ ಕಾಯುತ್ತಿದೆ...-
ತಾಳಭರಿತ ಸಂಗಡದೀ
ಕಾಲಿಗೆ ಕಟ್ಟಿದ ಗೆಜ್ಜೆಯ
ನಾದಕ್ಕೆ ಮಂತ್ರಮುಗ್ಧತೆಯಿಂದ
ನರ್ತಿಸುತ್ತಿರುವ ಅವಳಿಗೆ
ಈ ಜಗದ ಪರಿವಾದದೆ
ಕರ್ಣಗಳಿಗೆ ಮೀಟಿರುವ
ಕರತಲಾಮಲಕ ಕೇಳಿದಾಗಲೇ...!!
-
ನಿನ್ನ ಮೇಲಿದೆ ನನಗಂತೂ
ದೂರಿನ ಸರಮಾಲೆಯು
ಯಾವೂರ ನ್ಯಾಯಾಲಯಕ್ಕೆ
ತೆರಳಲಿ ಒಲವೇ ನಾನಂತೂ
ದಾವೆಯ ಹೂಡಲು ಗೆಳೆಯ
ನಯನದಲ್ಲೇ ರವಾನಿಸಿದ
ಸಂದೇಶದ ಪಡಸಾಲೆಗೆ
ಹಳಿತಪ್ಪಿದೆ ನನ್ನೆದೆ ಮಿಡಿತ
ಹೇಳದೆ ಕೇಳದೆ ಸುಮ್ಮನೆ
ನೀ ಬರುತಿಹೆ ಕನಸಿನಲ್ಲಿ
ಮುದ್ದಾಗಿ ನೀ ರಮಿಸಲು
ನಿದಿರೆಗೆ ಬಿದ್ದಿದೆ ಪರದೆಯು
ಸುಳಿಯಬೇಡ ಪದೇ ಪದೇ
ಕಣ್ಣಮುಂದೆ ಇನಿಯನೇ
ಕಳೆದುಕೊಂಡೆನು ನನ್ನೆ ನಾನು...!!
-