ನನ್ನುಡುಗಿ ಒಬ್ಬಳು ಸಿಡುಕು ಮೂತಿ ಸುಂದರಿ
ಅವಳೆಂದರೆ ಏನು ಹೇಳಲಿ
ಅವಳ ಪ್ರೀತಿ ಕಾಳಜಿಗೆ ಏನ ಹೋಲಿಸಲಿ
ತಾಯಿಯಂತೆ ನನ್ನ ಸಲುಹುವಲು
ಮಗುವಿನಂತೆ ಆರೈಕೆ ಮಾಡುವಳು
ಹುಚ್ಚಿಯಂತೆ ಪ್ರೀತಿಸುವಳು
ಕೋಪಬಂದರೆ ಕಲ್ಲಾಗುವಳು
ಕೋಪ ಕರಗಿಡೊದನೆ ಹೂವಾಗುವಳು
ಏನೆ ಆಗಲಿ ಇವಳು ನನ್ನವಳು
ನನ್ನ ಒಲವಿನ ಒಲುಮೆಯ ರಾಣಿ ಇವಳು
-
ಬಧುಕು ಕಲಿಸಿದ್ದು ಹೆಚ್ಚು
ಅಂದ ಬೇಕಿಲ್ಲ ಚೆಲುವೆ ನಿನ್ನ ನನ್ನವಳು ಎನ್ನಲ್ಲೂ
ಅಂತಸ್ತು ಬೇಕಿಲ್ಲ ನಮ್ಮ ಮನಸುಗಳು ಬೇರೆಯಲು
ಭಗವಂತ ಮನಸುಮಾಡಲಿಲ್ಲ ನಿನಗೆ ನನ್ನ ಕುರಿತು ತಿಳಿಸಲು
ಅದೃಷ್ಟ ಬೇಕಿತ್ತು ನಿನ್ನ ನನ್ನವಳಾಗಿಸಿಕೊಳ್ಳಲು
ಕೊನೆವರೆಗೂ ನಿನ್ನ ನನ್ನೊಡನೆ ಉಳಿಸಿಕೊಳ್ಳಲು-
ಪ್ರತಿಫಲ ಬಯಸದೆ
ಸದಾ ಕಾಲ ನಮ್ಮ ಏಳಿಗೆಯ ಜೊತೆಗಿರುವಳು
ಸಾವಿರ ಕಷ್ಟಗಳು ಎದುರಾದರು
ಹೆದರಬೇಡ ನಾನಿರುವೆ ಎಂದ್ದೆನ್ನುವಳು
ಧೈರ್ಯಕೆ ಹೆಸರಿವಳು
ಮಮತೆಯ ಕಡಲಿವಳು
ತ್ಯಾಗಮಹಿ ತಾಯಿ 😍😍😍-
ನನ್ನ ಒಲವಿನ ಒಡತಿಯೇ
ನನ್ನ ಬಾಳ ಸಂಗತಿಯೇ
ಬಾನಂಚಲಿ ಮಿನುಗುವ
ಚುಕ್ಕಿ ಆಗಿದ್ದೆ ಇಷ್ಟು ದಿನ ನೀನು
ನನ್ನ ಮನದಂಗಳದಿ ಮಿನುಗುವ
ಮಿಂಚಾಗು ಸಾಕು ಇನ್ನು
ಒಲವಿನ ಒಡತಿ-
ನೀನು ನನ್ ಮೇಲೆ ಇಟ್ಟಿರೋ ಈ ಪ್ರೀತಿ
ಇನ್ನು ಜಾಸ್ತಿ ಆಗ್ದೇ ಇರ್ಲಿ ಯಾಕೆಂದ್ರೆ
ನಾನ್ ಮಾಡೋ ಸಣ್ಣ ತಪ್ಪು ಎಲ್ಲಿ ನಿನಗೆ
ಜಾಸ್ತಿ ಬೇಜಾರ್ ಮಾಡುದ್ರೆ ಅನ್ನೋ ಭಯ
ನೀನ್ ನನ್ ಜೀವನದಲ್ಲಿ ನನ್ನ ಜೀವ ಆಗಿ ಜೀವನ ಪೂರ್ತಿ ಇರ್ಬೇಕು
ನಾನ್ ನಿನ್ ನೆರಳಾಗಿ ನಿನ್ನ ಕಾಪಾಡ್ತೀನಿ
ನನ್ನ ಮುದ್ದಿನ ಚಿನ್ನಮ್ಮ ನಿನಗಿದೋ ಪ್ರೀತಿಯ ಪದಕುಂಚ 😍😍
-
ಹುಟ್ಟಿರೋಧು ಕರ್ನಾಟಕದಲ್ಲಿ
ಜೀವನ ನಡಿಸ್ತಿರೋಧು ಕರ್ನಾಟಕದಲ್ಲಿ
ನಮ್ ಸಪೋರ್ಟ್ ಅಂತ ಬಂದ್ರೆ ಅದು RCB ಗೆ
ಪ್ಲೇಯೆರ್ ನೋಡಿಯೇಲ್ಲ ಸಪೋರ್ಟ್ ಮಾಡಲ್ಲ
ಪ್ರಾಣ ಹೋಗೋವರ್ಗು RCB ನ ಬಿಡಲ್ಲ
ಕಪ್ ಗೆಲ್ಲೋದೇ ಬೇಡ ಗುರು ಕೊನೇವರಿಗೂ
ನಿಯತ್ತಾಗ್ ಇರ್ತಿವಿ ಅಷ್ಟೇ ಸಾಕ್ 🔥🔥-
ಒಂದೋಮ್ಮೆ ಸಿಹಿ ನೀರಿನ ಸರೋವರ
ಈ ಬಧುಕೆನಿಸಿದರೆ
ಇನ್ನೊಮ್ಮೆ ಮರಳುಗಾಡಿನ
ಬರುಡು ಭೂಮಿ ಎಂದೆನಿಸುವುದು
ಒಮ್ಮೆ ಪ್ರೀತಿ ಒಮ್ಮೆ ಕೋಪ
ಒಮ್ಮೆ ಉಲ್ಲಾಸ ಒಮ್ಮೆ ಅಸಯ್ಯ
ಇವೆಲ್ಲವೂ ಪ್ರೀತಿಯ ರೂಪಗಳು
ಎಲ್ಲವನ್ನು ಸಹಿಸಿ ಮುನ್ನುಗಿದರೆ ಬಧುಕು ಮೃಷ್ಟಾನ ಬೋಜನ
ಹೆದರಿ ಹಿಂದುಳಿಧರೆ ಉಪ್ಪು ಕಾರ ಇಲ್ಲದ ತಂಗಳನ್ನ
ಜೀವನ
✌️✌️-
ಸಮಯ ಕಳೆದಂತೆ ಸಂಬಂಧಗಳ
ರೂಪ ಬದಲಾಗಿರಬಹುಧು
ಆದರೆ ನನಗೆ ನಿನ್ನ ಮೇಲಿದ್ದ ಪ್ರೀತಿ ಬದಲಾಗಿಲ್ಲ
ಕಳೆದ ಸಮಯದ ಸವಿ ನೆನಪುಗಳು
ಸದಾ ಮರುಕಳಿಸುವುಧು
ಆ ನನ್ನ ಕೋಣೆಯ ಕತ್ತಲೆಯ ಗೋಡೆಮೇಲೆ
ಬರೆಯಲು ಕುಂತರೆ ಕೊನೆಯೆಲ್ಲಿದೆ ಪದಗಳಿಗೆ
ಬರೆಯಲಾಗದಷ್ಟು ಪದಗಳಿವೆ ಮನದೊಳಗೆ
ಅದೇನೇ ಆಗಲಿ ನಿನ್ನ ಜಾಗ ನನ್ನ ಹೆದೆಯೊಳಗೆ 😍😍-
ಕೆಲವರು ನಮಗೆ ತಿಳಿಯದೆ
ನಮ್ಮ ಮನದಲಿ ಮನೆಮಾಡುವರು
ಇನ್ನು ಕೆಲವರು ಯಾರಿಗೂ ಅರಿಯದಂತೆ
ಎಲ್ಲರ ಹೃದಯದಲ್ಲಿ ದೇವಾಲಯ ಕಟ್ಟಿಸಿಕೊಳ್ಳುವರು
ಪ್ರೀತಿಯ ಮಾತುಗಳು ಉತ್ತಮ ಚಿಂತನೆಗಳು
ನಿಮ್ಮಲಿದ್ದ ಆ ಗುಣಗಳೇ ನಮ್ಮನ್ನು ನೀವು ಅಗಲಿದರು
ನಮ್ಮಿಂದ ಧೂರಾಗದೆ ಉಳಿಯಲು ಕಾರಣವಾಯಿತು
ಎಲ್ಲೇ ಇದ್ದರು ಸಂತಸವಾಗಿರಿ ಸ್ವರ್ಗದಲ್ಲಿಯೂ
ನಗುವಿನ ರಾಜಕುಮಾರನಂತೆ ಬಧುಕಿ
ಹುಟ್ಟು ಹಬ್ಬದ ಶುಭಾಶಯಗಳು
ಪ್ರೀತಿಯ (ಗಿರೀಶ್ ಅಪ್ಪಾಜಿ )-
Clubhouse ಕಹಾನಿ
ನೀನೆ ಕಾರಣ ಚೆಲುವೆ
ನನ್ನೆಲ್ಲ ನಿದ್ದೆ ಇಲ್ಲದ ರಾತ್ರಿಗಳಿಗೆ
ಮಿತಿಯೇ ಇರದ ನಮ್ಮಮ್ಮನ ಬೈಗುಳಗಳಿಗೆ
ಆಹ್ವಾನಿಸಿದೆ ನೀ ನನ್ನ ತಳಿರು ತೋರಣವ ಕಟ್ಟಿ
ನಿನ್ನ ಮನೆಯಂಗಳಕ್ಕೆ
ಕರಗಿ ನೀರಾದೇನು ನಾ ನೀ ತೋರಿದ ಪ್ರೀತಿಯ ಹಂಬಲಕ್ಕೆ
ಕೇಳಿದ ಮಾತುಗಳನ್ನೇ ಕೇಳಿ ಕೇಳಿ
ಸಾಕೆನಿಸಿದೆ ನಿನ್ನ ಸ್ನೇಹ ಎರಡೇ ದಿನಕ್ಕೆ
ದಯಮಾಡಿ ಬಿಟ್ಟು ಬಿಡು ನನ್ನ
ನಾ ನಮಸ್ಕಾರಿಸುವೆನು ನಿನ್ನ ಪಾದ್ಧಾಂಗಳಕ್ಕೆ-