ಮಳೆ
ಓ ಮಳೆಯೇ ಸಾಕು ಮಾಡು ನಿನ್ನ ಆಟ
ಸ್ವಲ್ಪ ವಿರಾಮ ಕೊಡು ದುಡಿಯುವ ಕೈಗಳಿಗೆ
ಬಿಟ್ಟು ಬಿಡದೇ ದಿನವೂ ಕಾಡುತ್ತಿಯಲ್ಲ ನಿನಗೆ
ಸ್ವಲ್ಪವೂ ತಿಳಿಯುತ್ತಿಲ್ಲವಾ?ಜನಗಳ ಕಷ್ಟ
-
ಸರಳತೆಗೆ ಮತ್ತೊಂದು ಹೆಸರು ನೀವು
ನಗುವಿನ ರಾಜಕುಮಾರ ನೀವು
ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರು ಪ್ರೀತಿಸುವ ಕನ್ನಡದ ಏಕೈಕ ನಟ ನೀವು
ಅಭಿಮಾನಿಗಳ ಆರಾಧ್ಯ ದೈವ ನೀವು
ಕನ್ನಡದ ರಾಜರತ್ನ ನೀವು
ನಾ ಕಂಡ ದೇವತಾ ಮನುಷ್ಯ ನೀವು
ಇಂದಿಗೂ ಎಂದಿಗೂ ಕರ್ನಾಟಕ ಮರೆಯದ ಕನ್ನಡದ ಮಾಣಿಕ್ಯ ನೀವು
ನಿಮಗೆ ಜನ್ಮದಿನದ ಶುಭಾಶಯಗಳು ಅಪ್ಪು ಸರ್...........-
"ನೆನಪು"
ಕೆಲವರು ಹಾಗೇ ಬಂದು ಹಾಗೇ ನೆನಪಿನಿಂದ ಮಾಯವಾಗುತ್ತಾರೆ
ಮತ್ತೆ ಕೆಲವರು ಚಿರಕಾಲ ಶಾಶ್ವತವಾಗಿ ನೆನಪಿನಂಗಳದಲ್ಲಿ ಉಳಿಯುತ್ತಾರೆ-
"ಅಪ್ಪು ಸರ್ ಬಗ್ಗೆ ನನ್ನ ಮಾತು"
ಅಪ್ಪು ಸರ್ ನೀವು ಮೇರು ಶಿಖರ
ಆಡು ಮುಟ್ಟದ ಸೊಪ್ಪಿಲ್ಲ
ನಿಮ್ಮನ್ನು ಪ್ರೀತಿಸದವರು ಯಾರು ಇಲ್ಲ
ನಿಮ್ಮ ಪ್ರತಿಯೊಂದು ಮಾತು ನಮಗೆ ಸ್ಫೂರ್ತಿ
ನಿಮ್ಮ ಪ್ರತಿಯೊಂದು ಸಮಾಜ ಮುಖಿ ಕಾರ್ಯ ನಮಗೆ ಪ್ರೇರಣೆ
ನಿಮ್ಮ ನಡೆ ನುಡಿ ನಮಗೆ ಆದರ್ಶ
ನಿಮಗೆ ನೀವೇ ಸಾಟಿ ಸರ್
ನಿಮಗೆ ಸರಿ ಸಾಟಿ ಯಾರು ಇಲ್ಲ ಸರ್
ನೀವು ಎಂದಿಗೂ ಅಭಿಮಾನಿಗಳ ಹೃದಯಂಗಳದಲ್ಲಿ ಅಮರ ಅಜರಾಮರ ಸರ್-
"ಶಾಂತಿ ಸಾಗರ"
ಎಷ್ಟು ಚೆಂದ
ಎಷ್ಟು ಅಂದ
ನಮ್ಮ ಶಾಂತಿ ಸಾಗರ
ನೋಡಲು ಕಣ್ಣುಗಳಿಗೆ ಹಬ್ಬ
ಕಣ್ಣು ಹಾಯಿಸಿದಷ್ಟು ಎಲ್ಲೆಲ್ಲೂ ನೀರು
ನೋಡುಗರ ಕಣ್ಮನ ಸೆಳೆಯುವ ಪ್ರಕೃತಿ
ವಾವ್! ನಮ್ಮೂರ ಕೆರೆಗೆ ಮನಸೋಲದವರೇ ಇಲ್ಲ
ನಮ್ಮ ಶಾಂತಿ ಸಾಗರ ನಮ್ಮ ಹೆಮ್ಮೆ.................
-
"ಸ್ನೇಹದ ಸವಿ"
ಸಾವಿರಾರು ನೆನಪುಗಳು
ಖುಷಿಯ ವಿಚಾರಗಳು
ಸಣ್ಣ ಪುಟ್ಟ ಗಲಾಟೆಗಳು
ಪರಸ್ಪರ ವಿಚಾರ ವಿನಿಮಯಗಳು
ಅಬ್ಬಾ! ಈ ಸ್ನೇಹದ ಸವಿ ಬಲ್ಲವನಿಗೆ ಗೊತ್ತು
ಇದರ ಶುಚಿ ರುಚಿ
-
"ನಮ್ಮವರು"
ಒಳ್ಳೆಯವರು ನಮ್ಮವರೇ
ಕೆಟ್ಟವರು ನಮ್ಮವರೇ
ಬದುಕಿದ್ದಾಗ ಯಾರನ್ನು ದ್ವೇಷಿಸಬಾರದು
ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು
ಆಗ ನಮ್ಮನ್ನು ಎಲ್ಲರೂ ನಮ್ಮವರಂತೆ ಕಾಣುತ್ತಾರೆ............-
ನಾವು ಜಗತ್ತಿಗೆ ಪರಿಚಯವಾಗಬಾರದು
ನಮ್ಮನ್ನು ಜಗತ್ತು ಪರಿಚಯಿಸಬೇಕು
ಆಗ ನಮಗೊಂದು ಹೆಸರು.......
ಏನಂತೀರಾ?.....-
"ಸ್ನೇಹ"
ನಮ್ಮಿಬ್ಬರ ಸ್ನೇಹಕ್ಕೆ ಬೆಲೆ ಕಟ್ಟಲಾಗಲ್ಲ
ನಮ್ಮಿಬ್ಬರ ಸ್ನೇಹದಂತೆ ಬೇರೆ ಯಾವ ಸ್ನೇಹವಿಲ್ಲ
ನಮ್ಮ ಸ್ನೇಹದಲ್ಲಿ ಯಾವುದೇ ತಾರತಮ್ಯವಿಲ್ಲ
ನಮ್ಮಿಬ್ಬರ ಸ್ನೇಹ ಗುಡುಗು ಸಿಡಿಲಿನಂತೆ
ಭೀಕರ ಭಯಂಕರ..................
-