"ಭಾಗವಾಗಿದಿನಿ" ಅಂದುಕೊಂಡೆ
"ಭಾರವಾಗಿದಿನಿ" ಅಂತ ಗೊತ್ತಿರಲಿಲ್ಲ-
ನಮ್ಮ ಅನುಪಸ್ಥಿತಿಯಲ್ಲಿಯೂ
ಅವರು ಖುಷಿಯಾಗಿ ಇರ್ತಾರೆ ಅಂದ್ರೆ
ನಾವು ಖುಷಿ ಪಡಬೇಕು
ಯಾಕಂದ್ರೆ ನಾವು ಬಯಸಿದ್ದು
ಬಯಸೊದು ಅವರ ಖುಷಿಯನ್ನೆ-
ಯಾರು ನಮಗೆ ನೋವಿನ
ಪರಿಚಯವೇ ಮಾಡಿಸುವುದಿಲ್ಲ
ಅಂದುಕೊಂಡಿರುತ್ತೆವೊ ಅವರೆ
ನೋವಿನ ಬುತ್ತಿಯನ್ನು ಕೊಟ್ಟು
ಹೋಗುವರು-
ಅವರು ಕೊಟ್ಟಿದ್ದು
ಅಂತಿಂಥ ಸ್ನೇಹ ಅಲ್ಲ
ಅದನ್ನ ಮರೆಯುದಕ್ಕೆ
ನನ್ನಿಂದ ಸಾಧ್ಯವಿಲ್ಲ
ಹಾಗಂತ ಅವರಿಗೆ
ತೊಂದರೆ ಕೊಡೊಕೆ ಇಷ್ಟವಿಲ್ಲ
ಅವರಿಗೆ ಬೇಡವಾಗಿದಿನಿ ಅಂದ್ರೆ
ನನ್ನ ಸುಳಿವು ಕೂಡ ನೀಡಲ್ಲ-
ನಮ್ಮ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರೂ
ನಾವು ಅವರನ್ನು ನಮ್ಮ ಜೀವನದಲ್ಲಿ
ಉಳಿಸಿಕೊಳ್ಳಲು ನಾವೇ ಸೋಲಬಹುದಾಗಿತ್ತು
ಆದರೆ ಅವರಿಗೆ ನಮ್ಮ ಬಗ್ಗೆ ಯೋಚನೆನೆ ಇಲ್ಲ ಅಂದ್ರೆ
ನಮ್ಮ ಸೋಲಿಗೆ ಅರ್ಥವೆ ಇರುವುದಿಲ್ಲ-
ಎಲ್ಲರ ಜೀವನದಲ್ಲಿ ಬೆಳಕು
ನೀಡುವ ರವಿಯಂತೆ ಆಗದಿದ್ದರು,
ನಮಗಾಗಿ ಸದಾ ಒಳ್ಳೆಯದನ್ನು ಬಯಸುವ
ಆ ಮುಗ್ಧ ಮನಸ್ಸುಗಳ ಜೀವನದಲ್ಲಿ
ದೀಪವಾದರೆ ಸಾಕು-
ನಿಮ್ಮ ಜೀವನದಲ್ಲಿ ವಿಶೇಷವಾಗಿರುವ
ವ್ಯಕ್ತಿಯ ಜೀವನದಲ್ಲಿ ನೀವು ಕೂಡ
ವಿಶೇಷವಾಗಿರಬೇಕು ಅಂತ ಏನಿಲ್ಲ
ಹಾಗೆಂದುಕೊಂಡು ಅವರಿಂದ ನಿರೀಕ್ಷಿಸಿದ್ದು
ನಿಮ್ಮ ತಪ್ಪು ಹೊರತು ಅವರದಲ್ಲ-
ಕೋಪ ಒಂದೆ ಗೊತ್ತಾಗುತ್ತೆ
ಅದರ ಹಿಂದೆ ನಾವು ಹಾಕಿರುವ
ಕಣ್ಣೀರು ಇಲ್ಲಿ ಯಾರಿಗೂ ಗೊತ್ತಾಗಲ್ಲ-
ನಿಮಗೆ ಹತ್ತಿರವಾದವರು ನಿಮ್ಮಂತೆ
ಹವ್ಯಾಸಗಳನ್ನು ಹೊಂದಿರಬಹುದು
ಆದರೆ ನಿಮ್ಮಲ್ಲಿರುವ ಭಾವನೆಗಳನ್ನು
ಹೊಂದಿರಲಾರರೂ-