ವಿ_ರಾ_ಗಿ   (virawgi)
1.7k Followers · 1 Following

Joined 25 April 2018


Joined 25 April 2018
ವಿ_ರಾ_ಗಿ 5 DEC 2019 AT 19:37

ಮತ್ತೊಂದು ಹೆಜ್ಜೆ ಬದಲಾವಣೆಯ ಕಡೆಗೆ
ಇರುವುದೆಲ್ಲವ ಬಿಟ್ಟು ಇನ್ನೇನೋ ಹುಡುಕಲು
ಇನ್ನೊಮ್ಮೆ ಸಿಕ್ಕಾಗ ಮತ್ತಷ್ಟು ಮಾತುಗಳು
ಇದುವೇ ಸರಿ ಸಮಯ ವಿರಾಮ ಕೊಡಲು.

-


52 likes · 3 shares
ವಿ_ರಾ_ಗಿ 1 DEC 2019 AT 12:18

ತೊಟ್ಟಿಕ್ಕುವ ಹನಿಗೆ
ತಾಳ ತಪ್ಪುತಿದೆ ಮನ
ತೊಳ ಬಳಸಿ ಬಿಗಿದಪ್ಪಿ
ತಣಿಸಬಾರದೆ ಈ ಕ್ಷಣ

-


50 likes
ವಿ_ರಾ_ಗಿ 28 NOV 2019 AT 12:20

ಮಳೆ ಬರುವ ಹಾಗಿದೆ
ಮೋಡ ಪೂರ್ತಿ ಮುಸುಕಿದೆ
ತುಸು ಮಂದ ಗಾಳಿ ಮನವ ಹಸಿ ಮಾಡುತಿದೆ
ಹಳೆ ಗೆಳೆಯ ನಿನ್ನ ನೆನಪು ತುಂಬ ಕಾಡುತಿದೆ

-


67 likes · 9 comments
ವಿ_ರಾ_ಗಿ 27 NOV 2019 AT 16:11

ಕಳೆದು ಹೋಗುವ ಕಾಲದ ಜೊತೆ
ಹೇಳಲಾಗದ ಕಥೆಯೊಂದು
ಎಲ್ಲರ ಒಡಲೊಳಗೆ ಮನೆ ಮಾಡಿಯೇ ಇರುತ್ತದೆ

-


61 likes · 8 comments · 1 share
ವಿ_ರಾ_ಗಿ 26 NOV 2019 AT 21:15

ಕೆಲ ಹೊತ್ತು ಕಳೆ
ಆಮೇಲೆ ಕೊಳೆ
.
.
.
.
ಅಷ್ಟೇ... ಬರೀ ಅಷ್ಟೇ
ಸದಾಕಾಲ ಸುವಿಚಾರ ✌️

-


37 likes · 2 comments
ವಿ_ರಾ_ಗಿ 26 NOV 2019 AT 9:58

ನೀ ಇದ್ದರು ಇಲ್ಲದಿದ್ದರೂ ನಾನಂತೂ ಇರುವೆ
ಅಳತೆಗೆ ಸಿಗದ ಆಕಾಶದಂತೆ ವಿಶಾಲವಾಗಿ
ಅಗೆದಷ್ಟು ಮುಗಿಯದ ಭೂಮಿಯಂತೆ ಆಳವಾಗಿ
ನಿನ್ನ ವಿರಹದಗ್ನಿಯಲಿ ಸುಟ್ಟ ದೇಹದಿಂದ ಹೊರಬಂದ
ಕೊನೆಯಿರದ ಆತ್ಮವಾಗಿ
ನಾನಂತು ಇರುವೆ, ಖಂಡಿತ ನಾನಂತೂ ಇರುವೆ

-


48 likes · 11 comments
ವಿ_ರಾ_ಗಿ 23 NOV 2019 AT 15:46

ಅಧರಗಳಾಟ ಆಡಿ ಮನ ತಣಿಸಲು ಬಂದವಳು
ತುಸು ಕಾವು ಹೆಚ್ಚಾಗಿ ದೇಹ ತಣಿಸಿ ಹೋದವಳು

(No offense)

-


37 likes · 12 comments
ವಿ_ರಾ_ಗಿ 23 NOV 2019 AT 6:57

ಎದೆ ಮೇಲೆ ಕೈಯಿಟ್ಟು ಹೇಳುವೆ ಪ್ರತಿ ಬಾರಿ ನಿನ್ನ ನೆನಪಾದಾಗ
"ಬರೀ ಉಸಿರು ಬೆವರುವುದು....

(Read caption)

-


Show more
43 likes · 15 comments
ವಿ_ರಾ_ಗಿ 22 NOV 2019 AT 19:50

ಭಿಕ್ಷೆ ಕೊಟ್ಟು ಬೀಗಬೇಡ
ದಾನ ಕೊಟ್ಟರೆ ಗರ್ವ ಬೇಡ
ಕೊಟ್ಟೆ ಎಂದರೆ ಕೆಟ್ಟು ಹೋಗುವೆ
ಕೊನೆಗೆ ಎಲ್ಲ ಬಿಟ್ಟು ಹೋಗುವೆ

-


50 likes · 12 comments
ವಿ_ರಾ_ಗಿ 22 NOV 2019 AT 11:58

ಅಂತರಂಗದೊಳಗೊಂದು ಅಗೋಚರ ಶಕ್ತಿ ಇದೆ
ಅಲ್ಲೇ ಅವಶೇಷವಾಗುವ ಮೊದಲು ಜಾಗೃತಗೊಳಿಸಿ
ವ್ಯಕ್ತಿತ್ವ ವಿಕಸನ,ಚಾರಿತ್ರ್ಯ ಶುದ್ಧ ಬದುಕು ನಿಮ್ಮದಾಗುವುದು

-


Show more
47 likes · 14 comments · 2 shares

Fetching ವಿ_ರಾ_ಗಿ Quotes

YQ_Launcher Write your own quotes on YourQuote app
Open App