Venkatesh R Bander   (ವೆಂಕಟೇಶ ಬಂಡೇರ)
1.6k Followers · 5.4k Following

read more
Joined 22 March 2018


read more
Joined 22 March 2018
14 NOV 2022 AT 21:24

ಮಕ್ಕಳೆಂದರೆ ದೇವರು
ಕಷ್ಟಗಳ ಪಾಲಿಗೆ ತವರು
ಮಕ್ಕಳೆಂದರೆ ಬದುಕು
ಕಾಣದ ಮನ ಮುಸುಕು
ಮಕ್ಕಳೆಂದರೆ ಕಿರಣ
ಚೈತನ್ಯಕ್ಕೆ ರಾಮಬಾಣ
ಮಕ್ಕಳೆಂದರೆ ಸಂಗೀತ
ಆನಂದಕ್ಕೆ ಅನವರತ
ಮಕ್ಕಳೆಂದರೆ ನಿಸರ್ಗ
ಜೀವನಕ್ಕೆ ಸಗ್ಗ
ಮಕ್ಕಳೆಂದರೆ ವರ್ಣಿಸಲಸದಳ
ಹಾರೈಸುವೆ ಈ ಆಶಾಕುಸುಮಗಳ— % &

-


6 NOV 2022 AT 8:12

ನನ್ನಂತೆ ನೀನಾಗದ ನಿನ್ನಂತೆ ನಾನಾಗದ
ಅಹಂ ಆಭರಣಗಳ ಒಡೆಯರು ನಾವು. ತೋರಿಸುವ ಭರಾಟೆಯಲ್ಲಿ ನಡತೆಯ ನಡುನೀರಲ್ಲಿಟ್ಟರು ಗುಡ್ಡದೊಡೆಯಾ...!
ಮುಳಿಗೆದ್ದ ಅಹಮ್ಮಿಗೆ ಆಸರೆಯೆಲ್ಲಿ.— % &

-


26 OCT 2022 AT 22:30

ತಾನೇ ಬಣ್ಣ ಬಳೆದುಕೊಂಡ ಭಿತ್ತಿ
ನೋಡುಗರ ಕಣ್ಣಿಗೆ ಭೀತಿಗೊಂಡಿತ್ತು
ತನ್ನ ಬಣ್ಣಕ್ಕೋ? ನೋಡುಗರ ಕಣ್ಣಿಗೋ?
ಅಸ್ಪಷ್ಟ ಕಾರಣ ಗುಡ್ಡದೊಡೆಯಾ...
ಮುಗಿವ ಕೈ ಮೆಲ್ಛಾವಣಿ ಮುಟ್ಟೀತೆ.— % &

-


19 OCT 2022 AT 22:16

ಕನ್ನಡಿಯು ಹೇಳಿದ ಕಥೆಗಳೇ ಬದುಕಿಗೆ ಆಸರೆ
ಕನಸುಗಳು ಚೂರಾದರು ಮತ್ತೆ ಉಗಮಿಸುವ ಅದಮ್ಯ ಚೇತನಗಳಿಗೆ ನೀನೇ ಕಾರಣ ಗುಡ್ಡದೊಡೆಯಾ..!
ಕನ್ನಡಿ ಬಿಂಬದಲ್ಲಿ ನನ್ನ ಬಿಂಬಕ್ಕೆ ಇಂಬೆಲ್ಲಿ — % &

-


13 OCT 2022 AT 22:23

ಯೋಜಿಸಿ ಬದುಕಲು ಸಾಧ್ಯವೇ
ಯೋಚನೆಗಳು ಜೀವನಕ್ಕೆ ಮಾರಕವೇ
ಯೋಜನೆ ಮತ್ತು ಯೋಚನೆಗಳ ನಡುವಿರುವೆ
ಗುಡ್ಡದೊಡೆಯಾ...!
ಬೆಟ್ಟ ಹತ್ತುವ ಕಾಲಿಗೆ ಬರೆ ಏಕೆ?— % &

-


12 OCT 2022 AT 21:59

ಕೊಟ್ಟು ತಗೆದುಕೊಳ್ಳುವ ಜೀವನ,
ಕೆಟ್ಟ ತಗಾದೆಗಳದ್ದೇ ದರ್ಬಾರು.
ಕಾಡಿ ಬಂದ ಬೇಡಿಕೆಗಳನ್ನ ಬಂಧಿಸಿದೆ ಗುಡ್ಡದೊಡೆಯಾ..!
ಬಾಯಿಗೇಕೆ ಬೀಗುವ ಬಿಗುಮಾನ.
— % &

-


4 OCT 2022 AT 12:11

ಶಾಸ್ತ್ರಗಳನ್ನು ಜಪಿಸುವವನು
ಅಸ್ತ್ರಗಳನ್ನೂ ಪೂಜಿಸುವನು
ಸ್ಥಿತ ಪ್ರಜ್ಞಾಹೀನರಿಗೆ ಝಳಪಿಸಲೂ ಬಲ್ಲ
ಗುಡ್ಡದೊಡೆಯಾ..!
ನೆತ್ತರಿನೊಕುಳಿಗೆ ನಿನ್ನ ಹೆಸರೇಕೆ?
— % &

-


4 JUN 2022 AT 23:31

ಅನುಕೂಲಿಸಿ ನಕ್ಕುಬಿಡು
ಇಲ್ಲವೇ ಅತ್ತುಬಿಡು
ಎರಡೂ ಆಗದಿದ್ದರೆ ಉಸಿರು ಬಿಡು

ತಪ್ ತಿಳಿಬೇಡಿ
ನಾ ಹೇಳಿದ್ದು
ಬಾಬಾ ರಾಮದೇವನ ತರಾ 😅😅😅— % &

-


31 MAY 2022 AT 21:55

ಹೊಣೆ ಹೊತ್ತಂತೆ
ಹಣೆಯ ಗೆರೆಗಳು
ಸುಕ್ಕು ಗಟ್ಟಿವೆ.
ಅಡಗಿಸಿದ
ಆಸೆಯ ಬುತ್ತಿಗೀಗ
ಆಸರೆ ಯಾರು?— % &

-


8 MAY 2022 AT 0:23

ನಿನ್ನ ಚಿತ್ರಿಸಿ
ಬಣ್ಣ ಲೇಪಿಸಿದೆ
ಆಗಾಗ ಮಾಸಿದಂತೆ..
ಅಂದವೇನೋ ಹೆಚ್ಚಾಯಿತು
ಕೈ ಬಲ ಹೆಚ್ಚಿಸಿ
ಮತ್ತೆ ಮತ್ತೆ ಹಚ್ಚಿದಂತೆ
ಕುಂಚ ನುಚ್ಚು ನೂರಾಯಿತು.
— % &

-


Fetching Venkatesh R Bander Quotes