ವೀರಭದ್ರ ಬಿ ಎಚ್ ಶಿರಸಿ   (ಕಮಲಾಸುತ)
12 Followers · 2 Following

"ನೋಡು"ವಂತೆ ಕಾಣುವೆ;
"ಅರಿ"ಯುವಂತೆ ಬೆರೆಯುವೆ!!
Joined 16 May 2020


"ನೋಡು"ವಂತೆ ಕಾಣುವೆ;
"ಅರಿ"ಯುವಂತೆ ಬೆರೆಯುವೆ!!
Joined 16 May 2020

ಮನುಜರ "ಮನೆ"ಯಲ್ಲಿ, "ಮನ"ದಲ್ಲಿ ನಮ್ಮ "ನೆಲೆಯ ಬೆಲೆ"ಯೇನೆಂಬುದ ಅರಿತಿರಬೇಕು....

-



ನನ್ನೂರಾಗಿನ ಮಳಿ....

ಮುಗಿಲ ಮಾಡು ಮುರಿದೋದ್ಹಂಗ,
ಬಾನಂಗಳದ ಬಯಲು ಬರಿದಾದ್ಹಂಗ;
ಮೋಡದ ಮಡು ಮಗುಚಿಕೊಂಡ್ಹಂಗ,
ಅಂಬರದಾಗ್ಯರೋ ಆರ್ಭಟಿಸಿ ಅತ್ಹಾಂಗ;
ಆಗಸದ ಅಟ್ಟ ಅರ್ಧರ್ಧವಾದ್ಹಾಂಗ,
ಬಾನಿನ ಬಾನಿ (ತೊಟ್ಟಿ) ಬೋರ್ಲುಬಿದ್ಹಾಂಗ;

-



ಸೋಲು ಸಾವಿಗೆ
ಮೂಲ ಆಗಬಾರದು,
ಸೋಲು ಗೆಲುವಿಗೆ
ಮೂಲ ಆಗಬೇಕು;
ಸೋತು ಸತ್ರ
ಸಾಯಿಸ್ತಾರ ಮರ್ತು;
ಸಾಧಿಸಿ ಸತ್ರ
ಸತ್ಮ್ಯಾಲೂ ಸಂಭ್ರಮಿಸ್ತಾರ;

-



ಮನುಷ್ಯ,
ಬದುಕಿನಾಗ ಬೆಳೀಬೇಕು,
ಆದರ,
ಬೆಳಿಯೋ ಮುಂಚೆ
ಉಳೀಬೇಕು;
ಅಲ್ಲೇ ಇಳೀಬೇಕು,
ಇಳಿದು,
ಅಲ್ಲೇ ಅರಳಬೇಕು;
ಆಗಲೇ,
ಬದುಕಿನ ತಿರುಳು ಸಿಗತೈತಿ!!

-



ನಿನ್ನ ನಡೆಯಲಿ ವ್ಯತ್ಯಾಸವಿರೆ ಬದಲಾಯಿಸು
ತಮ್ಮ ನುಡಿಯಂತೆ ನೀ ನಡೆಯಬೇಕೆಂದರೆ, ನಿರ್ಲಕ್ಷಿಸು;
ಅರಿತು ಜೊತೆಯಾದರೆ/ಜೊತೆಯಿದ್ದರೆ ಸಂಭ್ರಮಿಸು,
ಮರೆತು ಕತೆಯಾದರೆ, ವಿರಮಿಸು, ನಿರ್ಗಮಿಸು;

-



ಗಮ್ಯದೆಡೆಗಿನ ಪಯಣದಲಿ, "ಬಲ್ಲವರ, ಬಲ್ಲಿದರ", ಸಲಹೆ, ಸೂಚನೆ, ಮಾರ್ಗದರ್ಶನ ಅವಶ್ಯವಿವಿರುವೆಡೆ ಪಡೆಯಬೇಕು, ತಪ್ಪಿಲ್ಲ. ಆದರೆ, ಅವಲಂಬಿತನಾಗಬಾರದು. ಏಕೆಂದರೆ, ಅವಲಂಬನೆ, ಮನುಷ್ಯನನ್ನು ಬಲಹೀನನ್ನಾಗಿಸುತ್ತದೆ. ವಿಚಾರಹೀನನ್ನಾಗಿಸುತ್ತದೆ. ಗಮ್ಯ, ದುರ್ಲಭವಾಗುತ್ತದೆ. ಕೆಲವೊಮ್ಮೆ, ಗಮ್ಯ ಸೇರುವುದಕ್ಕೆ ಅಸಾಧ್ಯವಾಗುತ್ತದೆ.

-



ಹೌದೆಂದರೆ ಎಲ್ಲರೂ ಸೇರುವರು, ಸೇರಿಸಿಕೊಳ್ಳುವರು,
ಇಲ್ಲವೆನ್ನಲು, ಹಗೆ ಸಾಧಿಸುವರು,
ಆಡಿಕೊಳುವರು;
ಬಂಧ, ಬಂಧ ಮುಕ್ತವಾಗಿರಬೇಕು,
ಬಂಧನವಾಗಲ್ಲ:
ಹಿಡಿತ ಬಿಗಿಯಾಗಿಸಲ್ಹೋದರೆ
ಹರಿದ್ಹೋಗಬಹುದು, ಹಾರಿ ಹೋಗಬಹುದು;

"One 'no' — and they forget every 'yes' you ever gave. Let them. Your strength lies in the truth you stand by, not the approval you earn."

-



People often try to hinder your progress at every stage—first by creating obstacles, then distractions, followed by fear tactics, and finally peer pressure. If you persist through it all and succeed, they reluctantly congratulate you....

-



ಮನ್ವಂತರಗಳೇ ಸರಿದಾವು
ಜೀವ/ಜೀವನ ಬದಲಾಗ್ಯಾವು,
ನೋಟದಾಗ ಬದಲಿಲ್ಲ!
ದ್ವೇಷವೋ ತಿರಸ್ಕಾರವೋ
ಹಗೆಯೋ ಛಲವೋ,
ಇಂದಿಗೂ ಅರಿಯಲಾಗುತ್ತಿಲ್ಲ!
ಆಡದೇ ಅದುಮಿಟ್ಟ ಮಾತುಗಳೆಷ್ಟು
ಬಿಚ್ಚಿಡದೇ ಬಚ್ಚಿಟ್ಟುಕೊಂಡ ಭಾವನೆಗಳೆಷ್ಟು,
ಅಲೆಗಳಂತೆ ಮನದೆರೆಯ ಮೇಲಪ್ಪಳಿಸುತ್ತಿವೆಯಲ್ಲ!
ಸಿಗಲಿಲ್ಲವೆಂದು ಸಂಕಟ ಪಡುವುದೋ
ಸಿಗದಿದ್ದರೂ ಸೊಗಸಾಗಿರುವುದಕೆ ಸಂತೈಸಿಕೊಳುವುದೋ,
ಈ ಕ್ಷಣಕೂ ಅರಿವಾಗುತಿಲ್ಲ!!!!

-



ನಮ್ಮ ಯೋಗಕ್ಷೇಮವನ್ನು ನಾವು ನೋಡಿಕೊಳ್ಳದಿದ್ದರೆ, ಅನ್ಯರು ತಮ್ಮ ಯೋಗಕ್ಷೇಮಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಾರೆ....

-


Fetching ವೀರಭದ್ರ ಬಿ ಎಚ್ ಶಿರಸಿ Quotes