ವಿರಾಗಿ   (vi RAW gi ☘️)
2.1k Followers · 8 Following

ಅನುಗಚ್ಚತು ಪ್ರವಾಹಃ✌🏻

ಭಾಷೆ ಕನ್ನಡ ಭಾವನೆ ಕನ್ನಡಿಗ
Joined 25 April 2018


ಅನುಗಚ್ಚತು ಪ್ರವಾಹಃ✌🏻

ಭಾಷೆ ಕನ್ನಡ ಭಾವನೆ ಕನ್ನಡಿಗ
Joined 25 April 2018

ಇಳಿಬಿಟ್ಟ ತೆಳು ಸೀರೆ
ಸರಿ ಮಾಡದ ನೆರಿಗೆ
ಜಾರುವ ರವಿಕೆಗೆ
ಹೆಚ್ಚಾಗುವ ಸಲುಗೆ
ಮಧುರ ಸಮಯದಿ ಅಧರ ತಿಡಿ
ಕೆರಳುವಂತೆ ಕಣ್ಣ ಮೋಡಿ

(no offense)

-


24 JAN AT 19:45

ಮೊದಲಿನ ಒತ್ತಾಯದ ಮೇರೆಗೆ
ನಡುವೆ ಒಲವ ಸೂತ್ರ ಬರೆದೆ
ಕೊನೆಗೆನು ಒಲವೆಂದರೆ
ಪೂರ್ತಿ ದೂರ ಸರಿದೆ

"ಸೂತ್ರ ಸರಿಯಾಗಿತ್ತು ಒತ್ತಾಯ ನಡುವೆ ಬಂದು ಒಲವು ಕೊನೆಯಾಗಿತ್ತು"

-


23 JAN AT 18:26

ಉಕ್ಕುವ ಅದೆಷ್ಟೋ ಭಾವನೆಗಳು ಇಳಿಸಂಜೆಗೆ ಬಲಿಯಾಗಿವೆ
ಅದೇ ಸಾಲಿಗೆ ಮತ್ತೊಂದು
ಬೇಡ ಎಂದರೂ ಬಂದು ಕಾಡುವ ಇಳಿಸಂಜೆಗೆ
ಬೇರೆ ಹೆಸರು ಬೇಕಾಗಿದೆ
ಸತ್ಯಕ್ಕೆ ನೂಕುವ ಮಂಪರು ಎನ್ನುವುದೊ..?
ಸುಳ್ಳಿಗೆ ತಳ್ಳುವ ಭ್ರಮೆ ಎನ್ನುವುದೊ..?
ಎಲ್ಲ ಅನಿಸಿದರೂ ಏನು ಅನಿಸದಂತೆ
ಸುಮ್ಮನೆ ಇರಬೇಕಾಗಿದೆ.

-


22 JAN AT 16:09

ಇರಬೆಕೊಂದು ಬೆಚ್ಚನೆಯ ಭಾವ
ಹಳಸಿ ಹೋದ ನೆನಪುಗಳ ಆಕ್ರಂದನ ಹತ್ತಿಕ್ಕಲು
ಇರಬೆಕೊಂದು ಸನಿಹ
ತಂಗಾಳಿಯೊಳಗೆ ತಣ್ಣಗೆ ಮೈ ಮರೆಯಲು

-


21 JAN AT 7:43

"ಸಾಧ್ಯವಾದಷ್ಟು "ಪಾಪ" ಇಂದೇ ಮಾಡಿ
"ಪುಣ್ಯ" ನಾಳೆ ಸಂಪಾದಿಸಬಹುದು"

-


20 JAN AT 20:34

ಹಿಂದಿನಷ್ಟೇ ಇಂದೂ ನೆನಪಾಗುತಿರುವೆ
ಮುಂದು ನೆನಪಾಗುವೆ
ಮರೆಯಲು ಹೇಗೆ ಸಾಧ್ಯ
ಕಹಿ ಒಲವ ಕೊಟ್ಟ,ಸಿಹಿ ನೆನಪು ನೀನು

-


19 JAN AT 21:14

Hey brother,
ನಿಮ್ ಬರಹ ಓದಿದೆ,ಅದ್ಬುತ.ಹೈಕು,ಗಜಲ್, ಒಂದೊಂದು ಭಿನ್ನ ಬರಹ. impact inspired by your writings.ಇನ್ನೊಬ್ಬರ ಎದೆಗಿಳಿಯುವಂತೆ ಬರೆಯುವುದು ತುಂಬ ಕಷ್ಟ ಅದು ನಿಮಗೆ ಸಿದ್ಧಿಸಿದೆ.
ಮತ್ತಷ್ಟು ಪ್ರಯೋಗಗಳಾಗಲಿ,ಇನ್ನಷ್ಟು ಉತ್ಕೃಷ್ಟ ಬರಹ ನಿಮ್ಮಿಂದ ಬರ್ಲಿ.
"ಮತ್ತಷ್ಟು ಬರೆಯಿರಿ ಎತ್ತರಕ್ಕೆ ಬೆಳೆಯಿರಿ"
Wish you all the best
Keep inking
Keep inspiring 💚✌🏻

-


18 JAN AT 23:52

ಅಸೂಯೆ ಇರಬೇಕು
ಆದರೆ ನಮ್ಮಲ್ಲಲ್ಲ
ನಮ್ಮ ಏಳಿಗೆ ಬಯಸದವರ ಕಣ್ಣಲ್ಲಿ

-


17 JAN AT 19:36

ಕೆರೆ-ದಡದ ಆಟ
ಅವಳು ಜಿಗಿದು,ನಾನು ನೆಗೆದು
ಉಳಿಯಿತೊಂದು ಖಾಲಿ ವೃತ್ತ
ಕಹಿ ಒಲವ ಪಾಠ

-


17 JAN AT 19:25

"ಮುಖವಿಲ್ಲದ ಸುಂದರಿಯವಳು ಮನಸೆನ್ನಬಹುದು
ಮದ-ಮತ್ಸರ,ಮೋಹಕ್ಕೆ ತಳಕು ಹಾಕುವ ಮಾಯೆಯೆನ್ನಬಹುದು"

-


Fetching ವಿರಾಗಿ Quotes