Neel   (ನೀಲಮೇಘಶ್ಯಾಮ)
1.3k Followers · 173 Following

read more
Joined 14 July 2018


read more
Joined 14 July 2018
9 HOURS AGO

ಕನ್ನಡಾ ಅಂದ್ರ ಮೋತಿ ಕಿಂಗರ ಮಾಡ್ತಾಳ, ಹಿಂದ್ಬಿದ್ದ ಸಖಿ ಅನ್ನಾಕಿ
"ನೀ ಹಂಗ ನೀ ಹಿಂಗ...", ಅರ್ಥಾಗುವಂಗ ಬರದದ್ದಕ್ಕ ನೆತ್ತಿ ಮ್ಯಾಲ ಕುಂತಿದ್ಲ
ಎಷ್ಟಂತ ತಡ್ಕೋಬೇಕ? ಇನ್ನಾಗುದುಲ್ಲ. ತೆಲಿ ಹಾಪ್ ಆಗೇತಿ ಹುಲೀದ.
ಶ್ಯಾಮ, ದಿನs ಚಂಜಿ ಆದ್ರ ಸಾಕ,  ಮುದ್ದಾಂ ಕನ್ನಡದಾಗ ಬರದ ಮಾರಿಗಿಡ್ತಾನ

-


27 APR AT 20:04

ಇಂದೇ ಕೊಂಡ ಹೊಸ ಲೆಕ್ಕಣಿಯೊಂದು ಬರೆಯುವುದೋ?
ತನ್ನ ಸಂಜೆಯ ಚಹಾದೊಟ್ಟಿಗೆ ಶ್ಯಾಮ ಬಿಡಿಸುವ
ಸುಡೊಕು ಡಬ್ಬಿಯ ಪಕ್ಕದ ಬಿಳಿ ಪಟ್ಟಿಯ ಮೇಲೆ
ಗೀಚಿ ನೋಡಿ, ನಗುವ ಹೆಸರು ನಿನ್ನದೇ ಸಖಿ!

-


26 APR AT 20:56

ಇನ್ಯಾರ ಹೆಸರಿಗೋ ಎರಡೇ ಎರಡಕ್ಷರ ಅರ್ಪಿಸಿದ್ದಕ್ಕೆ
ಎಂದೋ ವರ್ಷದ ಹಿಂದಿನ ಶ್ಯಾಮನ ಪ್ರೇಮ ವಿಲಾಪಕ್ಕೆ
ಇಂದು ಸಂಜೆ ಏಕಾಏಕಿ ಓಗೊಟ್ಟು, ಉತ್ತರವೂ ಬಂತಲ್ಲಾ!
ಹಳೇ ಪ್ರೀತಿಗೆ ಹೊಸ ಹೊಟ್ಟೆಕಿಚ್ಚೆ ಸಖಿ? ಹ್ಞ! ಇರಬಹುದು.

-


26 APR AT 16:03

Would it speak about
How it wanders everywhere
Yet, reaches nowhere?
How it has a relative in just about every thing
Yet, is mostly alone and lonely?
How it leads, follows, and accompanies
Yet, not counted as part of?
How it is just present, silently, always
Yet, not seen unless forcibly shone upon?

Or

Would it just stay quiet?
Quite quiet?
Die quiet?
In the lap of darkness?
In the shadows?

-


25 APR AT 21:42

ಬೆಲ್ಲದಚ್ಚಿಗೆ ಬರುವ ನೊಣ, ಸಕ್ಕರೆ ಡಬ್ಬಿಯೇರುವ ಕಪ್ಪಿರುವೆ
ನಿದ್ದೆಯೇರುವಷ್ಟರಲ್ಲಿ ಸೊಳ್ಳೆ ಹೇಳುವುದು "ನಾ ರಕ್ತ ಹೀರುವೆ"
ಸಂಜೆ ಹಾವು, ರಾತ್ರಿ ಚೇಳು, ದಿನವಿಡೀ ಜೇಡ, ಹಲ್ಲಿ,
ಸಖಿ! ಶ್ಯಾಮಗೆ ಮೂರು ಹೊತ್ತು ಹುಳ-ಪುಳಕ, ಝಳಿ-ಜಳಕ ಶುರುವೇ.

-


24 APR AT 22:07

ಸಂಜೆ ಮಾಳಿಗೆಯೇರಿದ್ದ ಶ್ಯಾಮನಿಗೆ ಮೋಡವೇ ಖುರ್ಚಿ
ಚಂದ್ರ ಬಂದ - ಕೆಂಪು ಗುಲಾಬಿ! ಶ್ಯಾಮ ಸೋತ
ಪದಗಳು ಹಿಂದು ಮುಂದಾಗಿ ಪೇಣಿಸಿಕೊಂಡವು.
ಚಂದ್ರ ಬೆಳ್ಳಗಾದ. ಶ್ಯಾಮ ಕೆಳಗಿಳಿದ. ನೀ ಚಂದ್ರ ಸಖಿ.

-


23 APR AT 20:50

ಸೌಮಿತ್ರ ಉಪಕಾರ ಸುಗ್ರೀವ ಭಾರಹರ
ಶ್ರೀರಾಮ ಪ್ರಿಯಕರ ಅಖಿಲಾಂಡ ಹಿತಕರ
ಅಂಶ ಶಿವಶಂಕರ ಇವನರಿಭಯಂಕರ, ಸಖಿ!
ಇದು, ಶ್ಯಾಮಸೋದರ ಹನುಮನುದಿಸಿದಾ ಸಂಜೆ!

-


22 APR AT 21:38

ಸಖಿ! ದಿನದ ಬಿಳುಪು, ರಾತ್ರಿಯ ಕಪ್ಪು,
ನಿರಂತರ ನಡೆಯುವ ಚದುರಂಗದಾಟ.
ಶ್ಯಾಮ ತನಗಾಗಿ ಉಳಿಸಿಕೊಳ್ಳಲು ಹೆಣಗುವ
ರಾಜರು - ಸುಸಿಲು - ಗೋಧೂಳಿ!

-


19 APR AT 21:06

ಮನೆಯ ದೀಪವೊಂದು ಇನ್ನಷ್ಟೇ
"ನೇಹ"ದಿ ಜಗ ಬೆಳಗಬೇಕಿತ್ತು ಸಖಿ!
ಜೀವಬತ್ತಿಯ ಕತ್ತರಿಸಿ ಸಂಜೆಗತ್ತಲು ತಂದವ
"ಪ್ರೇಮಿ" - ನಾಡದೊರೆಗಳ ನಿರ್ಣಯ!
ಕಟುಕನ ಹೆಸರು, ವ್ಯಂಗ್ಯ ನೋಡಿ,
ಫಯಾಜ್- "ಅತೀವ ದಯಾಮಯಿ" ಅಂತೆ
ಅವನನ್ನು 'ತೀರ್ಪಿನ ದಿನ'ದ ಸಾಲಿಗೆ
ದಯೆಯಿರದೆ ದೂಡಲಿ- ಕೋಟಿ ಶ್ಯಾಮರ ಬೇಡಿಕೆ

-


19 APR AT 16:25

The mind, the body

-


Fetching Neel Quotes