ಯಾರ ಹೊಲ ಯಾರ ಮನೆ
ಯಾವ ಗೌಡನ ಮನೆ ಕೂಲಿ ಅವ್ವ
ಬಿಸಿಲ ಮಳೆಯ ಜಗ್ಗದೆ
ಹಸಿ ಉಂಡು ಬಿಸಿತುಪ್ಪವ ಕೊಟ್ಟವಳು
ಕಹಿ ಉಂಡು ಸಿಹಿ ಹಾಲ ಇಟ್ಟವಳು
ಉಟ್ಟರಿದ ಸೀರೆ ತೊಟ್ಟಿರಲು
ಬೆಳುಮುಗಿಲ ಕನಸು ಬೆಟ್ಟದಷ್ಟಿರಲು
ಮಕ್ಕಳು ಬೆಳೆಯಲಿ ಕನಸು ನನಸಾಯಿತು ಎಂದೇನಲು
ಮತ್ತೆ ಮುಳುಗಿದಳು ಕಾಯಕದೊಳು
ಅಮ್ಮಂದಿರ ದಿನದ ಶುಭಾಶಯಗಳು ❤️-
ಜನ್ಮ ದಿನಾಂಕ ಮಾಘ ಮಾಸದ 2 ನೆ ದಿನ
🏥ಧನ್ವಂತರಿ ಅನುಯಾಯಿ💉👨⚕️
🌄 ಪ್ರಕ... read more
ತವರುಮನೆ ತಡಿಕೆಯೂ ತವಕದಿ ನೋಡುತಿದೆ
ಆಷಾಡದ ಗಾಳಿ ಮನವ ಕೆಡಿಸುತಿದೆ
ಅವನ ತೋಳ್ಗಳಲ್ಲಿ ಬಂಧಿಯಾಗಿ
ಬೆಚ್ಚಗೆ ಕಳೆದ ನೆನಪು ಶ್ರಾವಣವ ನೆನೆಸಿದೆ
ಅವನ ಸೇರಬಯಸಿದೆ
ಹೇಳದೆ ಬಂದ ಮಳೆಗಾಳಿ ಕೇಳದೆ
ಅವನ ಧ್ವನಿಯ ಕೇಳಿಸಿದೆ
ಗೆಳತಿಯ ವದನವಿಲ್ಲದ ಸಂಜೆಗಳು
ದಿನಗಳ ಏಣಿಸಿದೆ ಮತ್ತೆ ಆಷಾಢ ಗಾಳಿ ಬೀಸಿದೆ
-
ಜಗವ ತಿಳಿವಂ ಮನವಿರಲ್ಕೆ
ಸ್ನೇಹಮಯಂ ಸುಖವ ಕಾಣ್
ಕಾನನದ ಕಣ್ಣೊಳು ಸಂಚಾರವಿರ್ಪುದು ಹೃದಯಂಮೀಟಿದ ಕ್ಷಣಗಳ್ ನೆನೆಯೊಳ್
ಮನದಿ ಮೂಡಿಪುದು ಸ್ನೇಹಕೂಟ
ಮನದಿ ಮೂಡಿಪುದು ಸ್ನೇಹಕೂಟ-
Sky in the name of akasha send his message of letter to postman cloud. And say my message send with my tears of joy, so he selected monsoon for this. his girlfriend the name of bhoomi.
She received a letter and say gratitude to monsoon and postman cloud.
But He never received
a reply message from her.
one day in sunny morning
she loudly call to akash,
open his sleepy eyes with confusion ,
she is wear a parrot green saree with blossom,
her eyes called the love, voice call to heart things,
nose calling the scent of first rain,
lips call to jamoon,
neck calls to flower,
belly calls to bunch of graphs,
finally akash pinch his hand again and again because she is carvings of nature art-
ಯಾರನ್ನು ಕಣ್ಣೆತ್ತಿ ನೋಡದ ಅವನು
ಅವಳ ಕಾಲಿಗೆ ತಾಕುವಂತೆ
ಮಂಡಿಯೂರಿ ಕೇಳಿದ್ದ ಪ್ರೇಮ ಬಿಕ್ಷೆಯ
ಯಾವ ಸುಡುಗಲ್ಲ ಮೇಲೆ ತಂಪೆರೆದು ಮಲಗಿತ್ತು
ಪ್ರೀತಿ ಎಂಬ ಬಿಸಿ ಕಾವು
ಕೇಳದೇ ಮನಸಿಗೊತ್ತಿ ಮಾಸಾಲಾಗದ
ಮಾಯೆ ಎನ್ನಿಸಿಬಿಟ್ಟಿದ್ದಳು
ಶ್ರಾವಣ ಮಾಸದ ಗಾಳಿ ಬೀಸಲು
ಅವಳ ಮನೆಯಲ್ಲಿ ಓಲಗದ ಸದ್ದು-
ಹೃದಯ ಕೊಟ್ಟವಳಲ್ಲ ಕದ್ದವಳಲ್ಲ ಗೆದ್ದವಳಲ್ಲ
ಎಲ್ಲವನು ತಿಳಿದು ಅಳೆದು
ಹೆಜ್ಜೆ ಹೆಜ್ಜೆಗೂ ಎಡಬಿಡದೆ ದಡಮುಟ್ಟಿಸಿದವಳು ಗೆಳತಿ. ಅಂದೇಕೋ ಅಕ್ಷತೆಕಾಳು ಬೀಳುವ ಮುನ್ನ
ಬಿಕ್ಕಿ ಬಿಕ್ಕಿ ಅತ್ತಿದ್ದಳು ಯಾರಿಗೂ ಹೇಳದೆ ಅವನ ಕಂಡು
ಆ ಮನೆಯ ಕೊನೆಯ ಗೋಡೆ ಅವಳಿಗೆ ಆಸರೆಯಾಗಿತ್ತು
ಆ ಬಿಳಿ ಸುಣ್ಣದ ಗೋಡೆಯೂ ಕೇಳಿತ್ತು ಅವನ್ಯಾರು ?-
ದಿನಗಳು ಕಳೆದರೂ ಅವರು ಹೀಗೆ ಕೂಡಿದ ದಿನಗಳು ಕಾಣೆ ಸನಿಹ ಇದ್ದರೂ, ಏಕಾಂತ........
ಕಣ್ಣಲ್ಲೇ ಭವಿಷ್ಯವ ನೋಡಿ ಅಳೆದು ಬಿಗಿಯಾಗಿ ತಬ್ಬಿ ಮಾತು ಕೇಳಿತು ಹೀಗೆ ಎಷ್ಟು ದಿನ ಮನೆಯವರ ಮುಂದೆ ಹೇಳದೆ ಉಳಿವ ನಮ್ಮ ಪ್ರೀತಿ,
ಅವನ ಉತ್ತರ ನಗುವಿನಲ್ಲಿ ಮುಗಿಯಿತು......
ನಕ್ಕು ಮರೆಯಾಯಿತು.....
ಗೆಳತಿಯ ಉತ್ತರವಿಲ್ಲದ ಪ್ರಶ್ನೆಗೆ
ಮತ್ತೊಂದು ದಿನಾಂಕ ನಿಗದಿಯಾಯಿತು
-
ಜೀವನಕ್ಕೆ ಬಡತನ ಇರಬೇಕು
ಕಡೆ ಪಕ್ಷ ಅಮ್ಮ ಬೈದು ಹೊಡೆದು
ಮುದ್ದು ಮಾಡಲು ಕೊಡುವ ಬೆಲ್ಲ,ಕಾಯಿ,ರೊಟ್ಟಿ
ಹುರಿಗಡಲೇ,ಶೇಂಗಾ ತೆಗೆದುಕೊಳ್ಳುವಷ್ಟು..........
ಮತ್ತು ವಾರಕ್ಕೊಮ್ಮೆ ಮನೇಲಿ ಬೆಳೆದ ಕಾಯಿ ಪಲ್ಲೆ ಮಾರಿ ಅಪ್ಪ ತಂದ ಸಂತೆಯ ಹತ್ತು ರೂಪಾಯಿ ಜಿಲೇಬಿ ಐದು ರೂಪಾಯಿಯ ತಣ್ಣಗಾದ ಬಿಸಿ ಬಿಸಿ ಮಿರ್ಚಿ ಬಜ್ಜಿ ತಿನ್ನುವಷ್ಟು ಶ್ರೀಮಂತವಾಗಿ ಇರ್ಬೇಕು ಬಾಲ್ಯ-