ವಿ ರಾ ಗಿ ಜೈನ್   (vi RAW gi)
2.0k Followers · 2 Following

"ಗೋಕಾಕ್ ಮಂದಿ"
"ಭಾಷೆ ಕನ್ನಡ ಭಾವನೆ ಕನ್ನಡಿಗ"
"HUSTLER"
Joined 25 April 2018


"ಗೋಕಾಕ್ ಮಂದಿ"
"ಭಾಷೆ ಕನ್ನಡ ಭಾವನೆ ಕನ್ನಡಿಗ"
"HUSTLER"
Joined 25 April 2018

"ಬದುಕು ನಶೆಯಾಗಿದ್ದರೆ
ತೇಲಬೇಡಿ,ಒಮ್ಮೆಲೆ ಮುಳುಗಿಬಿಡಿ"

-ಸಾಧ್ಯವೇ ಇಲ್ಲ
ಸೇರಲು ಶಿವ ಚರಣ
ಕಳೆದು ಹೋಗುವವರೆಗೆ
ಮನಕಂಟಿದ ಗ್ರಹಣ

-ಇದ್ದಂತೆ ಇರಲು
ಆರಾಮಾಗಿ ಬಿದ್ದಿರಲು ಸಹ
ಉಸಿರು ಏರಿಳಿಯಬೇಕಾಗುತ್ತದೆ

-ಬದುಕಿನ ಆಳ ತಿಳಿಯಬೇಕಾದರೆ
"ಮನದ ಮಹಲಿನ ತುತ್ತ ತುದಿಯಿಂದ ಒಮ್ಮೆ ಇಣುಕಿ"

-ಎಲ್ಲರಿಗೆ ಎಲ್ಲ ಕೊಟ್ಟು
ಎಲ್ಲ ಬಿಟ್ಟವನಂತೆ ನೀನು
ಬಿಟ್ಟು ಬಿಡದ ಜಗಕೆ ಒಳ್ಳೆಯದ ಬೆಸೆದು
ಕೆಟ್ಟದ್ದೆಲ್ಲ ಸುಟ್ಟವನಂತೆ ನೀನು

"ಶಿವ ನಿನ್ನಿಂದಲೇ ಆದಿ,ಶಿವ ನೀನೆ ಅಂತ್ಯ"

-ತೇಲುತಿದೆ ಮನಸು ಮೋಡಗಳ ಜೊತೆಗೂಡಿ
ಇದೇ ಮೊದಲು ಆಗುತಿದೆ ನನ್ನ ಕಣ್ಣಿಗೆ ಮೋಡಿ
ಕಣ್ಮುಚ್ಚಿ ಕುಳಿತು ಬಿಡುವಂತೆ
ಮೈಚಳಿ ಬಿಟ್ಟು ಕುಣಿಯುವಂತೆ
ಗಂಟಲು ಬಿಗಿಯುವಷ್ಟು ಕೂಗುವಂತೆ
ಕಣ್ಣು ಸಣ್ಣದಾಗುವವರೆಗೆ ದೃಷ್ಟಿ ಹಾಯಿಸುವಂತೆ
ಇದೇ ಪ್ರಕೃತಿಯೊಳಗೆ ತಣ್ಣಗೆ ಕರಗಿ ಹೋಗುವಂತೆ
ತೆಲುತಿದೆ ಮನಸು ಮೋಡಗಳ ಜೊತೆಗೂಡಿ
ಇದೇ ಮೊದಲು ಆಗುತಿದೆ ಹೊಸದೊಂದು ಮೋಡಿ

-ಮೋಡದೊಳ ಗೊಂದು ಮಾಯೆ
ಕಣ್ಣು ಹಾಯಿಸಿದಷ್ಟು ಅದರದೇ ಛಾಯೆ
ಹುಟ್ಟುತಿಹ ಸೂರ್ಯ ಮೋಡದ ಒಡಲೊಳಗೆ
ತೇಲಿದಂತೆ ಭಾಸವಾಗುತ್ತಿದೆ ನಿಸರ್ಗದ ಕಡಲೊಳಗೆ

-ಹಿಂದೆಂದೂ ನೋಡಿರದ ಸುಂದರ ತಾಣ
ಮುಸುಕಿದ ಮೋಡದೊಳಗೆ ಸಾಗುತಿದೆ ಯಾನ
ಭೂಮಿಯೊಡಲಿಂದ ಬರುವ ಸೂರ್ಯನ ಜೊತೆ
ತಂಗಾಳಿ ಸವಿಯುತ್ತ ಮನಸು ತಲ್ಲೀನ
-"ನಿನಗೆ ನಾನು,ನನಗೆ ನೀನು"

ಮೋಡ ಮುಸುಕಿದರೆ ನೆನಪಾಗುವೆ
ಮಳೆಯೊಡನೆ ಸೀದಾ ಎದೆಗಿಳಿಯುವೆ
ಹನಿ ಚೂರು ಹೆಚ್ಚಾದರೆ ಕಣ್ಣೀರು ಹರಿಸುವೆ
ಮಳೆ ನಿಂತು ಹೋದರೆ ಮೌನಕ್ಕೆ ಶರಣಾಗುವೆ

-ಬಹಳ ದಿನಗಳ ನಂತರ ಮತ್ತೆ ನಿನ್ನ ನೆನಪಾಗಿದೆ
ಮಾತು ಮಸಣ ಸೇರಿ ಮೌನ ಜೊತೆಯಾಗಿದೆ
ಮತ್ತೆ ಮತ್ತೆ ನೋಡುವ ಹುಡುಗಿ ಅವಳಲ್ಲದಿದ್ದರೂ
ಮೃತ್ಯುವಿಗೇಕೆ ಅವಳ ಮೇಲಷ್ಟು ಮೋಹ
ಅಲ್ಲಿಂದ ಇಲ್ಲಿಯರೆಗೆ,ಎದೆ ಮುಟ್ಟಿ ಹೇಳುವೆ
ಇನ್ನೂ ತೀರಿಲ್ಲ ನನ್ನ ಕಣ್ಣೀರ ದಾಹ

-


Fetching ವಿ ರಾ ಗಿ ಜೈನ್ Quotes