No one loves you,
Untill you are Rich
Beautiful or Dead 😔-
#ಅನಿವಾರ್ಯ
ಸಾಗರದಷ್ಟು ಭಾವುಕತೆಯನ್ನು
ಮುಷ್ಟಿ ಹೃದಯದಲ್ಲಿ ಬಚ್ಚಿಟ್ಟುಕೊಳ್ಳಬೇಕು,
ಕಲ್ಲು ಮುಳ್ಳು ಬೇಲಿಗಳ ದಾಟಿ
ದಾರಿ ಸವೆಸಲೇಬೇಕು...
ಆಕಾಶದತ್ತ ದಿಟ್ಟಿಸುತ್ತಲೂ
ನೆಲದಲ್ಲಿ ಕಾಲೂರಿ ನಡೆಯಬೇಕು,
ಆಕಾಶ ಕೈಗೆಟುಕುವುದಿಲ್ಲ,
ನೆಲದ ನಂಟು ತೀರುವುದೂ ಇಲ್ಲ...
ಬೆಳಕನ್ನು ಅರಸುತ್ತ
ಕತ್ತಲನ್ನೂ ತಬ್ಬಿಕೊಳ್ಳಬೇಕು,
ಇಲ್ಲಿ ಬೆಳಕೆಂದರೆ ಬೆಳಕಲ್ಲ
ಕತ್ತಲು ಅಂಧಕಾರವೂ ಅಲ್ಲ...
ರಾತ್ರಿಯಾಗುತ್ತಲೇ ನೆರಳು
ಮಾಯವಾಗಬಹುದು,
ಜೊತೆಯಿದ್ದ ಹೆಜ್ಜೆಗಳ
ದಾರಿ ಕವಲೊಡೆಯಬಹುದು...
ಗುರಿ ಮುಟ್ಟುವುದಕ್ಕಿಂತ
ದಾರಿ ಸವೆಸುವುದು ಮುಖ್ಯವಿಲ್ಲಿ,
ಬದುಕುವುದಕ್ಕಿಂತ ಉಸಿರಾಡುವುದು
ಅನಿವಾರ್ಯವಿಲ್ಲಿ...!!-
ಬದುಕಿಗೆ ನೆಪ ಬೇಕಿತ್ತು,
ಉಸಿರಾಡುತ್ತಿರುವೆ...
ಉಸಿರಾಡಲು ಕಾರಣ ಬೇಕಿತ್ತು,
ಪ್ರೀತಿಸಿದೆ...!!!-
ಕಲ್ಲು ಬಂಡೆಯಾಗಲು ಬಯಸುತ್ತೇನೆ
ನಿರ್ಭಾವುಕವಾಗಿ,
ಸ್ಥಿರವಾಗಿ ನಿಂತೆಡೆ ನಿಲ್ಲ ಬಯಸುತ್ತೇನೆ-
ಬದುಕೆಂದರೆ ಇಷ್ಟೇ,
ಅರ್ಥ ಮಾಡಿಕೊಳ್ಳುವುದರೊಳಗಾಗಿ
ಮುಗಿದು ಹೋಗಿರುತ್ತದೆ...
ಜೀವಿಸುವ ಮುನ್ನವೇ
ಸಾವು ಸನಿಹವಾಗುತ್ತದೆ...-
ಶಿಕ್ಷೆಯನ್ನೇನೋ
ಬಹಳವೇ ಕೊಟ್ಟಿದೆ ಬದುಕು,
ಅಪರಾಧವೇನೆಂದು ಮಾತ್ರ
ತಿಳಿಸಿಲ್ಲ...
~ ಅನಾಮಿಕ
ಅನು:- ವಿನುತಾ-
ಅವರು ಹೇಳುತ್ತಾರೆ
ಅವಳ ಕಣ್ಣುಗಳು
ಶಾಂತ ಸರೋವರವೆಂದು.
ಹಹಹ, ನಿಜಾ....
ಆದರೆ,
ಸಮುದ್ರದ ಆಳ ತಳದಲ್ಲಿ
ಮುತ್ತುಗಳಷ್ಟೇ ಇರುವುದಿಲ್ಲ,
ಜೀವಂತ ಜ್ವಾಲಾಮುಖಿಯನ್ನೂ
ಕಡಲು ತನ್ನೊಳಗೆ
ಜೋಪಾನವಾಗಿಟ್ಟುಕೊಂಡಿರುತ್ತದೆ...
ಲಾವಾ ಸ್ಪೋಟಗೊಳ್ಳುವವರೆಗೂ
ಅದು ಶಾಂತ ಸರೋವರವೇ,
ಒಡಲ ಅಗ್ನಿಕುಂಡ ಸಿಡಿವವರೆಗೂ
ಇವಳೂ ಸಹ.......-
ಬದುಕಲ್ಲಿ ಬಹಳಷ್ಟು ಸಿಕ್ಕಿರುತ್ತದೆ,
ಆದರೆ ಯಾವುದು ದಕ್ಕಿರುವುದಿಲ್ಲವೋ
ಅದನ್ನೇ ಲೆಕ್ಕ ಹಾಕುತ್ತೇವೆ ನಾವು!!-