"ಮನಸಿನ ಭಾವನೆಗಳೇ ಆಗೇ... ಯಾರಿಗೂ ಏನಾನ್ನೂ ಹೇಳಲಾಗದೆ ಚಡಪಡಿಸುತಿರುತ್ತದೆ, ಅವಶ್ಯವಾಗಿರೋದನು ಪಡಿಯಲು ಅಥವಾ ನೀಡಲು ಕೂಡ ಸ್ವಇಚ್ಛೆ ಇರಬೇಕು ಅದು ಲೋಕಿಕ ಬದುಕಿನ ಹೊರಣ"
-
ಯಾರ ಮೇಲೆ ವಿಶ್ವಾಸ ಇರುವುದೋ ಅವರಿಗಾಗಿ ಕೆಲಸ ಮಾಡು.... ಆದರೆ ಅವರಿಗೆ ವಿಶ್ವಾಸ ಇಲ್ಲದಿದ್ದರೆ ನೀ ಏನೇ ಮಾಡಿದರು ವ್ಯರ್ಥ
-
"ನಿನ್ನ ಕೆಲಸ ನೀ ಮಾಡುತ್ತಿರು ಮೇಲೂಬ್ಬ ಇರುವನು ಸದಾ ಕಾಯುವನು"
-
"ತಂತಿ ಮೇಲಿನ ನಡಗೆ.... ಆಗಿದೆ
ಎಲ್ಲಾ ಅವರವರ ಭಾವಕ್ಕೆ.....
ಎಲ್ಲಾ ಸಮಯದ...... ಗೊಂಬೆ"-
"ಸತ್ಯಕ್ಕೆ ಒಂದೇ ದಾರಿ, ಸತ್ಯದ ಸುಳ್ಳಿನ ಲೇಪನಕ್ಕೆ ನಾನಾ ದಾರಿ"
-
"ಸತ್ಯಕ್ಕೆ ಒಂದೇ ದಾರಿ, ಸತ್ಯದ ಸುಳ್ಳಿನ ಲೇಪನಕ್ಕೆ ನಾನಾ ದಾರಿ"
-
ಕರೆದುಬಿಡು ನನ್ನ ನೀ ಬೇಗ
ಬರೆದುಕೊಡು ಎಲ್ಲ ಆವೇಗ
ಮಿರುಗುತಿದೆ ಜೀವ ನೋಡೀಗ
ಏನು ಕಾರಣ
ನನ್ನ ಪಾಡಿಗಿಲ್ಲಿ ನಾನು
ನಿನ್ನ ಹಾಡು ಹಾಡಲೇನು
ನೀ ನೆಡದು ಬಂದ
ದಾರಿಯನ್ನೇ ನೋಡಲೇನು
ಹಚ್ಚಿಕೊಂಡ ಹುಚ್ಚ ನಾನು
ನೀನು ಹೀಗೇನಾ
ಓ ನಲ್ಮೆಯ ಪ್ರೀತಿಯೇ
ಎಂದು ನಿನ್ನ ಆಗಮನ
ನೀ ಎಲ್ಲೆ ಅಡಗಿದರೂ
ಅಲ್ಲೇ ನನ್ನ ಈ ಗಮನ....-
ಒಳೆತ್ಯಾವುದು ಕೆಡುಕ್ಯಾವುದು ಇಲ್ಲಿ ರಾಮ..
ಸೆಳತಾವೇ ಇಲ್ಲದೆ ಹೋದರೆ ಪ್ರೀತಿ ಹೆಂಗೆ ಬರುವುದು ರಾಮ..
ಪ್ರೀತಿಯಲ್ಲಿ ಇರೋ ಸ್ಥಿರತೆ ಇನ್ನು ಯಾವುದರಲ್ಲಿ ಇರುವುದು ರಾಮ..
ಪಾಪ ಪುಣ್ಯಗಳ ಲೆಕ್ಕದಲ್ಲಿ ಪ್ರೀತಿಯ ಪಾಲು ದೊಡ್ಡದಯ್ಯಾ ರಾಮ..
ನೀನೊಳಗೆ ನಾನೊಳಗೆ ಇರುವುದೊಂದೆ ಪ್ರೇಮ ಕಣೋ ರಾಮ..
ನೀನೆ ತೋರೋ ಕರುಣೆ ದಾರಿಯ ಪ್ರೇಮದೊಳು ರಾಮ..
ಬಯಸಿದ್ದು ಸಿಗದಿದ್ದರೆ ಬದುಕೋದು ಹೇಗೆ ಹೇಳು ರಾಮ..
ಸೆಳೆತವೆ ಓಲುವಯ್ಯ ರಾಮ... ರಾಮ ರಘುರಾಮ..
ಎನ್ ಬಯಕೆಯ ಈಡೇರಿಸಿ ಸುಖ ನೀಡೋ ರಾಮ..
-