ನಾನು ಕವಿ ಆಗಿರಬಹುದು ಆದ್ರೆ....
ನಾ ಬಳಸುವ ಪದಗಳು ನಿನ್ ಇಂದ ಏರವಲು ಪಡೆದವು ಅಲ್ಲವೇ.
ನಾನು ಬರಹಗಾರ ಆಗಿರಬಹುದು ಆದ್ರೆ....
ನಾ ಬರೆಯುವ ಸಾಲುಗಳು ನೀನೇ ಅಲ್ಲವೇ.
ನಾ ಕವಿತೆ ಬರೆದಿರಬಹುದು ಆದ್ರೆ....
ನಾ ಬರೆದ ಕೀರ್ತಿ ಕವೀತೆ ನಿನ್ನದೇ
ಅಲ್ಲವೇ.-
Vikas K
(ಕೀರ್ತಿವಿಕಾಸ)
54 Followers · 11 Following
Joined 14 June 2018
25 AUG 2018 AT 21:14
7 OCT 2021 AT 17:12
ಕಳೆದುಹೋಗಬೇಕಿದೆ
ಸೆಳೆದ ದಾರಿಯ ನಡುವೆ
ಜಗದ ಪರಿಯ ಮರೆತು,
ಬದುಕ ಬವಣೆಯ ಕಲೆತು,
ಸಂಬಂಧದ ಬಂಧ ಕಳಚಿ,
ಕಣ್ಣಳತೆಯ ದೂರವೂ ಕೂಗು ಅಳತೆ ದೂರವೂ
ಸಾಗಬೇಕಿದೆ ಬಹು ದೂರ ಸಾಗಬೇಕಿದೆ!.......-
6 AUG 2021 AT 23:38
ಮಧ್ಯರಾತ್ರಿಯ ನೀರವತೆಯಲ್ಲಿ
ನಿನ್ನ ಮೀರಿದ ಕನಸು.
ಇರುವುದು ಒಂದೇ ಆಸೆ !
ಮತ್ತೆ ನನ್ನೆ ಆವರಿಸು .-
11 MAR 2021 AT 19:48
ಕಾಡು ಹೂವಿನ ಸುವಾಸನೆ
ಕಾಣದ ಕನಸಿನ ಮುನ್ನುಡಿ ಬರದಿದೆ.
ಇಳೆ ಕೂಡ ಮಳೆಯ ಸಿಂಚನದಲ್ಲಿ ಮಿಂದು
ಮೈ ಕೊಡವಿ ಸಂಜೆಯ ಸಮಾಪ್ತಿಯತ್ತ ಸಾಗಿದೆ.-
9 MAR 2021 AT 14:23
ಮನಸಿನ ಮೇಲಿನ ಭ್ರಮೆಯ ಪೊರೆ ಕಳಚಿದೆ.
ಕಾಣದೂರಿನ ಅಲೆ ಸೇರಿದೆ ಕಾಣದ ಕಡಲ ಜೊತೆಗೆ.
ನಡುವಲೇ ಮುಗಿದಿದೆ ಕಥೆ
ಪ್ರೀತಿಯ ಕಥೆ..... ಕಥೆಯಲ್ಲ ವ್ಯಥೆ!!.-
7 FEB 2021 AT 23:32
ಕಣ್ಣಿನ ಹನಿಗಳಿಗೆ ಕೂಡ .
ತಿಳಿ ಮನಸಿನ ಮೇಲೆ ಬಿದ್ದು .
ಭೀಕರ ತರಂಗಗಳನ್ನು ಸೃಷ್ಟಿಸುವ ಶಕ್ತಿ ಹೊಂದಿವೆ.-