ಜೀವನದಲ್ಲಿ ಪ್ರೀತಿಯು ಒಂದು ಭಾಗ
ಪ್ರೀತಿಯಲ್ಲಿ ಏಕಾಂತ ಒಂದು ಭಾಗ
ಈ ಭಾಗ ಭಾಗವಾಗಿರುವದನ್ನು
ಭಾಗವಾಗಿಯೇ ಅನುಭವಿಸಬೇಕು
ಈ ಭಾಗವನ್ನು ಜೀವನದ ಮುಂಭಾಗ ತಂದರೆ
ಗುರಿಯ ದೂರ ತುಂಬಾ ದೂರವಾಗುತ್ತೆ-
Vinay Kumar
92 Followers · 10 Following
KACD Dharawad.Karnataka India 🇮🇳
Joined 20 May 2019
6 DEC 2021 AT 8:32
26 JUL 2021 AT 20:07
ತುಡಿತವಿದೆ ಗುರುವೇ ಮಿಡಿತವೂ ಇದೇ
ಗುರುವಾಗಿ ನಿವಿರಲು ಗುರಿ ಮುಂದಿದೆ,
ದಾರಿ ದೀಪ ನೀವಾಗಿರಲು
ಗುರಿಯ ದಾರಿ ಕಾಣುತಿದೆ.
ತೋಳಲ್ಲಿನ ತಾಕತ್ತು ಕಣ್ಣಲ್ಲಿನ ಉನ್ಮಾದ,
ಮನಸ್ಸೆಂಬ ಹೊಲದಲಿ ಕನಸಿನ ಮೊಳಕೆ
ಚಿಗುರುತಿದೆ ನಿಧಾನವಾಗಿ
ಮಂದಗತಿಯ ಆಮೆಯಂತೆ,
ಗೆದ್ದೇ ಗೆಲ್ಲುವೆ ಇಡೀ ಪ್ರಪಂಚವನ್ನೇ
ನಿಮ್ಮ ಕೃಪಕಟಾಕ್ಷ ಒಂದಿದ್ದರೆ-
20 JUL 2021 AT 8:36
ಪ್ರೀತಿ ಎಂಬುದು
ಎರಡು ಆತ್ಮಗಳ
ಬೆತ್ತಲೆ ಪ್ರಪಂಚ
ಅಲ್ಲಿ ಇನ್ನೊಬ್ಬರಿಗೆ
ಸ್ಥಳವಿಲ್ಲ-
16 JUL 2021 AT 16:41
ಕಳಚು ಜಾತಿ ಭೇದದ ಕೊಂಡಿಯ
ಉಸಿರಾಡುವುದೇ ಜೀವನ
ಅದು ನಿಲ್ಲುವುದೇ ? ಅದೇ ಮರಣ.
ಕಾಣದ ಜಾತಿಯ ಹಂಗೇಕೆ
ಬುದ್ಧ,ಬಸವ,ಅಂಬೇಡ್ಕರ್ ರವರು
ಶಾಂತಿ,ಸಮಾನತೆಯ ಸಾರಿರಲು
ಕ್ರೂರತನದ ಮನಸ್ಸೇಕೆ ?-
29 JUN 2021 AT 23:42
ಹೊತ್ತಲ್ಲದ ಹೊತ್ತಲ್ಲಿ
ಬಿತ್ತೊಂದು ಕನಸು
ಬಡಿದೆಬ್ಬಿಸಿತು ನಿದ್ದೆಯ ಕಸಿದು
ಹೇಳಿತೊಂದು ಕಿವಿಮಾತು,
ಬಂದ ಉದ್ದೇಶ ನೆನಪಿರಲೇಂದು-
26 JUN 2021 AT 9:03
ನಿನ್ನ ಹತ್ತಿರ ಸಿಹಿ ಇಲ್ಲದಿದ್ದರೆ
ಒಂದು ಚಿಕ್ಕ ಇರುವೆಯೂ
ನಿನ್ನ ಹತ್ತಿರ ಸುಳಿಯಲ್ಲ
ಇನ್ನು ಮನುಷ್ಯ ಯಾವ ಲೆಕ್ಕ
ಸ್ವಾರ್ಥ ಪ್ರಪಂಚವಿದು
ವಾಸ್ತವಿಕವಾಗಿ ಬದುಕು
ನಿ ಒಪ್ಪಿದರೂ, ಒಪ್ಪದಿದ್ದರೂ
ಇದೇ ಸತ್ಯ-