ನೂರು ಭಾಷೆಗಳ ನಡುವೆ ಮನಮುತ್ತಿಗೆ ಹಾಕುವ ಸೆಳೆತ
ನೆತ್ತರದ ಹರಿವಿನ ತುಡಿತದ ಸಂಗೀತ
ಪದಗುಚ್ಛಗಳ ಹೊನ್ನಿನ ಗಂಟು
ಭಾವಕ್ಕೂ ಭಾಷೆಗೂ ಬೆಸೆದಿದೆ ನಂಟು
ಲೇಖನಿಯ ತುದಿಯಲ್ಲಿ ಅಡಗಿರುವ ಕವಿತೆ
ಮನದಂತರಾಳದ ಯುಗಳ ಗೀತೆ
ನಿರ್ಮಲ ಕೋಮಲ ಪರಿಶುದ್ಧ ಪಾರಿಜಾತೆ
ಬಾಳ ಸಂಗಾತಿ ನೀ ಸಂಹಿತೆ ಸಹಿಷ್ಣುತೆ
ಬರಿ ಭಾಷೆಯಲ್ಲ ಇದು ಒಲವು ಗೆಲುವು
ಆಂತರ್ಯದ ಚೆಲುವು ನಿಲುವು ಹಾಗೂ ಎಲ್ಲವೂ
ಉಸಿರಾಗಲಿ ಕನ್ನಡ
ಹೆಸರಾಗಲಿ ಕರ್ನಾಟಕ❤️💛-
ನಿನ್ನ ಪದಗಳಿಗಿಂತ
ನಿನ್ನ ನುಡಿಗಳೇ
ಮನಕೆ ಬಹು
ಹಿತ ಸಖ....
ಇನ್ನಷ್ಟೂ ಚೆಂದದಿ
ಬಣ್ಣಿಸಲೇ.....??
ಸಪ್ತ ಸ್ವರಗಳು ಬೆರೆತು
ಹೊಮ್ಮುವ ನಾದಗಳು
ಸಹ ಸೋತಿಹವು
ನಿನ್ನ ಅಂತರಾಳದ
ಮಾತಿಗೆ....
ವಿಶ್ವಾಸಿಸು..ಉಸಿರಾಣೆ!!!!!-
ಮತ್ತೆ ಮತ್ತೆ ಮರಳಿ ಮರಳ ಮುತ್ತಿಕ್ಕುವ ಅಲೆಗಳ ತೀರದೊಂದಿಗಿನ ಸಂಭಾಷಣೆ
ಮಧುರ ಮೌನವ ಮನದೊಳಗೆ ಕಲಕಿ ಭಾವಗಳ
ಬೆಳೆಸೊ ತುಂಟ ಪ್ರತಿಪಾದನೆ...-
ಹಸುಗೂಸಿನ ತೊದಲನುಡಿಯಲಿ
ಹುಮ್ಮಸ್ಸಿನ ಹರೆಯದ ಎದೆಬಡಿತದಲಿ
ಸಪ್ತಸ್ವರಗಳ ಇಂಪಿನ ರಾಗದಲಿ
ಮುಂಜಾನೆ ರವಿಯ ಹೊನ್ನ ಕಿರಣಗಳಲಿ
ಬೆಳಗುವ ಚಂದಮನ ಬೆಳ್ಳಿಯ ಬೆಳಕಿನಲಿ
ಚಿಗುರೊಡೆದು ಮೊಗ್ಗು ಬಿರಿದು ಅರಳಿದ
ಹೂವಿನ ಸುಗಂಧದಲಿ
ತಂಗಾಳಿ ಹೊತ್ತುತಂದ ಹಿತನುಡಿಯಲಿ
ಕಣಕಣವೂ ಕ್ಷಣಕ್ಷಣವೂ....
ಹೆಸರಾಗಲಿ ಕನ್ನಡ
ಉಸಿರಾಗಲಿ ಕನ್ನಡ-
ನೀನೆಂದರೆ...
ಮಂದಹಾಸ ಮೂಡಿಸೊ ಹಸಿ ನೆನಪು
ಕಣ್ಣಂಚಲಿ ಮಿಂಚೊ ಹೊಳಪು,
ಸಂಜೆಯ ಪಡುವಣದ ಕಡುಗೆಂಪು
ಮುಗಿಲಿಗೆ ಬಣ್ಣ ತುಂಬೊ ಕಾಮನಬಿಲ್ಲು,
ಅಮವಾಸ್ಯೆಯ ಕತ್ತಲ ರಾತ್ರಿ
ಹುಣ್ಣಿಮೆಯಲಿ ಹಂದರ ಹಾಸೋ ಬೆಳದಿಂಗಳು,
ತಡವಿಲ್ಲದೆ ಆವರಿಸೊ ಏದುಸಿರಿನ ರುವಾರಿ
ತಡ ರಾತ್ರಿ ಕನಸಿನ ಆಕ್ರಮಣಕಾರಿ,
ಬಯಸಿದ ಬೇನೆ
ಮನದ ಸೇನೆ,
ಎಲ್ಲವೂ ನೀನೆ..
ಎಲ್ಲಿಯೂ ನೀನೆ..
-
ಕಪ್ಪು ಚುಕ್ಕೆಯಾಗಿರುವ ನಿನ್ನೀ ಆಗಮನ ಕಂಗೆಡಿಸಿದೆ ಬಿಳಿ ಹಾಳೆಯಂತಹ ಬದುಕನ್ನು
ಎಷ್ಟೇ ಬಣ್ಣ ತುಂಬಿದರು ಮಾಸುತ್ತಿಲ್ಲವೇಕೆ ನೀನು
ಅಳಿಸಲು ಪ್ರಯತ್ನಿಸಿ ಸೋತಿಹ ನಾನು
ದೃಷ್ಟಿಬೊಟ್ಟೆಂದುಕೊಳ್ಳಲೇ ನಿನ್ನನು-
ಕನ್ನಡ...
ಭಾಷೆಯಲ್ಲವಿದು ಭಾವದೊಡಲು
ಬರಿ ನುಡಿಯಲ್ಲವಿದು ನಡಿಗೆಗೆ ಜೀವ
ಮೈ ಮನವ ತುಂಬೊ ವ್ಯಾಮೋಹ
ಕಣ್ಣೆದುರಿನ ನಿತ್ಯ ಸತ್ಯ...-
ಬೀದಿಯ ಕೊನೆಯ ಮರದ ಹೂವೊಂದು
ಅರಳದೇ ಉಳಿದಿತ್ತು ಗೆಳೆಯ
ಜಂಟಿ ಹೃದಯಗಳ ಒಲವಿನಕ್ಕರೆಯ ಕೊರತೆಯಾಯಿತೇನೋ ಬಹುಶಃ
ತಿರುವಿನಲಿ ತೀರದ ಭಾವಕ್ಕೆ
ಮಗದೂಮ್ಮೆ ಭಾರವಾಗಿ ಹೃದಯ
ಮುದುಡಿದ ಮನಗಳಲಿ ಹೊಸದಾಗಿ
ಚಿಗುರು ಚಿಮ್ಮುವುದೇನೊ ಪ್ರಾಯಶಃ-
ಮತ್ತದೇ ನೋಟವು
ಮೆದುವಾಗಿ
ಮನದುಂಬುತಿರುವಾಗ
ಮಾತುಗಳ ಮರೆಸಿ ಮೆರೆದ
ಮುಗುಳ್ನಗೆಯ ಮೇಲೆ
ಮೂಡಿದ್ದು...
ಅತಿಯಾದ ಅನುರಾಗ-
ಗೆಳೆಯ...
ಅರಳೋ ಕನಸುಗಳನೆಲ್ಲ ನಿನ್ನ
ತೋಳಲ್ಲಿ ಅಡಗಿಸಿರುವೆ...
ಭರವಸೆ ತುಂಬಿರುವ ಅಂತರಂಗದಲ್ಲಿ
ನನ್ನ ಕನಸುಗಳು ಬಲಿಷ್ಠವಾಗಲೆಂಬ
ಮೊದಲ ಮನದಿಚ್ಚೆಯಿಂದ...
-